
ವಿದ್ಯುತ್ ಕಂಬದ ಬಳಿ ಉರುಳಿಬಿದ್ದ ಟ್ರಕ್…ತಪ್ಪಿದ ಅನಾಹುತ…
- TV10 Kannada Exclusive
- January 5, 2023
- No Comment
- 168
ಹುಣಸೂರು,ಜ5,Tv10 ಕನ್ನಡ
ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ವಿದ್ಯುತ್ ಕಂಬದ ಬಳಿ ಉರುಳಿಬಿದ್ದ ಘಟನೆ ಹುಣಸೂರು ತಾಲೂಕಿನ ಬಸರಿಕಟ್ಟೆ ಬಳಿ ನಡೆದಿದೆ.ಕೇರಳಾ ದಿಂದ ಬೆಂಗಳೂರಿಗೆ ಕಬ್ಬಿಣದ ಶೀಟ್ ಗಳನ್ನ ಸಾಗಿಸುತ್ತಿದ್ದ ಟ್ರಕ್ ಉರುಳಿ ಬಿದ್ದಿದೆ.ಸಮೀಪದಲ್ಲೇ ವಿದ್ಯುತ್ ಕಂಬ ಇದ್ದರೂ ಸಂಪರ್ಕ ಸಾಧಿಸದ ಪರಿಣಾಮ ಅನಾಹುತ ತಪ್ಪಿದಂತಾಗಿದೆ.ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಬಿಳಿಕೆರೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…