ಹೊಸ ವರ್ಷಕ್ಕೆ 2 ಲಕ್ಷ ಲಡ್ಡು ವಿತರಿಸಲು ಸಿದ್ದತೆ…ಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ತಯಾರಿ…
ಮೈಸೂರು,ಡಿ29,Tv10 ಕನ್ನಡ
- MysoreTemples
- December 29, 2022
- No Comment
- 133
ಹೊಸ ವರ್ಷಕ್ಕೆ 2 ಲಕ್ಷ ಲಡ್ಡು ವಿತರಿಸಲು ಸಿದ್ದತೆ…ಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ತಯಾರಿ…
ಮೈಸೂರು,ಡಿ29,Tv10 ಕನ್ನಡ
ಹೊಸ ವರ್ಷಕ್ಕೆ ಭಕ್ತಾದಿಗಳಿಗೆ 2 ಲಕ್ಷ ಲಡ್ಡು ವಿತರಿಸಲು ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಸಿದ್ದತೆ ಭರದಿಂದ ಸಾಗಿದೆ.ದೇವಸ್ಥಾನದ ಸಂಸ್ಥಾಪಕರಾದ ಶ್ರೀ ಭಾಷ್ಯಂ ಸ್ವಾಮೀಜಿ ನೇತೃತ್ವದಲ್ಲಿ ಸಿದ್ದತಾ ಕಾರ್ಯ ನೆರವೇರುತ್ತಿದೆ.ಸುಮಾರು 30 ಕ್ಕೂ ಹೆಚ್ಚು ಬಾಣಸಿಗರು ಸಿದ್ದತಾ ಕಾರ್ಯದಲ್ಲಿ ತೊಡಗಿದ್ದಾರೆ.1994 ರಲ್ಲಿ ಒಂದು ಸಾವಿರ ಲಡ್ಡು ವಿತರಣೆಯಿಂದ ಪ್ರಾರಂಭವಾದ ಈ ಕೈಂಕರ್ಯ ಇಂದು 2 ಲಕ್ಷ ಲಡ್ಡು ವಿತರಿಸುವ ಹಂತಕ್ಕೆ ಮುಟ್ಟಿದೆ.ಬೆಳಿಗ್ಗೆ ಸುಮಾರು 5 ಗಂಟೆಯಿಂದ ಪ್ರಸಾದ ವಿತರಣೆ ಆರಂಭವಾಗಲಿದೆ.2 ಕೆಜಿ ತೂಕದ 10 ಸಾವಿರ ಲಡ್ಡುಗಳು,150 ಗ್ರಾಂ ತೂಕದ ಎರಡು ಲಕ್ಷ ಲಡ್ಡುಗಳು ತಯಾರಾಗುತ್ತಿದೆ.
ಲಡ್ಡು ತಯಾರಿಕೆಗೆ 75 ಕ್ವಿಂಟಾಲ್ ಕಡ್ಲೆಹಿಟ್ಟು,200 ಕೆಜಿ ಸಕ್ಕರೆ,6000 ಲೀಟರ್ ಖಾದ್ಯ ತೈಲ,200 ಕೆಜಿ ಗೋಡಂಬಿ,200 ಕೆಜಿ ಒಣದ್ರಾಕ್ಷಿ,100 ಕೆಜಿ ಬಾದಾಮಿ,500 ಕೆಜಿ ಡೈಮಂಡ್ ಸಕ್ಕರೆ,1000 ಕೆಜಿ ಬೂರಾ ಸಕ್ಕರೆ,20 ಕೆಜಿ ಪಿಸ್ತಾ,50 ಕೆಜಿ ಏಲಕ್ಕಿ,10 ಕೆಜಿ ಪಚ್ಚ ಕರ್ಪೂರ,100 ಕೆಜಿ ಲವಂಗ ಬಳಸಲಾಗಿದೆ.ಜನವರಿ 1 ರ ಮುಂಜಾನೆ ದೇವರಿಗೆ ವಿಶೇಷ ಪೂಜೆ ನೆರವೇರಿದ ನಂತರ ಲಡ್ಡು ವಿತರಣೆಯಾಗಲಿದೆ.ರಾತ್ರಿ 10 ಗಂಟೆ ವರೆಗೂ ಪ್ರಸಾದ ವಿತರಿಸಲಾಗುತ್ತದೆ.
ನಾಲ್ಕನೇ ಅಲೆ ಭೀತಿ ಇರಯವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವಂತೆ ಭಕ್ತರಿಗೆ ಭಾಷ್ಯಂ ಸ್ವಾಮೀಜಿ ರವರು ಮನವಿ ಮಾಡಿದ್ದಾರೆ.ಆಡಳಿತಾಧಿಕಾರಿ ಶ್ರೀನಿವಾಸ್ ಉಸ್ತುವಾರಿಯಲ್ಲಿ ಲಡ್ಡು ತಯಾರಿಕಾ ನಿರ್ವಹಣೆ ಸಾಗುತ್ತಿದೆ…