
ವೇಶ್ಯಾವಟಿಕೆ ಆರೋಪ…ಸ್ಪಾ ಮೇಲೆ ವಿಜಯನಗರ ಪೊಲೀಸರ ದಾಳಿ…ಇಬ್ಬರ ಬಂಧನ…
- CrimeMysore
- December 14, 2022
- No Comment
- 198
ಮೈಸೂರು,ಡಿ14,Tv10 ಕನ್ನಡ
ಸ್ಪಾ ಹೆಸರಿನಲ್ಲಿ ವೇಶ್ಯಾವಟಿಕೆ ನಡೆಸುತ್ತಿದ್ದ ಕೇಂದ್ರದ ಮೇಲೆ ವಿಜಯನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.ವೇಶ್ಯಾವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಓರ್ವ ಮಹಿಳೆ ಹಾಗೂ ಓರ್ವ ಪುರುಷನನ್ನ ಬಂಧಿಸಿದ್ದಾರೆ.ವಿಜಯನಗರ ಎರಡನೇ ಹಂತ ವಾಟರ್ ಟ್ಯಾಂಕ್ ಬಳಿಯ ಅಭಿಷೇಕ್ ರಸ್ತೆಯಲ್ಲಿರುವ ಹನಿವೆಲ್ ಸ್ಪಾ ಕೇಂದ್ರದ ಮೇಲೆ ದಾಳಿ ನಡೆಸಲಾಗಿದೆ.ಖಚಿತ ವರ್ತಮಾನದ ಮೇರೆಗೆ ವಿಜಯನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಂಧಿತರನ್ನ ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ…