ಬನ್ನೂರಿನಲ್ಲಿ ನಿಲ್ಲದ ಚಿರತೆ ಹಾವಳಿ…ಗ್ರಾಮಸ್ಥ ಮಹಿಳೆ ಎದುರೇ ಆಡುಮರಿಯನ್ನ ಎಳೆದೊಯ್ದ ಚಿರತೆ…
- CrimeMysore
- December 14, 2022
- No Comment
- 171
ಬನ್ನೂರು,ಡಿ14,Tv10 ಕನ್ನಡ
ಬನ್ನೂರಿನಲ್ಲಿ ಇನ್ನೂ ಚಿರತೆ ಹಾವಳಿಗೆ ಬ್ರೇಕ್ ಬಿದ್ದಿಲ್ಲ.ಅರಣ್ಯಾಧಿಕಾರಿಗಳಿಗೆ ಚೆಳ್ಳೆಹಣ್ಣು ತಿನ್ನಿಸುತ್ತಿರುವ ಚಿರತೆ ಸಾಕು ಪ್ರಾಣಿಗಳನ್ನ ಬಲಿ ಪಢಯುತ್ತಿದೆ.ಒಂದೆಡೆ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದ್ದರೆ ಮತ್ತೊಂದೆಡೆ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿದೆ. ಬನ್ನೂರಿನ ಯಾಚೇನಹಳ್ಳಿ ಗ್ರಾಮದಲ್ಲಿ ಮಹಿಳೆಯೊಬ್ಬರ ಎದುರಲ್ಲೇ ಆಡು ಮರಿಯನ್ನ ಎಳೆದೊಯ್ದಿದೆ. ಶಿವಮಲ್ಲೇಗೌಡರ ಪತ್ನಿ ಸೌಭಾಗ್ಯರವರು ಆಡು ಮೇಯಿಸುತ್ತಿದ್ದಾಗ ಮಧ್ಯಾಹ್ನ 3 ಗಂಟೆಯಲ್ಲಿ ಚಿರತೆಯು ಆಡುಗಳ ಮೇಲೆ ದಾಳಿಮಾಡಿ ಒಂದು ಆಡುಮರಿಯನ್ನು ಕಬ್ಬಿನ ಗದ್ದೆ ಒಳಗೆ ಎಳೆದುಕೊಂಡು ಹೋಗಿದೆ. ಮಾಹಿತಿ ಅರಿತ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ.ಘಟನೆ ನಡೆದ ಸ್ಥಳದಲ್ಲಿ ಬೀಡು ಬಿಟ್ಟಿದ್ದು ಚಿರತೆ ಸೆರೆಗೆ ಮುಂದಾಗಿದ್ದಾರೆ…