ಹಳೇ ಧ್ವೇಷ…ಯುವಕನಿಗೆ ಹಲ್ಲೆ…ವಿಡಿಯೋ ವೈರಲ್…
- Crime
- December 14, 2022
- No Comment
- 126
ಕೋಲಾರ,ಡಿ14,Tv10 ಕನ್ನಡ
ಹಳೇ ವೈಷಮ್ಯ ಹಿನ್ನೆಲೆ ಯುವಕನ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ
ಕೋಲಾರ ನಗರದ ಬಂಗಾರಪೇಟೆ ವೃತ್ತದ ಬಳಿ ನಡೆದಿದೆ.
ಶ್ರೀನಿವಾಸಪುರ ತಾಲ್ಲೂಕಿನ ಮೂಲದ ಮುನೇಂದ್ರ ಎಂಬಾತನಿಗೆ ಥಳಿಸಲಾಗಿದೆ.
ಕೋಲಾರ ತಾಲೂಕಿನ ಶಿಳ್ಳೆಂಗೆರೆ ಗ್ರಾಮದ ಪ್ರವೀಣ್, ಕೋಲಾರ ನಗರದ ಕಾರಂಜಿ ಕಟ್ಟೆ ಚಂದು, ಕೀಲುಕೋಟೆ ಚೇತು ಅಂಡ್ ಗ್ಯಾಂಗ್ ಹಲ್ಲೆ ನಡೆಸಿದ್ದಾರೆ.
ಹಳೇ ವೈಷಮ್ಯದ ಹಿನ್ನೆಲೆ ಮಾಡಿರುವ ಯುವಕರ ಗುಂಪು ಹಲ್ಲೆ ನಡೆಸಿದೆ ಎನ್ನಲಾಗಿದೆ.
ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ.
ಅರೋಪಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಒತ್ತಾಯಿಸಿದ್ದಾರೆ.
ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…