
ಬನ್ನೂರಿನಲ್ಲಿ ಮತ್ತೆ ಚಿರತೆ ದಾಳಿ…ಯುವಕನಿಗೆ ಗಾಯ…ಪ್ರಾಣಾಪಾಯದಿಂದ ಪಾರು…
- CrimeMysore
- December 18, 2022
- No Comment
- 118

ಬನ್ನೂರಿನಲ್ಲಿ ಮತ್ತೆ ಚಿರತೆ ದಾಳಿ…ಯುವಕನಿಗೆ ಗಾಯ…ಪ್ರಾಣಾಪಾಯದಿಂದ ಪಾರು…
ಬನ್ನೂರು,ಡಿ18,Tv10 ಕನ್ನಡ
ಬನ್ನೂರಿನಲ್ಲಿ ಮತ್ತೆ ಚಿರತೆ ಅಟ್ಟಹಾಸ ತೋರಿಸಿದೆ.ಯುವಜನ ಮೇಲೆ ದಾಳಿ ನಡೆಸಿದ ಘಟನೆ ಬನ್ನೂರಿನ ನುಗ್ಗಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.ಸತೀಶ್ ಎಂಬಾತನ ಮೇಲೆ ಎರಗಿದ ಚಿರತೆ ಗಾಯಗೊಳಿಸಿದೆ.ತನ್ನ ಜಮೀನಿನತ್ತ ಸಾಗುತ್ತಿದ್ದ ವೇಳೆ ದಾಳಿ ನಡೆಸಿದೆ.ತನ್ನ ಬಳಿ ಇದ್ದ ಮೊಬೈಲ್ ಮೂಲಕ ಚಿರತೆಗೆ ಹೊಡೆದು ಸತೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಗಾಯಗೊಂಡ ಸತೀಶ್ ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ…