ಸೈಬರ್ ಕ್ರೈಂ ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ…

ಸೈಬರ್ ಕ್ರೈಂ ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ…

ಸೈಬರ್ ಕ್ರೈಂ ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ…

ಮೈಸೂರು,ಜ06,Tv10 ಕನ್ನಡ
ಅಪರಾದ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹು ಮುಖ್ಯವಾದದ್ದು. ಕ್ಷಣ ಮಾತ್ರದಲ್ಲಿ ಆಗುವ ಅಹಿತಕರ ಘಟನೆಗಳ ಬಗ್ಗೆ ನಾವು ಎಚ್ಚೆತ್ತುಕೊಳ್ಳದೆ ಹೋದಲ್ಲಿ ನಾವು ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ದುರ್ಬಳಕೆ, ಸೈಬರ್ ಕ್ರೈಮ್ ಇವುಗಳ ಬಗ್ಗೆ ಜಾಗೃತಿ ಹೊಂದುವುದು ಅತಿ ಅವಶ್ಯಕ ಎಂದು ಕೆಪಿಎ ಪೊಲೀಸ್ ಉಪಾಧೀಕ್ಷಕರು ಎಚ್ ಎಸ್ ರೇಣುಕಾರಾಧ್ಯ ಕಿವಿ ಮಾತು ಹೇಳಿದರು. ಸರಸ್ವತಿಪುರಂನಲ್ಲಿರುವ ಟಿ ಟಿಎಲ್ ಕಾಲೇಜ್ ಆವರಣದಲ್ಲಿ
ಟಿ.ಟಿ.ಎಲ್ ಟ್ರಸ್ಟ್ ಮತ್ತು ಅಖಿಲಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಹಾಗೂ ಟಿ.ಟಿ.ಎಲ್ ವಾಣಿಜ್ಯ ವ್ಯವಹಾರ ನಿರ್ವಹಣಾ ಕಾಲೇಜು ,ಟಿ.ಟಿ.ಎಲ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಮತ್ತು ಯುವ ರೆಡ್ ಕ್ರಾಸ್ ಘಟಕ ಆಯೋಜಿಸಿರುವ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಅಂತರ್ಜಾಲದ ದುರುಪಯೋಗ ಹೆಚ್ಚಾಗುತ್ತಿದೆ.ಜನರು ಒಂದು ಸಣ್ಣ ತಪ್ಪಿನಿಂದಾಗಿ ಹಣ ಹಾಗೂ ಮಹತ್ವದ ಮಾಹಿತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಮೂಲಕ ತಿಳಿದೋ ಅಥವಾ ತಿಳಿಯದೆಯೋ ವಿವಿಧ ಸಂಕಷ್ಟಗಳಿಗೆ ಸಿಲುಕಿ ನಲುಗುತ್ತಿದ್ದಾರೆ.
ಸೈಬರ್ ಕ್ರೈಂ ತಡೆಯುವ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅತ್ಯಗತ್ಯ.ಸರ್ಕಾರಿ ಸಂಸ್ಥೆಗಳಲ್ಲೂ ಸಹ ಪ್ರತೀ ಕೆಲಸದಲ್ಲಿಯೂ ಕಂಪ್ಯೂಟರ್, ವಾಟ್‌ಸ್‌ಆಫ್, ಪೇಸ್ಬುಕ್ ಹೀಗೆ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತೇವೆ. ಆದ್ದರಿಂದ ಈ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಜಾಗೃತರಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಟಿ.ಟಿ.ಎಲ್ ಟ್ರಸ್ಟ್ ನ ಆಡಳಿತ ಮತ್ತು ನಿಯೋಜನ ಅಧಿಕಾರಿ ಡಾಕ್ಟರ್ ಬಿ ವಿ ಪ್ರಶಾಂತ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಡಾ ಜಿ ವಿ ರವಿಶಂಕರ್, ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಪದವಿ ಕಾಲೇಜಿನ ಪ್ರಾಂಶುಪಾಲರಾದ ಶಶಿಕಲಾ ಎಸ್ ಆರ್, ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಬ್ರಹ್ಮರಾಂಭ ಎಸ್,
ಕಾಲೇಜಿನ ರೆಡ್ ಕ್ರಾಸ್ ಅಧಿಕಾರಿ ಗಿರೀಶ್ ಹಾಗೂ ಇನ್ನಿತರರು ಭಾಗವಹಿಸಿದ್ದರು…

Spread the love

Related post

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಮಂಡ್ಯ,ಜೂ30,Tv10 ಕನ್ನಡ ಕೆ.ಆರ್.ಎಸ್.ಡ್ಯಾಂ ಒಡಲನ್ನು ತುಂಬಿದ ಕಾವೇರಿ ಮಾತೆಗೆ ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.ಈ ಹಿನ್ನೆಲೆ ಕೆ ಆರ್.ಎಸ್.ನವವಧುವಿನಂತೆ ಶೃಂಗಾರಗೊಂಡಿದೆ.ಕನ್ನಡ ಬಾವುಟದಿಂದ ಕಂಗೊಳಿಸುತ್ತಿದೆ.ಹಸಿರು ತೋರಣ, ಹೂಗಳ ಮೂಲಕ…
ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ ಪುರೋಹಿತ ಹಲ್ಲೆ…

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ…

ಮೈಸೂರು,ಜೂ29,Tv10 ಕನ್ನಡ ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ.ಗೀತಾಮೃತ…
ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…

Leave a Reply

Your email address will not be published. Required fields are marked *