• December 15, 2022

ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡ ಆರೋಪಿ ಶವವಾಗಿ ಪತ್ತೆ…ಸ್ವಂತ ಮಗನನ್ನೇ ಕೊಂದ ಆರೋಪ ಹೊತ್ತಿದ್ದ ಮೃತ…

ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡ ಆರೋಪಿ ಶವವಾಗಿ ಪತ್ತೆ…ಸ್ವಂತ ಮಗನನ್ನೇ ಕೊಂದ ಆರೋಪ ಹೊತ್ತಿದ್ದ ಮೃತ…

ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡ ಆರೋಪಿ ಶವವಾಗಿ ಪತ್ತೆ…ಸ್ವಂತ ಮಗನನ್ನೇ ಕೊಂದ ಆರೋಪ ಹೊತ್ತಿದ್ದ ಮೃತ…

ಬನ್ನೂರು,ಡಿ15,Tv10 ಕನ್ನಡ
ಠಾಣೆಯಿಂದ ತಪ್ಪಿಸಿಕೊಂಡು ಬಂದಿದ್ದ ಆರೋಪಿ ಶವವಾಗಿ ಪತ್ತೆಯಾದ ಘಟನೆ ಬನ್ನೂರಿನ ಹುನುಗನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.ಮಗನ ಅನುಮಾನಾಸ್ಪದ ಸಾವಿನ ವಿಚಾರಣೆ ಎದುರಿಸುತ್ತಿದ್ದ ಆರೋಪಿ ಜಮೀನೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.ಮಹದೇವ ಮೃತ ದುರ್ದೈವಿ.ಹುನಗನಹಳ್ಳಿ ನಿವಾಸಿ ಮಹದೇವ ಹುಣಸೂರಿನ ಶ್ವೇತ ಎಂಬಾಕೆಯನ್ನ ಪ್ರೀತಿಸಿ ಮದುವೆಯಾಗಿದ್ದರು.ದಂಪತಿಗೆ ಸಮರ್ಥ್ ಎಂಬ ಮೂರು ವರ್ಷದ ಮಗು ಇತ್ತು.ಬನ್ನೂರಿನ ನೀರಳ್ಳದ ಸಮೀಪದ ತೋಡವೊಂದರಲ್ಲಿ ದಂಪತಿ ಕೆಲಸ ಮಾಡಿಕೊಂಡಿದ್ದರು.ಡಿ.11 ಸಮರ್ಥ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಮಹದೇವ ಹಾಗೂ ಶ್ವೇತ ಮೇಲೆ ಶಂಕೆ ವ್ಯಕ್ತವಾಗಿ ಸಮರ್ಥ್ ಅಜ್ಜಿ ವರುಣಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.ವಿಚಾರಣೆಗಾಗಿ ವರುಣಾ ಪೊಲೀಸರು ಮಹದೇವ ಹಾಗೂ ಶ್ವೇತಾಳನ್ನ ವಶಕ್ಕೆ ಪಡೆದಿದ್ದರು.ವಿಚಾರಣೆ ಎದುರಿಸುತ್ತಿದ್ದ ಮಹದೇವ ವರುಣ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡಿದ್ದ.ಮರುದಿನ ಹುನುಗನಹಳ್ಳಿಗೆ ಬಂದು ಪತ್ನಿಯನ್ನ ವಿಚಾರಣೆ ನಡೆಸಿದ್ದ ಪೊಲೀಸರು ಬಿಟ್ಟು ಕಳಿಸಿದ್ದರು.ಠಾಣೆಯಿಂದ ತಪ್ಪಿಸಿಕೊಂಡು ಬಂದಿದ್ದ ಮಹದೇವ ಪತ್ನಿ ಜೊತೆ ಪರಾರಿಯಾಗಲು ಯತ್ನಿಸಿದ್ದ. ವರುಣಾ ಠಾಣೆ ಪೊಲೀಸರು ಬಂಧಿಸುತ್ತಾರೆ ಎಂಬ ಭೀತಿಯಿಂದ ಮನೆಯಿಂದ ಓಡಿ ಹೋಗಿದ್ದ.ಇಂದು ಬೆಳಿಗ್ಗೆ ಮಹದೇವ ಎಂಬುವರ ಜಮೀನಿನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.ಠಾಣೆಯಿಂದ ತಪ್ಪಿಸಿಕೊಂಡು ಬಂದ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟಿದ್ದು ಸೂಕ್ತ ತನಿಖೆ ನಡೆಸಬೇಕೆಂದು ಮಹದೇವ ತಾಯಿ ಬನ್ನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ವಿಚಾರಣೆ ಎದುರಿಸುತ್ತಿದ್ದ ವ್ಯಕ್ತಿ ಠಾಣೆಯಿಂದ ತಪ್ಪಿಸಿಕೊಂಡ ಬಂದಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ…

Spread the love

Leave a Reply

Your email address will not be published.