
ನದಿಗೆ ಹಾರಿ ದಂಪತಿ ಆತ್ಮಹತ್ಯೆ…ಅಕ್ರಮ ಸಂಭಂಧಕ್ಕೆ ಬಲಿ…ಟಿ.ನರಸೀಪುರದಲ್ಲಿ ದುರ್ಘಟನೆ…
- CrimeMysore
- January 7, 2023
- No Comment
- 159
ನದಿಗೆ ಹಾರಿ ದಂಪತಿ ಆತ್ಮಹತ್ಯೆ…ಅಕ್ರಮ ಸಂಭಂಧಕ್ಕೆ ಬಲಿ…ಟಿ.ನರಸೀಪುರದಲ್ಲಿ ದುರ್ಘಟನೆ…
ಟಿ.ನರಸೀಪುರ,ಜ7,Tv10 ಕನ್ನಡ
ಅಕ್ರಮ ಸಂಭಂಧ ಹೊಂದಿದ್ದ ಜೋಡಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಟಿ.ನರಸೀಪುರದಲ್ಲಿ ನಡೆದಿದೆ.
ಟಿ.ನರಸೀಪುರ ಪಟ್ಟಣದ ಕಾವೇರಿ ಸೇತುವೆ ಬಳಿ ಘಟನೆ ನಡೆದಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಲಕ್ಕೂರು ಗ್ರಾಮದ ಮಣಿಕಂಠ(30)
ಮೈಸೂರಿನ ರಮಾಬಾಯಿ ನಗರ ನಿವಾಸಿ ವಸಂತ ಮೃತ ಜೋಡಿ. ಇಬ್ಬರೂ ವಿವಾಹಿತರಾಗಿದ್ದರೂ ಅಕ್ರಮ ಸಂಭಂಧ ಬೆಳೆಸಿದ್ದರು.ವಸಂತ ಗಂಡನಿಂದ ಬೇರ್ಪಟ್ಟಿದ್ದಳು.ಮಣಿಕಂಠ ನಿಗೆ ಮದುವೆ ಆಗಿ ಮಕ್ಕಳಿಲ್ಲದ ಕಾರಣ ವಸಂತ ಜೊತೆ ಅಕ್ರಮ ಸಂಭಂಧ ಬೆಳೆಸಿದ್ದ ಎನ್ನಲಾಗಿದೆ.ಇಬ್ಬರ ನಡುವಿನ ಸಂಭಂಧ ಬೆಳಕಿಗೆ ಬಂದ ಹಿನ್ನಲೆ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗಿದೆ.
ಸ್ಥಳಕ್ಕೆ ನರಸೀಪುರ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.
ಟಿ.ನರಸೀಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…