
ಕ್ವಾರಿಯಲ್ಲಿ ಬಂಡೆ ಕುಸಿತ…ಇಬ್ಬರು ಕಾರ್ಮಿಕರ ದುರ್ಮರಣ…ಚಾಮರಾಜನಗರದಲ್ಲಿ ದುರಂತ…
- CrimeTV10 Kannada Exclusive
- December 26, 2022
- No Comment
- 99

ಕ್ವಾರಿಯಲ್ಲಿ ಬಂಡೆ ಕುಸಿತ…ಇಬ್ಬರು ಕಾರ್ಮಿಕರ ದುರ್ಮರಣ…ಚಾಮರಾಜನಗರದಲ್ಲಿ ದುರಂತ…

*ಚಾಮರಾಜನಗರ,ಡಿ26,Tv10 ಕನ್ನಡ”
ಕಲ್ಲು ಕ್ವಾರೆಯಲ್ಲಿ ಬಂಡೆ ಕುಸಿದು ಕಾರ್ಮಿಕರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಮಾರ್ ಮತ್ತು ಶಿವರಾಜು ಮೃತ ದುರ್ದೈವಿಗಳು. ಸಿದ್ದರಾಜು ಸ್ಥಿತಿ ಗಂಭೀರವಾಗಿದೆ. ಕಾಗಲವಾಡಿ ಮೊಳೆ ಗ್ರಾಮದ ಇವರೆಲ್ಲರೂ ಕ್ಲಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದರು. ಕ್ವಾರೆಗೆ ಕುಳಿ ಹೊಡೆಯಬೇಕಾದರೆ ಮೇಲಿನಿಂದ ಬಂಡೆ ಬಿದ್ದಿದ್ದು, ಇದರಡಿ ಸಿಲುಕಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಮಿಳುನಾಡು ಮೂಲದ ಭಾಸ್ಕರ್ ಎಂಬುವವರಿಗೆ ಈ ಕಲ್ಲು ಕ್ವಾರೆ ಸೇರಿದೆ. ಬಂಡೆ ಕುಸಿದು ಇಬ್ಬರು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಸಾಗಿಸಿದ್ದಾರೆ.

ಗುಂಡ್ಲುಪೇಟೆಯ ಮಡಹಳ್ಳಿಯ ಗುಮ್ಮಕಲ್ಲುಗುಡ್ಡದ ಕಲ್ಲು ಕ್ವಾರಿಯಲ್ಲಿ ಕಳೆದ ಮಾರ್ಚ್ 4ರಂದು ಬಂಡೆ ಕುಸಿದು ಬಿಹಾರ ಮೂಲದ ಮೂವರು ಕಾರ್ಮಿಕರು ಮೃತಪಟ್ಟಿದ್ದರು. ಈ ಘಟನೆ ಮಾಸುವ ಮುನ್ನವೇ ಚಾಮರಾಜನಗರದಲ್ಲಿ ಮತ್ತೊಂದು ದುರಂತ ಸಂಭವಿಸಿದೆ…
