ಮೈಸೂರಿನ ರೌಡಿಶೀಟರ್ RX ಮನು ಗಡಿಪಾರು…ರೌಡಿಗಳಿಗೆ ಖಾಕಿಯಿಂದ ಎಚ್ಚರಿಕೆ ಗಂಟೆ ರವಾನೆ…

ಮೈಸೂರಿನ ರೌಡಿಶೀಟರ್ RX ಮನು ಗಡಿಪಾರು…ರೌಡಿಗಳಿಗೆ ಖಾಕಿಯಿಂದ ಎಚ್ಚರಿಕೆ ಗಂಟೆ ರವಾನೆ…

ಮೈಸೂರಿನ ರೌಡಿಶೀಟರ್ RX ಮನು ಗಡಿಪಾರು…ರೌಡಿಗಳಿಗೆ ಖಾಕಿಯಿಂದ ಎಚ್ಚರಿಕೆ ಗಂಟೆ ರವಾನೆ…

ಮೈಸೂರು,ಡಿ15,Tv10 ಕನ್ನಡ


ಬನ್ನಿಮಂಟಪ ಹುಡ್ಕೋ ಬಡಾವಣೆಯ ರೌಡಿ ಶೀಟರ್ ಮನೋಜ್ ಕುಮಾರ್ @ RX ಮನು ಗಡಿಪಾರಾಗಿದ್ದಾನೆ.ರೌಡಿ ಚಟುವಟಿಕೆಗಳಲ್ಲಿ ಹೆಚ್ಚು ಭಾಗಿಯಾಗುತ್ತಿರುವ ಹಿನ್ನಲೆ ಹಲವು ಕೇಸ್ ಗಳು ಈತನ ಮೇಲಿರುವ ಕಾರಣ ಗಡೀಪಾರು ಮಾಡಲಾಗಿದೆ. ರೌಡಿಗಳಿಗೆ ಎಚ್ಚರಿಕೆ ಗಂಟೆ ರವಾನಿಸಿರುವ ಮೈಸೂರು ಪೊಲೀಸರು ಗಡೀಪಾರು ಮಾಡಿ ಆದೇಶ ಹೊರಡಿಸಿದ್ದಾರೆ.ಮೈಸೂರು ನಗರ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಪ್ರದೀಪ್ ಘುಂಟಿ ರವರ ಆದೇಶದ ಮೇರೆಗೆ ನರಸಿಂಹರಾಜ ಠಾಣೆ ಪೊಲೀಸರು ಗಡೀಪಾರು ಆದೇಶ ಜಾರಿಗೊಳಿಸಿದ್ದಾರೆ. ಒಂದು ತಿಂಗಳ ಕಾಲ ಮನು ಗಡಿಪಾರು ಶಿಕ್ಷೆ ಅನುಭವಿಸಬೇಕಿದೆ.

RX ಮನು ಹಿನ್ನೆಲೆ

ಬನ್ನಿಮಂಟಪ ಹುಡ್ಕೋ ಬಡಾವಣೆಯ ನಿವಾಸಿಯಾದ ರೌಡಿ ಶೀಟರ್ ಮನೋಜ್ ಕುಮಾರ್ @ RX ಮನು ರೌಡಿ ಚಟುವಟಿಕೆ ಯಲ್ಲಿ ಕಂಡು ಬರುತ್ತಿದ್ದು ಈತನ ಮೇಲೆ ಮೈಸೂರಿನ ನರಸಿಂಹರಾಜ, ಲಷ್ಕರ್, ವಿಜಯನಗರ, ಮಂಡಿ, ಲಕ್ಷ್ಮಿಪುರಂ, ಜಯಲಕ್ಷ್ಮಿ ಪುರಂ, ಪೊಲೀಸ್ ಠಾಣೆಗಳಲ್ಲಿ ಹಲ್ಲೆ, ತೀವ್ರ ಹಲ್ಲೆ, ಕೊಲೆಯತ್ನ ಕೇಸುಗಳು ದಾಖಲಾಗಿವೆ.

ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಬಿ.ರಮೇಶ್ ರವರು ಅಧಿಕಾರ ವಹಿಸಿಕೊಂಡಾಗಿನಿಂದ ರೌಡಿ ಚಟುವಟಿಕೆ ಹತ್ತಿಕ್ಕುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ತೀವ್ರ ಗೊಳಿಸಿದ್ದಾರೆ. ಪ್ರತಿದಿನ ನಗರದಾದ್ಯಂತ ವಿಶೇಷ ತಪಾಸಣಾ ಅಭಿಯಾನ ನಡೆಸಿ ವಾಹಗಳಲ್ಲಿ ಲಾಂಗ್, ಮಚ್ಚು, ಡ್ರ್ಯಾಗಾರ್ ಇತ್ಯಾದಿ ಮಾರಕಾಸ್ತ್ರ ಗಳನ್ನು ತಮ್ಮ ವಾಹನ ಗಳಲ್ಲಿ ಇಟ್ಟು ಕೊಂಡು ಓಡಾಡುವ ವ್ಯಕ್ತಿಗಳ ನ್ನು ಪತ್ತೆ ಮಾಡಿ ಕ್ರಮ ವಹಿಸುತ್ತಿದ್ದಾರೆ.ರಾತ್ರಿ ಸಮಯದಲ್ಲಿ ನಗರ ಪ್ರವೇಶಿಸುವ ಪ್ರತಿ ವಾಹನಗಳನ್ನ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡಲಾಗುತ್ತಿದೆ.ನಗರದಲ್ಲಿ ಕಟ್ಟೆಚ್ಚರ ವಹಿಸಿದ್ದು ರಾತ್ರಿಗಸ್ತು ತೀವ್ರ ಗೊಳಿಸಲಾಗಿದೆ. ಇತ್ತೀಚೆಗೆ ರೌಡಿ ಆಸಾಮಿಗಳ ಮನೆಗಳ ಮೇಲೆ ದಾಳಿ ಮಾಡಿ ಮಾರಕಾಸ್ತ್ರ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ನಗರ ಪೊಲೀಸ್ ಆಯುಕ್ತ ಬಿ. ರಮೇಶ್ ರವರು ನಗರದ ಜನರ ಸುರಕ್ಷತೆ ಹಾಗೂ ಹಿತ ದೃಷ್ಟಿಯಿಂದ ಅನೇಕ ಕ್ರಮ ಕೈಗೊಳ್ಳುತ್ತಿದ್ದಾರೆ. ಈಗ ನಗರದ ಅತೀ ಚಟುವಟಿಕೆಯ ರೌಡಿ ಆಸಾಮಿಗಳನ್ನು ಡಿಸಿಪಿ ಪ್ರದೀಪ್ ಗುಂಟಿ IPS ರವರಿಗೆ ಸೂಚನೆ ನೀಡಿ ಗಡಿಪಾರು ಆದೇಶ ಮಾಡಿ ರೌಡಿಸಂ ಹತ್ತಿಕ್ಕುವ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.ಮುಂದಿನ ದಿನಗಳಲ್ಲಿ ಮತ್ತಷ್ಟು ರೌಡಿಗಳಿಗೆ ಶಾಕ್ ಕೊಡಲಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *