
ಪತ್ರಕರ್ತನ ಮೇಲೆ ಕಾಂಗ್ರೆಸ್,ಜೆಡಿಎಸ್ ಮುಖಂಡರಿಂದ ಹಲ್ಲೆ ಆರೋಪ…ದೂರು ದಾಖಲು…
- CrimeMysore
- December 31, 2022
- No Comment
- 180



ಟಿ.ನರಸೀಪುರ,ಡಿ31,Tv10 ಕನ್ನಡ
ಬನ್ನೂರಿನ ಗ್ರಾಮಪಂಚಾಯ್ತಿ ಸಾಮಾನ್ಯ ಸಭೆ ವರದಿ ಮಾಡಲು ತೆರಳಿದ್ದ ಪತ್ರಕರ್ತನ ಮೇಲೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.ಸ್ಥಳೀಯ ಪತ್ರಿಕೆಯ ವರದಿಗಾರ ನಾಗರಾಜ್ ಎಂಬುವರು ಹಲ್ಲೆಗೆ ಒಳಗಾದ ಪತ್ರಕರ್ತ.ಈ ಹಿಂದೆ ಯುಜಿಡಿ ಕಳಪೆ ಕಾಮಗಾರಿ ಬಗ್ಗೆ ನಾಗರಾಜ್ ವರದಿ ಮಾಡಿದ್ದರು.ಈ ಬಗ್ಗೆ ಸದಸ್ಯರು ಹಾಗೂ ನಾಗರಾಜ್ ನಡುವೆ ತೀವ್ರ ಚರ್ಚೆ ನಡೆದಿತ್ತು.ಸಾಮಾನ್ಯ ಸಭೆಯ ವರದಿ ಮಾಡಲು ತೆರಳಿದ ನಾಗರಾಜ್ ಮೇಲೆ ಏಕಾ ಏಕಿ ಮುಗಿಬಿದ್ದ ಸದಸ್ಯರು ಹಲ್ಲೆ ನಡೆಸಿದ್ದಾರೆಂದು ನಾಗರಾಜ್ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪತ್ರಕರ್ತನ ಮೇಲಿನ ಹಲ್ಲೆಯನ್ನ ರೈತಮುಖಂಡ ಬನ್ನೂರು ನಾರಾಯಣ್ ಸೇರಿದಂತೆ ಹಲವರು ಖಂಡಿಸಿದ್ದಾರೆ…

