
ಶ್ರೀರಂಗಪಟ್ಟಣ
ಅಕ್ರಮ ಖಾತೆ ಸೇರಿದಂತೆ ಕರ್ತವ್ಯ ಲೋಪ ಎಸಗಿದ ಹಿನ್ನಲೆಯಲ್ಲಿ ತಾಲೂಕಿನ ಹುಲಿಕೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಸ್. ಶಿವಲಿಂಗಯ್ಯ ಅವರನ್ನು ಜಿಪಂ ಸಿಇಒ ಶಾಂತ ಹುಲ್ಮನಿ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ
- CrimeTV10 Kannada Exclusive
- December 29, 2022
- No Comment
- 220
ಶ್ರೀರಂಗಪಟ್ಟಣ
ಅಕ್ರಮ ಖಾತೆ ಸೇರಿದಂತೆ ಕರ್ತವ್ಯ ಲೋಪ ಎಸಗಿದ ಹಿನ್ನಲೆಯಲ್ಲಿ ತಾಲೂಕಿನ ಹುಲಿಕೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಸ್. ಶಿವಲಿಂಗಯ್ಯ ಅವರನ್ನು ಜಿಪಂ ಸಿಇಒ ಶಾಂತ ಹುಲ್ಮನಿ ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ಹೊಸಹುಂಡವಾಡಿ ಗ್ರಾಮದ ಹೆಚ್.ಸಿ ರಘು ಎಂಬುವವರಿಗೆ ಸೇರಿದ್ದ ಗ್ರಾಮದಲ್ಲಿ ೩೧ * ೪೧ ಅಳತೆ ಮನೆಯನ್ನು ಅಕ್ರಮವಾಗಿ ಪುಟ್ಟಲಕ್ಷö್ಮಮ್ಮ ಮತ್ತು ಚನ್ನೇಗೌಡರವರ ಹೆಸರಿಗೆ ಅಕ್ರಮ ಖಾತೆ ಮಾಡಿರುವ ಬಗ್ಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಜಿ.ಪಂ ಉಪ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ ಹಾಗೂ ಶ್ರೀರಂಗಪಟ್ಟಣ ತಾ.ಪಂ ಇಒ ರವರ ಜಂಟಿ ಪರಿಶೀಲನ ವೇಳೆ ಹುಲಿಕೆರೆ ಪಂಚಾಯಿತಿ ಕಾರ್ಯದರ್ಶಿ ಎಸ್. ಶಿವಲಿಂಗಯ್ಯ ರವರು ನಿಯಮ ಬಾಹಿರವಾಗಿ ಇ-ಸ್ವತ್ತು ಮಾಡಿರುವುದು ಕಂಡು ಬಂದಿದೆ. ಜೊತೆಗೆ ಇ-ಸ್ವತ್ತು ನಮೂನೆ ೧೧೮ ನಲ್ಲಿ ಸ್ವತ್ತಿನ ಸಂಖ್ಯೆ: ೧೫೨೧೦೦೭೦೦೮೦೦೭೨೦೭೦೬ ಸ್ವತ್ತಿನ ಸ್ವಾಧೀನತೆ ವಿವರ ಪಿತ್ರಾರ್ಜಿತ ಎಂದು ನಮೂದಾಗಿದ್ದು, ಷರಾದಲ್ಲಿ ಸೇಲ್‌ಡೀಡ್ ಸಂಖ್ಯೆ:೭೦, ದಿನಾಂಕ:೨೩-೦೨-೨೦೦೦ ಎಂದು ನಮೂದಾಗಿರುತ್ತದೆ. ಪರಿಶೀಲನಾ ವೇಳೆ ರಶೀದಿ ಸಂಖ್ಯೆ ೪೧೩೪೬೦ರ ರಶೀದಿ ಪುಸ್ತಕವೇ ಇರುವುದಿಲ್ಲ. ಆ ಖಾತೆಗೆ ಸಂಬAಧಿಸಿದ ಕಡತಗಳು ಸಹ ಲಭ್ಯವಿಲ್ಲದಿರುವುದರಿಂದ ಸದರಿಯವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲು ದಾಖಲೆಗಳೊಂದಿಗೆ ಜಂಟಿ ಪರಿಶೀಲನಾ ವರದಿಯನ್ನು ಸಲ್ಲಿಸಿರುತ್ತಾರೆ.
ಪರಿಶೀಲನಾ ವರದಿಯಲ್ಲಿನ ಮೇಲ್ಕಂಡ ಅಂಶಗಳನ್ನು ಪರಿಶೀಲಿಸಿ ಎಸ್. ಶಿವಲಿಂಗಯ್ಯ ಹಿಂದಿನ ಪ್ರಭಾರ ಪಿಡಿಓ ಹಾಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-೧, ಹುಲಕೆರೆ ಗ್ರಾಮ ಪಂಚಾಯಿತಿ, ಶ್ರೀರಂಗಪಟ್ಟಣ ತಾಲ್ಲೂಕು ಇವರು ನಿಯಮಬಾಹಿರವಾಗಿ ಇ-ಸ್ವತ್ತು ಮಾಡಿ, ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಕರ್ತವ್ಯ ಲೋಪವೆಸಗಿರುವುದು ಕಂಡು ಬಂದಿರುವುದರಿAದ ಅವರ ವಿರುದ್ಧ ಶಿಸ್ತು ಪ್ರಾಧಿಕಾರಿ ಹಾಗೂ ಉಪ ಕಾರ್ಯದರ್ಶಿ (ಅಭಿವೃದ್ಧಿ) ಆದ ನಾನು ಕೆ.ಸಿ.ಎಸ್ (ಸಿ.ಸಿ.ಎ) ನಿಯಮಗಳು ೧೯೫೭ರ ನಿಯಮ ೧೦ (೫)ರಡಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಹುಲಿಕೆರೆ ಗ್ರಾಮ ಪಂಚಾಯಿತಿ, ಶ್ರೀರಂಗಪಟ್ಟಣ ತಾಲ್ಲೂಕು ಇವರನ್ನು ತಕ್ಷಣದಿಂದ ಜಾಲಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಜಿಪಂ ಸಿಇಒ ಶಾಂತ ಹುಲ್ಮನಿ ಆದೇಶ ಹೊರಡಿಸಿದ್ದಾರೆ.
ಗ್ರಾ.ಪಂ ಸದಸ್ಯ ಮಂಜುನಾಥ್, ಅಕ್ರಮ ಖಾತೆ ಸೇರಿದಂತೆ ಕರ್ತವ್ಯ ಲೋಪ ಎಸಗಿದ ಹಿನ್ನಲೆಯಲ್ಲಿ ಹುಲಿಕೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಸ್. ಶಿವಲಿಂಗಯ್ಯ ಅವರನ್ನು ಜಿಪಂ ಸಿಇಒ ಶಾಂತ ಹುಲ್ಮನಿ ಅಮಾನತ್ತುಗೊಳಿಸಿ ಆದೇಶ ಹೊರಡಿಸಿರುವುದು ಸ್ವಾಗತಾರ್ಹ, ಯಾಕೆಂದರೆ ನಮ್ಮ ಪಂಚಾಯ್ತಿಯಲ್ಲಿ ಸಾರ್ವಜನಿಕರು ಸೇರಿದಂತೆ ನೂರಾರು ಖಾತೆಗಳನ್ನು ಅಕ್ರಮವಾಗಿ ಕಾನೂನು ಭಾಹಿರವಾಗಿ ಮಾಡಲಾಗಿದೆ ಈ ಅಕ್ರಮ ಖಾತೆಗಳ ವಿರುದ್ದ ನಾನು ಸೇರಿದಂತೆ ನಮ್ಮ ಪಂಚಾಯ್ತಿಯ ಸದಸ್ಯರು ನಿರಂತರ ಹೊರಾಟ ನಡೆಸಿದ್ದೇವೆ, ಮುಂದಿನದಿನಗಳಲ್ಲಿ ಆಗಿರುವ ಅಕ್ರಮ ಖಾತೆಗಳು ರದ್ದಾಗಿ ಅಕ್ರಮ ಖಾತೆ ಸೇರಿದಂತೆ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಲಿ ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮತಷ್ಟು ಹೋರಾಟ ಮಾಡ ಬೇಕಾಗುತ್ತದೆ ಎಂದು ಗ್ರಾ.ಪಂ ಸದಸ್ಯ ಮಂಜುನಾಥ್ ಹೇಳಿದರು.