ಪ್ರೇಯಸಿಯನ್ನ ಕೊಂದು ಕಬ್ಬಿನಗದ್ದೆಯಲ್ಲಿ ಹೂತುಹಾಕಿದ ಪ್ರಿಯಕರ…ಕಾರಣ ಏನು ಗೊತ್ತಾ…?

ಪ್ರೇಯಸಿಯನ್ನ ಕೊಂದು ಕಬ್ಬಿನಗದ್ದೆಯಲ್ಲಿ ಹೂತುಹಾಕಿದ ಪ್ರಿಯಕರ…ಕಾರಣ ಏನು ಗೊತ್ತಾ…?

ಪ್ರೇಯಸಿಯನ್ನ ಕೊಂದು ಕಬ್ಬಿನಗದ್ದೆಯಲ್ಲಿ ಹೂತುಹಾಕಿದ ಪ್ರಿಯಕರ…ಕಾರಣ ಏನು ಗೊತ್ತಾ…?

ಹಾಸನ,ಡಿ14,Tv10 ಕನ್ನಡ
ಪ್ರೇಯಸಿಯ ಶವವನ್ನು ಪ್ರೀಯಕರನೇ ಕಬ್ಬಿನ ಗದ್ದೆಯಲ್ಲಿ ಹೂತು ಹಾಕಿರುವ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಪಾರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.‌ ಕಾವ್ಯ (25) ಮೃತಪಟ್ಟ ಯುವತಿಯಾಗಿದ್ದು, ಕಾವ್ಯಳನ್ನು ಕೊಲೆ ಮಾಡಿ ಹೂತು ಹಾಕಿದ ಪ್ರಿಯಕರ ಅವಿನಾಶ್ ಪೊಲೀಸರ ಅತಿಥಿಯಾಗಿದ್ದಾನೆ.ಅವಿನಾಶ್ ವಿರುದ್ಧ ಪೋಷಕರು ಕೊಲೆ ಆರೋಪ ಮಾಡುದ್ದಾರೆ. ಅವಿನಾಶ್‌ನನ್ನು ವಶಕ್ಕೆ ಪಡೆದಿರುವ ಹೊಳೆನರಸೀಪುರ ನಗರ ಠಾಣೆ ಪೊಲೀಸರು ತಹಸೀಲ್ದಾರ್ ಕೃಷ್ಣಮೂರ್ತಿ ಸಮ್ಮುಖದಲ್ಲಿ ಹೂತಿದ್ದ ಶವವನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಹಾಸನ ಜಿಲ್ಕೆ ಅರಕಲಗೂಡು ತಾಲ್ಲೂಕಿನ ಮುದ್ಲಾಪುರ ಗ್ರಾಮದ ಕಲ್ಪನಾ ಎಂಬುವವರ ಪುತ್ರಿ ಕಾವ್ಯ ಒಂದುವರೆ ವರ್ಷವಿರುವಾಗಲೇ ತಂದೆಯನ್ನು ಕಳೆದುಕೊಂಡಿದ್ದಳು. ನಂತರ ದೊಡ್ಡಮ್ಮನ ಮನೆಯಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡಿದ್ದಳು. ಬಿಬಿಎಂ ಓದಿದ್ದ ಕಾವ್ಯ ಅಕ್ಷಯ್ ಎಂಬುವವನ್ನು ಪ್ರೀತಿಸಿ ವಿವಾಹವಾಗಿದ್ದಳು. ಈ ವಿಷಯವನ್ನು ತಾಯಿಯ ಬಳಿವೂ ಹೇಳಿರಲಿಲ್ಲ.‌ ಮದುವೆಯಾದ ಕೆಲವೇ ತಿಂಗಳಲ್ಲಿ ಸಂಸಾರದಲ್ಲಿ ಹೊಂದಾಣಿಕೆ ಬಾರದ ಕಾರಣ ಪೊಲೀಸ್ ಠಾಣೆಗೆ ದೂರು ನೀಡಿ ಅಕ್ಷಯ್ ಜೊತೆ ವಿವಾಹ ಸಂಬಂಧ ಮುರಿದುಕೊಂಡಿದ್ದಳು.‌ ಈ ವಿಚಾರವನ್ನು ಕೂಡ ತನ್ನ ತಾಯಿಯಿಂದ ಮುಚ್ಚಿಟ್ಟಿದ್ದಳು. ನಂತರ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಳು.‌ ಬೆಂಗಳೂರಿನಲ್ಲಿ‌ ಕೆಲ ತಿಂಗಳುಗಳ ಕಾಲ ಕೆಲಸ ಮಾಡಿದ ಕಾವ್ಯ ನಂತರ ಹಾಸನಕ್ಕೆ ವಾಪಾಸ್ಸಾಗಿದ್ದಳು. ಹೊಳೆನರಸೀಪುರ ತಾಲ್ಲೂಕಿನ, ಪಾರಸನಹಳ್ಳಿ ಗ್ರಾಮದ ಅವಿನಾಶ್‌ನನ್ನು ಪ್ರೀತಿಸುತ್ತಿದ್ದಳು. ಕಳೆದ ಎರಡು ವರ್ಷಗಳಿಂದ ಅವಿನಾಶ್ ಮನೆಯಲ್ಲಿಯೇ ವಾಸವಿದ್ದಳು.‌ ತಾಯಿಯ ಬಳಿ ನಾನು ಬೆಂಗಳೂರಿನಲ್ಲೇ ಇರುವುದಾಗಿ ಹೇಳಿದ್ದಳು. ಕಳೆದ ಒಂದು ತಿಂಗಳಿನಿಂದ ತಾಯಿಯ ಬಳಿ ಫೋನ್‌ನಲ್ಲಿ ಮಾತನಾಡದೆ ವಾಯ್ಸ್ ಮೆಸೇಜ್ ಕಳುಹಿಸುತ್ತಿದ್ದಳು. ಕಳೆದ ಇಪ್ಪತ್ತು ದಿನಗಳಿಂದ ಕಾವ್ಯ ತನ್ನ ತಾಯಿಗೆ ಫೋನ್ ಮಾಡಿರಲಿಲ್ಲ. ಅವಳ ಫೋನ್ ಕೂಡ ಸ್ವಿಚ್ ಆಫ್ ಬರುತ್ತಿತ್ತು. ಇದರಿಂದ ಕಾವ್ಯಳ ಪೋಷಕರು ಆತಂಕಗೊಂಡಿದ್ದರು. ನಂತರ ಕಲ್ಪನಾ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬರು ಫೋನ್ ಮಾಡಿ‌ ನಿಮ್ಮ ಮಗಳನ್ನು ಹೂತು ಹಾಕಿದ್ದಾರೆ ಎಂದು ಗ್ರಾಮದಲ್ಲಿ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದರು. ನಂತರ ಮಗಳು ಕಾಣಿಯಾಗಿರುವ ಬಗ್ಗೆ ಕಲ್ಪನಾ ಹೊಳೆನರಸೀಪುರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಅವಿನಾಶ್‌ನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಕಬ್ಬಿನಗದ್ದೆಯಲ್ಲಿ ಹೂತು ಹಾಕಿರುವುದು ಬೆಳಕಿಗೆ ಬಂದಿದೆ. ಅವಿನಾಶ್ ಹಾಗೂ ಆತನ ಪೋಷಕರೇ ನನ್ನ ಮಗಳನ್ನು ಕೊಲೆ ಮಾಡಿ ಹೂತು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.ತನನ್ನು ಮದುವೆ ಆಗುವಂತೆ ಕಾವ್ಯಾ ಅವಿನಾಶ್ ನನ್ನು ಪೀಡಿಸುತ್ತಿದ್ದಳೆಂದು ತಿಳಿದುಬಂದಿದ್ದು ಈ ಹಿನ್ನಲೆ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಕಾವ್ಯಾಳದ್ದು ಕೊಲೆಯೋ‌ ಅಥವಾ ಆತ್ಮಹತ್ಯೆಯೋ ಎಂಬುದರ ಬಗ್ಗೆ ತಿಳಿಯಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ…

Spread the love

Related post

ಆರ್.ಟಿ.ಐ.ಮಾಹಿತಿ ಪತ್ರಿಕೆ ಅಸ್ತಿತ್ವಕ್ಕೆ…ಭಾಷ್ಯಂ ಸ್ವಾಮೀಜಿ ರವರಿಂದ ಬಿಡುಗಡೆ…

ಆರ್.ಟಿ.ಐ.ಮಾಹಿತಿ ಪತ್ರಿಕೆ ಅಸ್ತಿತ್ವಕ್ಕೆ…ಭಾಷ್ಯಂ ಸ್ವಾಮೀಜಿ ರವರಿಂದ ಬಿಡುಗಡೆ…

ಮೈಸೂರು,ಜು7,Tv10 ಕನ್ನಡ ಮೈಸೂರಿನ ಯೋಗನರಸಿಂಹ ಸ್ವಾಮಿ ದೇವಾಲಯದಲ್ಲಿ ಇಂದು ಆರ್.ಟಿ.ಐ.ಮಾಹಿತಿ ಪತ್ರಿಕೆ ಬಿಡುಗಡೆ ಮಾಡಲಾಯಿತು.ದೇವಾಲಯದ ಸಂಸ್ಥಾಪಕರಾದ ಪ್ರೊ.ಭಾಷ್ಯಂ ಸ್ವಾಮೀಜಿ ರವರು ಬಿಡುಗಡೆ ಮಾಡಿದರು.ಈ ವೇಳೆ ದೇವಸ್ಥಾನದ ಆಡಳಿತಾಧಿಕಾರಿ ಶ್ರೀನಿವಾಸ್…
ಮಹಿಳೆ ಬಗ್ಗೆ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್…ಅಪ್ ಲೋಡ್ ಮಾಡಿದ ಮಹಿಳೆ ಮೇಲೆ FIR…

ಮಹಿಳೆ ಬಗ್ಗೆ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್…ಅಪ್ ಲೋಡ್ ಮಾಡಿದ…

ಮೈಸೂರು,ಜು6,Tv10 ಕನ್ನಡ ಖಾಸಗಿ ಕಂಪನಿ ಉದ್ಯೋಗಿ ಬಗ್ಗೆ ಅಸಭ್ಯ ಹಾಗೂ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಹಿಳೆಯೊಬ್ಬರ ಮೇಲೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕ್ರಾಪಿನ್ ಕಂಪನಿಗೆ ಸೇರಿದ…
ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ…

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ…

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ… ಮೈಸೂರು,ಜು6,Tv10 ಕನ್ನಡ ಹುಚ್ಚುನಾಯಿ ಕಡಿತದಿಂದ ಮೃತಪಟ್ಟ ಮಹಾಲಿಂಗೇಶ್ವರ ದೇವಸ್ಥಾನದ ಬಸವನಿಗೆ ಮೇಟಗಳ್ಳಿ ಗ್ರಾಮಸ್ಥರು ಶ್ರದ್ದಾಂಜಲಿ ಅರ್ಪಿಸಿದ್ದಾರೆ.ಕೆಲವು…

Leave a Reply

Your email address will not be published. Required fields are marked *