ಕಾಡಾನೆ ದಾಳಿ…ವಾಚರ್ ಸಾವು…
- CrimeMysore
- January 1, 2023
- No Comment
- 113
ಮೈಸೂರು,ಜ1,Tv10 ಕನ್ನಡ
ಕಾಡಾನೆ ದಾಳಿಗೆ ಅರಣ್ಯ ಇಲಾಖೆ ರಾತ್ರಿ ಕಾವಲುಗಾರ ಸಾವನ್ನಪ್ಪಿದ್ದಾರೆ.
ಮಹದೇವಸ್ವಾಮಿ (36) ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟವರು.
ಸುಮಾರು ಹತ್ತು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಹಂಗಾಮಿ ವಾಚರ್‌ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ತಡರಾತ್ರಿ ಕಾವಲಿನಲ್ಲಿದ್ದಾಗ ಶನೆ ದಾಳಿ ನಡೆಸಿದೆ.
ಸ್ಥಳದಲ್ಲಿ ಮಹದೇವಸ್ವಾಮಿ ಹಾಗೂ ಮತ್ತೊಬ್ಬ ವಾಚರ್ ರಾಜೇಶ ಎಂಬವರಿದ್ದರು. ಆಶ್ಚರ್ಯಕರ ರೀತಿಯಲ್ಲಿ ರಾಜೇಶ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹೆಚ್.ಡಿ.ಕೋಟೆ ಮೇಟಿಕುಪ್ಪೆ ಅರಣ್ಯ ಪ್ರದೇಶದ ಸೊಳ್ಳಾಪುರ ಬಳಿ ಘಟನೆ ನಡೆದಿದೆ.
ಮಹದೇವಸ್ವಾಮಿ ಮೃತದೇಹ ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಆಸ್ಪತ್ರೆ ಆವರಣದಲ್ಲಿ ಮೃತನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ…