
ಸಿಸಿಬಿ ಪೊಲೀಸರ ಕಾರ್ಯಾಚರಣೆ…ಇಬ್ಬರು ಪೆಡ್ಲರ್ ಗಳ ಬಂಧನ…ವಕೀಲನೂ ಆರೋಪಿ…
- CrimeMysore
- December 26, 2022
- No Comment
- 142

ಸಿಸಿಬಿ ಪೊಲೀಸರ ಕಾರ್ಯಾಚರಣೆ…ಇಬ್ಬರು ಪೆಡ್ಲರ್ ಗಳ ಬಂಧನ…ವಕೀಲನೂ ಆರೋಪಿ…
ಮೈಸೂರು,ಡಿ26,Tv10 ಕನ್ನಡ
ಕಾನೂನು ಪಾಲಿಸಬೇಕಾದ ವಕೀಲನೇ ಅಕ್ರಮ ದಾರಿಗೆ ಇಳಿದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.ಕಾನೂನು ವಿಧ್ಯಾರ್ಥಿಯೊಂದಿಗೆ ಸೇರಿ ಡ್ರಗ್ಸ್ ಮಾರಾಟ ಮಾಡುವ ವೇಳೆ ಸಿಸಿಬಿ ಪೊಲೀಸರಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.ಇಬ್ಬರು ಆರೋಪಿಗಳಿಂದ ಸಿಸಿಬಿ ಪೊಲೀಸರು 31 ಗ್ರಾಂ ತೂಕದ MDMA/ECSTASY TABLETS & ISD drugs ಹಾಗೂ 5 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ.ಕುವೆಂಪುನಗರ ಜೆ ಬ್ಲಾಕ್ ನಲ್ಲಿ ಬೈಕ್ ನಲ್ಲಿ ಕುಳಿತ ಆರೋಪಿಗಳಿ ಗಿರಾಕಿಗಳಿಗೆ ಡ್ರಗ್ಸ್ ಮಾರಾಟ ಮಾಡುವ ವೇಳೆ ಸಿಕ್ಕಿಬಿದ್ದಿದ್ದಾರೆ.
ಡಿಸಿಪಿ ಗೀತಾ ಪ್ರಸನ್ನ ಮಾರ್ಗದರ್ಶನದಲ್ಲಿ ಹಾಗೂ ಸಿಸಿಬಿ ಎಸಿಪಿ ಅಶ್ವತ್ಥ ನಾರಾಯಣ್ ಉಸ್ತುವಾರಿಯಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಮಲ್ಲೇಶ್,ಪ್ರತಿಭಾ ಜಂಗವಾಡ,ಸಿಬ್ಬಂದಿಗಳಾದ ಅನಿಲ್,ಸು ಭಾನಲ್ಲ,ಬಾಲದಾರ,ಗಣೇಶ್,ಶ್ರೀನಿವಾಸ್ ಪ್ರಸಾದ್,ಜೋಸೆಫ್ ನರೋನಾ,ರಾಧೇಶ್,ಶ್ರೀನಿವಾಸ್,ಅರುಣ್ ಕುಮಾರ್ ಕಾರ್ಯಾಚರಣೆ ನಡೆಸಿದ್ದಾರೆ…