ಪತ್ರಕರ್ತನಾಗಿದ್ದ ಸ್ಯಾಂಟ್ರೋ ರವಿ ಮಾಂಸದಂಧೆಗೆ ಇಳಿದಿದ್ದು ಹೇಗೆ…?ರೋಚಕ ಕಹಾನಿ ಇಲ್ಲಿದೆ…

ಪತ್ರಕರ್ತನಾಗಿದ್ದ ಸ್ಯಾಂಟ್ರೋ ರವಿ ಮಾಂಸದಂಧೆಗೆ ಇಳಿದಿದ್ದು ಹೇಗೆ…?ರೋಚಕ ಕಹಾನಿ ಇಲ್ಲಿದೆ…

ಪತ್ರಕರ್ತನಾಗಿದ್ದ ಸ್ಯಾಂಟ್ರೋ ರವಿ ಮಾಂಸದಂಧೆಗೆ ಇಳಿದಿದ್ದು ಹೇಗೆ…?ರೋಚಕ ಕಹಾನಿ ಇಲ್ಲಿದೆ…

ಮೈಸೂರು,ಜ13,Tv10 ಕನ್ನಡ
ಕೆ.ಎಸ್.ಮಂಜುನಾಥ್.@.ಸ್ಯಾಂಟ್ರೋ ರವಿ.@ಕಿರಣ್ ಅರೆಸ್ಟ್ ಆಗಿದ್ದಾನೆ.ಸರ್ಕಾರಕ್ಕೆ ಮುಜುಗರವಾಗುವಂತಹ ಹೀನಾಯ ಕೆಲಸಕ್ಕೆ ಕೈ ಹಾಕಿ ತಲೆಮರೆಸಿಕೊಂಡಿದ್ದ ಮಂಜುನಾಥ್.ಆ.ಸ್ಯಾಂಟ್ರೋ ರವಿಯನ್ನ ಮೈಸೂರು ಪೊಲೀಸರು ಗುಜರಾತ್ ನಲ್ಲಿ ಅರೆಸ್ಟ್ ಮಾಡಿದ್ದಾರೆ.ಈಗಾಲೇ ಮೈಸೂರಿಗೆ ಕರೆತಂದಿದ್ದಾರೆ.ಎರಡನೇ ಪತ್ನಿಗೆ ವಂಚಿಸಿದ ಆರೋಪ ಹಾಗೂ ರಾಜಕಾರಿಣಿಗಳ ಜೊತೆಗಿನ ಒಡನಾಟ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಸ್ಯಾಂಟ್ರೋ ರವಿ ಬಗ್ಗೆ ಹಲವು ರೀತಿಯ ಸ್ಟೋರಿಗಳು ಬೆಸೆದುಕೊಂಡಿವೆ. ಸ್ಯಾಂಟ್ರೋ ರವಿ ಅರೆಸ್ಟ್ ವಿಚಾರ ಸಧ್ಯದಲ್ಲಿ ಸಾಕಷ್ಟು ಗುಲ್ಲೆಬ್ಬಿಸಿದೆ.ಸ್ಯಾಂಟ್ರೋ ರವಿಯ ಅರೆಸ್ಟ್ ಕೆಲವರಿಗೆ ನಿಟ್ಟುಸಿರು ಬಿಟ್ಟಂತಾದ್ರೆ ಮತ್ತೆ ಕೆಲವರಿಗಂತೂ ನಡುಕ ಶುರುವಾಗಿ.ಎಲ್ಲಿ ತಮ್ಮ ಬಂಡವಾಳ ಬಯಲಾಗುತ್ತೋ ಎಂಬ ಭೀತಿ ಹುಟ್ಟಿಸಿದೆ.ಮುಂಬರುವ ದಿನಗಳಲ್ಲಿ ಮೈಸೂರು ಪೊಲೀಸರು ನಡೆಸುವ ತನಿಖೆಯಲ್ಲಷ್ಟೆ ಅಸಲಿ ಸತ್ಯ ಹೊರಬರಬೇಕಿದೆ.ಇದು ಒತ್ತೊಟ್ಟಿಗೆ ಇರಲಿ…ಸ್ಯಾಂಟ್ರೋ ರವಿ ಈ ಮಟ್ಟಿಗೆ ಬೆಳೆದಿದ್ದಾನಾ…? ಇಷ್ಟು ಬೆಳೆಯಲು ಹೇಗೆ ಕಾರಣವಾಯ್ತು…? ಈತನ ಹಿಂದಿದ್ದ ಕಾಣದ ಕೈಗಳು ಯಾವುವು…?ದಶಕಗಳ ಹಿಂದೆ ಏನಾಗಿದ್ದ…? ನಂತರದ ದಿನಗಳಲ್ಲಿ ಹೇಗೆ ಬೆಳೆದ…?ಎಂಬುದೇ ರೋಚಕ ಕಹಾನಿ.ಈತನಿಗೆ ಇಷ್ಟು ಪ್ರಾಮುಖ್ಯತೆ ನೀಡಬೇಕಾ..? ಎಂಬುದೂ ಸಹ ಚರ್ಚೆಯಾಗುತ್ತಿದೆ.ಅಸಲಿಗೆ ಈ ಸ್ಯಾಂಟ್ರೋ ರವಿ ಯಾರು..? ಈತನ ಕಾರ್ಯಾಚರಣೆ ಎಂತದ್ದು…? ವೃತ್ತಿ ಎಂಥದ್ದು…? ಇಂಟರೆಸ್ಟಿಂಗ್ ಹಿನ್ನಲೆ ಇದೆ.

ಪತ್ರಕರ್ತನಾಗಿ ವೃತ್ತಿ ಆರಂಭಿಸಿದ ಮಂಜುನಾಥ್.@ಸ್ಯಾಂಟ್ರೋ ರವಿ ನಡೆದು ಬಂದ ದಾರಿಯೇ ರೋಚಕ.ಹೌದು…ಮಂಜುನಾಥ್.@.ಸ್ಯಾಂಟ್ರೋ ರವಿ ತನ್ನ ವೃತ್ತಿ ಶುರು ಮಾಡಿದ್ದೇ ಪತ್ರಕರ್ತನಾಗಿ.ಅದ್ರಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈತನ ವೃತ್ತಿ ಆರಂಭವಾಗಿದ್ದೇ ಪತ್ರಕರ್ತನಾಗಿ.ತಂದೆ ಸಿದ್ದಶೆಟ್ಟಿ ಅಬಕಾರಿ ಇಲಾಖೆಯಲ್ಲಿ ನಿರೀಕ್ಷಕರಾಗಿ ನಂತರ ಡಿವೈಎಸ್ಪಿಯಾಗಿ ಕರ್ತವ್ಯದ ದಿನಗಳಲ್ಲೇ ಕುಟುಂಬವನ್ನ ಅಗಲಿದವರು.ಮೂಲತಃ ಚಾಮರಾಜನಗರದವರಾದ ಸಿದ್ದಶೆಟ್ಟಿ ಮಂಡ್ಯಾ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ರು.ಮೊದಲ ಮಗ ಮಂಜುನಾಥ್ ಗೆ ಡಾಕ್ಟರ್ ಮಾಡುವ ಕನಸು ಸಿದ್ದಶೆಟ್ಟಿ ರವರಿಗಿತ್ತು.ಎರಡನೇ ಮಗ ಪ್ರತಿಭಾವಂತ.ಆದ್ರೆ ಮೊದಲ ಮಗ ಮಂಜುನಾಥ್ ತಲೆಗೆ ವಿದ್ಯೆ ಹತ್ತಲಿಲ್ಲ.ಎರಡನೇ ಪಿಯುಸಿಗೆ ವಿಧ್ಯಾಭ್ಯಾಸ ಮೊಟಕಾಯ್ತು.ಡಾಕ್ಟರ್ ಆಗುವ ಕನಸು ನುಚ್ಚುನೂರಾಯ್ತು.ತಂದೆ ಮಗನಿಗೆ ಲೂನಾ ಸೂಪರ್ ಕೊಡಿಸಿದ್ರು.ಕೈಗೆ ಬಂದ ದ್ವಿಚಕ್ರ ವಾಹನ ಮನಸ್ಸಿನಲ್ಲಿದ್ದ ಪತ್ರಕರ್ತನನ್ನ ಜಾಗೃತಿಗೊಳಿಸಿತು.1990 ರಲ್ಲಿ ಕೆಲವು ಪತ್ರಿಕೆಗಳು ದ್ವಿಚಕ್ರ ವಾಹನ ಇದ್ದವರಿಗೆ ವರದಿಗಾರರಾಗುವ ಆಧ್ಯತೆಯನ್ನ ಪ್ರಕಟಿಸಿತ್ತು.ಈ ಪೈಕಿ ಹೆಸರಾಂತ ಪತ್ರಿಕೆಯೂ ಒಂದಾಗಿತ್ತು. ಹೆಸರಾಂತ ವೈದ್ಯರೊಬ್ಬರು ಈ ಪತ್ರಿಕೆಯ ಎಡಿಟರ್.ಮಂಜುನಾಥ್ ಗೆ ಲೂನಾ ಸೂಪರ್ ಇದ್ದ ಕಾರಣ ವರದಿಗಾರ ಕೆಲಸ ಪಕ್ಕಾ ಆಯ್ತು.ಜರ್ನಲಿಸಂ ಬಗ್ಗೆ ಯಾವುದೇ ನಾಲೆಡ್ಜ್ ಇಲ್ಲದಿದ್ರೂ ಮಂಜುನಾಥ್ ವರದಿಗಾರನಾದ.ಕೆಲವು ತಿಂಗಳ ಕಾಲ ಪತ್ರಿಕೆಯಲ್ಲಿ ವರದಿಗಾರನಾದ ಮಂಜುನಾಥ್ ಗೆ ಸಂಬಳದ ಪ್ರಾಬ್ಲಂ ಶುರುವಾಗಿ ಕೆಲಸ ತೊರೆದ.ಕೆಲವೇ ದಿನಗಳಲ್ಲಿ ಮೈಸೂರಿನ ಪ್ರಮುಖ ಸ್ಥಳೀಯ ಪತ್ರಿಕೆ ಕಚೇರಿ ಮೆಟ್ಟಿಲು ತುಳಿದ.ಆಗ ಪತ್ರಿಕೆಯ ಜವಾಬ್ದಾರಿ ಹೊತ್ತಿದ್ದ ಸಹ ಸಂಪಾದಕರು ಒಂದು ಛಾನ್ಸ್ ಕೊಟ್ರು.ಕೈಲಿ ಲೂನಾ ಸೂಪರ್ ಇತ್ತು.ಜೊತೆಗೆ ಮತ್ತೊಂದು ಪತ್ರಿಕೆಯಲ್ಲಿ ವರದಿ ಮಾಡಿದ್ದ ಅನುಭವ ಇತ್ತು.ಆದ್ರೆ ಕೆಲವೇ ದಿನಗಳಲ್ಲಿ ಮಂಜುನಾಥ್ ನ ಬಣ್ಣ ಬಯಲಾಗಿತ್ತು.ವರದಿಗಾರಿಕೆಯಲ್ಲಿ ಅನುಭವ ಸಾಲದು ಎಂಬ ಕಾರಣ ನೀಡಿ ಮಂಜುನಾಥ್ ಗೆ ಸ್ಥಳೀಯ ಪತ್ರಿಕೆಯಿಂದಲೂ ಗೇಟ್ ಪಾಸ್ ಕೊಟ್ರು.ಅಲ್ಲಿಂದ ನೇರವಾಗಿ ಎಂಟ್ರಿ ಕೊಟ್ಟಿದ್ದು ಪೊಲೀಸ್ ನ್ಯೂಸ್ ಪತ್ರಿಕೆ ಗೆ.ಕ್ರೈಂ ಸುದ್ದಿಗಳಿಂದ ತಮ್ಮದೇ ಛಾಪು ಮೂಡಿಸಿದ್ದ ಸಂಪಾದಕರಾದ ಮಲ್ಲಿಕಾರ್ಜುನಯ್ಯ ರವರನ್ನ ಒಲಿಸಿಕೊಂಡು ಪೊಲೀಸ್ ನ್ಯೂಸ್ ಪತ್ರಿಕೆಯ ವರದಿಗಾರನಾದ.ತಂದೆ ಅಬಕಾರಿ ಇಲಾಖೆ ಅಧಿಕಾರಿ ಎಂಬ ಹಿನ್ನಲೆ ಮಂಜುನಾಥ್ ಗೆ ಕ್ರೈಂ ಸುದ್ದಿಗಳ ಸಂಗ್ರಹಕ್ಕೆ ವರದಾನವಾಗಿತ್ತು.ಮಂಜುನಾಥ್ ಎಂಬ ಬೈಲೈನ್ ನಲ್ಲಿ ಮೈಸೂರಿನ ಸಾಕಷ್ಟು ಸುದ್ದಿಗಳು ಪೊಲೀಸ್ ನ್ಯೂಸ್ ನಲ್ಲಿ ವರದಿಯಾದವು.ಸುದ್ದಿಯ ವಿಚಾರವೊಂದರಲ್ಲಿ ಮೈಸೂರು ಪ್ರಜೆ ಪತ್ರಿಕೆಯ ಸಂಪಾದಕ ರಂಗರಾಜು ಜೊತೆ ಜಗಳ ಮಾಡಿಕೊಂಡ ಮಂಜುನಾಥ್ ನಿಧಾನವಾಗಿ ಪತ್ರಕರ್ತ ವೃತ್ತಿಯಿಂದ ದೂರವಾಗತೊಡಗಿದ.

ಮೈಸೂರಿನ ಸಿದ್ದಾರ್ಥ ಲೇ ಔಟ್ ನಲ್ಲಿದ್ದ ವೇಳೆ ಅಯ್ಯಂಗಾರ್ ಬೇಕರಿಯೊಂದರ ಅಪ್ರಾಪ್ತ ಹುಡುಗಿಯನ್ನ ಪ್ರೀತಿಸಿ ಕಿಡ್ನಾಪ್ ಮಾಡಿಕೊಂಡು ಹೋಗಿ ಧರ್ಮಸ್ಥಳದಲ್ಲಿ ಮದುವೆ ಆದ.ಈ ಸುದ್ದಿ ಅಂದಿನ ದಿನಪತ್ರಿಕೆಗಳಲ್ಲಿ ರಾರಾಜಿಸಿತು.ಮಂಜುನಾಥ್ ಮೇಲೆ ಕಿಡ್ನಾಪ್ ಅಂಡ್ ರೇಪ್ ಕೇಸ್ ದಾಖಲಾಯ್ತು.ಆಗಿನ ಕಮೀಷನರ್ ಆಗಿದ್ದ ಕಸ್ತೂರಿ ರಂಗನ್ ರವರು ಮಂಜುನಾಥ್ ಹೆಡೆಮುರಿ ಕಟ್ಟಿ ಜೈಲಿಗೆ ಕಳಿಸಿದ್ರು.ಆರೋಗ್ಯ ತಪಾಸಣೆಗಾಗಿ ಮಂಜುನಾಥ್ ನ ಕೆ.ಆರ್.ಆಸ್ಪತ್ರೆಗೆ ಪೊಲೀಸರು ಕರೆತಂದಿದ್ರು.ಈ ಸಂಧರ್ಭದಲ್ಲಿ ದಂಡುಪಾಳ್ಯ ಕೃಷ್ಣ ಹಾಗೂ ಸಹಚರನನ್ನ ಸಹ ಕರೆತರಲಾಗಿತ್ತು.ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿದ ದಂಡುಪಾಳ್ಯ ಕೃಷ್ಣ ಹಾಗೂ ಸಹಚರ ಎಸ್ಕೇಪ್ ಆದ್ರು.ಅವರನ್ನ ಹಿಡಿಯಲು ಮಂಜುನಾಥ್ ಜೊತೆಗೆ ಬಂದ ಪೊಲೀಸ್ರೂ ಸಹ ಓಡಿದ್ರು.ಇತ್ತ ಮಂಜುನಾಥ್ ಸಹ ಎಸ್ಕೇಪ್ ಆಗ್ಬಿಟ್ಟ.ಈ ವಿಚಾರವೂ ಸಹ ಆಗಿನ ದಿನಪತ್ರಿಕೆಗಳಲ್ಲಿ ಸುದ್ದಿ ಆಯ್ತು.ಪೊಲೀಸರಿಗೆ ಕೈ ಕೊಟ್ಟು ಪರಾರಿಯಾದ ಮಂಜುನಾಥ್ ನನ್ನು ತಂದೆ ಸಿದ್ದಶೆಟ್ಟಿ ಸರೆಂಡರ್ ಮಾಡಿಸಿದ್ರು.ಕೆಲವು ದಿನಗಳಲ್ಲಿ ಜಾಮೀನು ಪಡೆದು ಹೊರಬಂದ ಮಂಜುನಾಥ್ ಗೆ ಸಿದ್ದಶೆಟ್ಟಿ ರವರು ಮಂಡ್ಯಾದಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಹಾಕಿಸಿಕೊಟ್ರು.ಮಗ ಉದ್ದಾರ ಆಗ್ತಾನೆ ಅಂತ ಅಂದುಕೊಂಡ ತಂದೆಗೆ ನಿರಾಸೆ ಆಯ್ತು.ಬಾರ್ ಅಂಡ್ ರೆಸ್ಡೋರೆಂಟ್ ಬುಸಿನೆಸ್ ಕೈ ಹಿಡೀಲಿಲ್ಲ.ರೇಪ್ ಅಂಡ್ ಕಿಡ್ನಾಪ್ ಕೇಸ್ ನಲ್ಲಿ ಜೇಲಿನಲ್ಲಿದ್ದ ಮಂಜುನಾಥ್ ಗೆ ಖದೀಮರ ಪರಿಚಯವಾಗಿತ್ತು.ಕಾರ್ ಕಳ್ಳರ ಗ್ಯಾಂಗ್ ಜೊತೆ ಸೇರಿಕೊಂಡ ಮಂಜುನಾಥ್ ಕಳ್ಳತನ ಹಾದಿ ಹಿಡಿದ.ಇಂತಹ ಸಂಧರ್ಭದಲ್ಲಿ ತಂದೆ ವಿಧಿವಶರಾದ್ರು.ಕರ್ತವ್ಯದ ಅವಧಿಯಲ್ಲೇ ಮೃತಪಟ್ಟ ಕಾರಣ ಮಗನಿಗೆ ಕೆಲಸ ಸಿಗುವ ಸಾಧ್ಯತೆ ಇತ್ತು.ಮಂಜುನಾಥ್ ಗೆ ವಿದ್ಯಾರ್ಹತೆ ಇರಲಿಲ್ಲ.ತಮ್ಮನಿಗೆ ಇದ್ರೂ ಕೆಲಸಕ್ಕೆ ಅಡ್ಡಿಯಾಗಿ ನಿಂತ.ತನಗೂ ಇಲ್ಲ ತಮ್ಮನಿಗೂ ತಂದೆಯ ಕೆಲಸ ದಕ್ಕದಂತೆ ಮಾಡುವಲ್ಲಿ ಮಂಜುನಾಥ್ ಯಶಸ್ವಿಯಾದ.ಅಷ್ಟರಲ್ಲಿ ಕೆಂಪಯ್ಯ ನವರು ಮೈಸೂರು ನಗರ ಪೊಲೀಸ್ ಕಮೀಷನರ್ ಆಗಿ ಅಧಿಕಾರ ವಹಿಸಿಕೊಂಡ್ರು.ತಮ್ಮಯ್ಯ ರವರ ನೇತೃತ್ವದಲ್ಲಿ ರಚಿಸಲಾಗಿದ್ದ ಆಂಟಿ ರೌಡಿ ಸ್ಕ್ವಾಡ್ ಕಿತ್ತು ಹಾಕಿದ್ರು.ಇದೇ ವೇಳೆ ಅಂಡರ್ ವರ್ಲ್ಡ್ ಡಾನ್ ಮುತ್ತಪ್ಪ ರೈ ಶಿಷ್ಯಂದಿರಾದ ಗಣೇಶ್ ಮತ್ತು ತಂಡವನ್ನ ಪೊಲೀಸರು ಬಂಧಿಸುವ ಕಾರ್ಯಾಚರಣೆಯಲ್ಲಿದ್ರು.ಕೆಲವರನ್ನ ಬಂಧಿಸಿದ್ರು.ಈ ವರದಿಯನ್ನ ಸಂಗ್ರಹಿಸಲು ತೆರಳಿದ ವರದಿಗಾರರಿಗೆ ಒಂದು ಶಾಕ್ ಕಾದಿತ್ತು.ಕಾರ್ ಕಳ್ಳತನದ ಆರೋಪದ ಮೇಲೆ ಮಂಜುನಾಥ್ ಅರೆಸ್ಟ್ ಆಗಿ ಪೊಲೀಸರ ಅತಿಥಿಯಾಗಿದ್ದುದು ಕಂಡು ಬಂತು.ಠಾಣೆಯಲ್ಲಿ ಕೋಳ ತೊಡಗಿಸಿ ಕೂರಿಸಿದ್ರು.ಪತ್ರಕರ್ತನಾಗಿದ್ದ ಮಂಜುನಾಥ್ ಆವತ್ತು ಪತ್ರಕರ್ತರಿಗೇ ಆಹಾರವಾಗಿಬಿಟ್ಟ.ಈ ವಿಚಾರ ಮನೆಯವರಿಗೆ ಗೊತ್ತಾದಾಗ ನಮ್ಮ ಪಾಲಿಗೆ ಅವನು ಸತ್ತುಹೋದ ಅಂತ ಆಕ್ರೋಷ ವ್ಯಕ್ತಪಡಿಸಿದ್ರು.ಅಷ್ಟರಲ್ಲಿ ಮಂಜುನಾಥ್ ಸಾಕಷ್ಟು ದಾರಿ ತಪ್ಪಿದ್ದ.ಕಾರು ಕಳ್ಳನ ಬಂಧನ ಎಂಬ ಸುದ್ದಿಯೂ ರಾರಾಜಿಸಿತು.ಆಗಾಗಲೇ ಮಂಜುನಾಥ್ ಗೆ ನೋಟೆಡ್ ಕ್ರಿಮಿನಲ್ ಗಳ ಪರಿಚಯವಾಗಿತ್ತು.ಕಾರುಗಳನ್ನ ಕದ್ದು ಚಾಸಿ ಬದಲಾಯಿಸಿ ಮಾರಾಟ ಮಾಡುವ ಕ್ರೈಂಮ್ ನಲ್ಲಿ ನಿಸ್ಸೀಮನಾಗಿದ್ದ.ಕಾರು ಕಳ್ಳತನ ಕೇಸ್ ನಲ್ಲಿ ಸಿಕ್ಕಿಬಿದ್ದ ಮಂಜುನಾಥ್ ಜಾಮೀನು ಪಡೆದು ಹೊರಬಂದ ನಂತರ ಕೆಲ ಕಾಲ ಭೂಗತವಾದ.ಈ ವೇಳೆ ಮಂಜುನಾಥ್ ವೃತ್ತಿಯೇ ಬದಲಾಗಿ ಹೋಗಿತ್ತು.ಸೈಲೆಂಟಾಗಿ ಮಾಂಸ ದಂಧೆಯಲ್ಲಿ ತೊಡಗಿಸಿಕೊಂಡಿದ್ದ.ವಾರಪತ್ರಿಕೆಯೊಂದನ್ನ ನಡೆಸುತ್ತಿದ್ದ ಬ್ಯೂಟಿಷಿಯನ್ ಕೂರ್ಗಿ ಮಹಿಳೆಯ ಪರಿಚಯವಾಯ್ತು.ಕೆ.ಜಿ.ಕೊಪ್ಪಲಿನಲ್ಲಿ ದಂಧೆ ನಡೆಸುತ್ತಿದ್ದ ಮಹಿಳೆಯ ಪರಿಚಯವೂ ಆಯ್ತು.ಇವರಿಬ್ಬರ ಒಡನಾಟದಿಂದ ಮಾಂಸ ದಂಧೆಯ ರುಚಿ ಹತ್ತಿಸಿಕೊಂಡ.ಈ ಮಧ್ಯೆ ಮಂಡ್ಯಾದ ನಿವಾಸಿ ಚಂದ್ರಿಕಾಳನ್ನ ಮಂಜುನಾಥ್ ಮದುವೆ ಆದ.ಇದ್ದಕ್ಕಿದ್ದಂತೆ ಮಂಜುನಾಥ್ ಸಂಪೂರ್ಣವಾಗಿ ಹಸಿ ಮಾಂಸದ ದಂಧೆಗೆ ಇಳಿದು ಬಿಟ್ಟ.ಮಾಂಸದ ದಂಧೆಗೆ ಕೈ ಹಾಕಿದ ಮಂಜುನಾಥ್ ಮದುವೆಯಾದ ಚಂದ್ರಿಕಾ ಜೊತೆ ಅನ್ಯೋನ್ಯತೆ ಬೆಳೆಸಲಿಲ್ಲ.ಮಾಂಸ ದಂಧೆಯಲ್ಲಿ ಸಾಕಷ್ಟು ಹಣ ಕೈ ಸೇರಿತು.ಚಂದ್ರಿಕಾಗೂ ಈತನಿಂದ ಟಾರ್ಚರ್ ಶುರುವಾಗಿತ್ತು.ಗಂಡನ ಸೊಕ್ಕು ಮುರಿಯಲು ನಿರ್ಧರಿಸಿದ ಚಂದ್ರಿಕಾ ಒಡನಾಡಿ ಸಂಸ್ಥೆಯ ಮೊರೆ ಹೋದ್ಲು.ಮಂಜುನಾಥ್ ನ ಮಾಂಸ ದಂಧೆಯ ಸಂಪೂರ್ಣ ಮಾಹಿತಿ ಬಿಚ್ಚಿಟ್ಲು.ಆಗಾಗಲೇ ವೇಶ್ಯಾವಟಿಕೆ ಕೇಂದ್ರಗಳ ಮೇಲೆ ಸಮರ ಸಾರಿದ್ದ ಒಡನಾಡಿ ಸಂಸ್ಥೆ ಮಂಜುನಾಥ್ ಚಲನವಲನಗಳ ಮೇಲೂ ಕಣ್ಣಿಟ್ಟಿತು.ಆಗ ಗೊತ್ತಾಗಿದ್ದು ಇಲವಾಲದ ಡ್ಯೂಡ್ರಾಪ್ ರೆಸಾರ್ಟ್ಸ್ ನಲ್ಲಿ ನಡೆಯುತ್ತಿದ್ದ ಹಸಿ ಮಾಂಸದ ದಂಧೆ ವಿಚಾರ.ಉದಯ ಟಿವಿ ಯಲ್ಲಿ ಪ್ರಸಾರ ವಾಗುತ್ತಿದ್ದ ಕ್ರೈಂ ಸ್ಟೋರಿ ಹಾಗೂ ಒಡನಾಡಿ ಸಂಸ್ಥೆ ಜಂಟಿ ಕಾರ್ಯಾಚರಣೆ ನಡೆಸಿ ಡ್ಯೂ ಡ್ರಾಪ್ ರೆಸಾರ್ಟ್ ಮೇಲೆ ದಾಳಿ ನಡೆಸಿತು.ಕೆಲವು ಯುವತಿಯರ ರಕ್ಷಣೆ ಆಯ್ತು.ಆಗ ಸ್ಯಾಂಟ್ರೋ ಕಾರಿನಲ್ಲಿ ಬಂದ ಮಂಜುನಾಥ್ ಕ್ಷಣಾರ್ಧದಲ್ಲಿ ಕಾರಿನಲ್ಲೇ ಎಸ್ಕೇಪ್ ಆದ.ಆದ್ರೆ ಎಸ್ಕೇಪ್ ಆದ ವಿಡಿಯೋ ಕ್ರೈಂ ಸ್ಟೋರಿ ತಂಡದ ಕ್ಯಾಮರಾದಲ್ಲಿ ಸೆರೆಯಾಗಿತ್ತು.ದೃಶ್ಯಗಳನ್ನ ಪರಿಶೀಲಿಸಿದಾಗ ಮತ್ತೊಂದು ಮಾಹಿತಿ ಶಾಕ್ ಕೊಟ್ಟಿತ್ತು.ಕಾರಿನಲ್ಲಿ ಇದ್ದದ್ದು ರವಿ ಅಂತ ಒಬ್ಬರ ವಾದವಾದ್ರೆ ಮತ್ತೊಬ್ಬರು ಮಂಜುನಾಥ್ ಅಂತ ವಾದಿಸಿದರು.ಮಂಜುನಾಥ್ ಕೇವಲ ಪತ್ರಕರ್ತ ವೃತ್ತಿ ಬದಲಿಸಿದ್ದಲ್ಲದೆ ಹೆಸರನ್ನೂ ಸಹ ಬದಲಿಸಿಕೊಂಡಿದ್ದ.ಮಂಜುನಾಥ್…ರವಿ ಆಗಿ ಬದಲಾಗಿದ್ದ.ತಲೆಯಲ್ಲಿದ್ದ ಕೂದಲೂ ಕಡಿಮೆಯಾಗಿದ್ದ ಕಾರಣ ಗೊಂದಲಕ್ಕೆ ಸಿಲುಕುವಂತಾಯಿತು.ಒಟ್ಟಾರೆ ಮಂಜುನಾಥ್ ನೇ ರವಿಯಾಗಿ ಬೆಳಕಿಗೆ ಬಂದಿದ್ದ.ಸ್ಯಾಂಟ್ರೋ ಕಾರಿನಲ್ಲಿ ಬಂದ ರವಿ ಸ್ಯಾಂಟ್ರೋ ರವಿಯಾಗಿ ಹೆಸರಾದ.

ಆವತ್ತು ಒಡನಾಡಿ ಸಂಸ್ಥೆಯ ಕಾರ್ಯಾಚರಣೆಗೆ ಹಿನ್ನಡೆಯಾದಾಗ ಸ್ಯಾಂಟ್ರೋ ರವಿಯನ್ನ ರೆಡ್ ಹ್ಯಾಂಡಾಗಿ ಹಿಡಿಯುವ ಛಲಕ್ಕೆ ಬಿದ್ದರು. ಒಡನಾಡಿ ಸಂಸ್ಥೆ ಸ್ಯಾಂಟ್ರೋ ರವಿಯನ್ ಲಾಕ್ ಮಾಡಲು ಸಂಚು ರೂಪಿಸುತ್ತಲೇ ಇತ್ತು.ಇದೇ ವೇಳೆ ಒಡನಾಡಿ ಸಂಸ್ಥೆಗೆ ದಟ್ಟಗಳ್ಳಿಯಲ್ಲಿ ದಂಧೆ ನಡೆಯುತ್ತಿರುವ ಮಾಹಿತಿ ತಲುಪಿತ್ತು.ಕಾರ್ಯತಂತ್ರ ರೂಪಿಸಿದ ಒಡನಾಡಿ ಸಂಸ್ಥೆಯು ಕ್ರೈಂ ಸ್ಟೋರಿ ತಂಡದೊಂದಿಗೆ ಸೇರಿ ಜಂಟಿ ಕಾರ್ಯಾಚರಣೆ ನಡೆಸಿ ಸ್ಯಾಂಟ್ರೋ ರವಿಯನ್ನ ರೆಡ್ ಹ್ಯಾಂಡಾಗಿ ಲಾಕ್ ಮಾಡಿತು.ಆಗ ಮೈಸೂರು ನಗರ ಪೊಲೀಸ್ ಆಯುಕ್ತರಾಗಿದ್ದ ಪ್ರವೀಣ್ ಸೂದ್ ರವರು ಸ್ಯಾಂಟ್ರೋ ರವಿಯನ್ನ ಜೈಲಿಗೆ ತಳ್ಳಿದ್ರು.ರವಿ ಜೈಲು ಪಾಲಾಗುತ್ತಿದ್ದಂತೆಯೇ ಇತ್ತ ಪತ್ನಿ ಚಂದ್ರಿಕಾ ಹಣದ ಸಮೇತ ಎಸ್ಕೇಪ್ ಆದ್ಲು.ನಂತರ ಜೈಲಿನಿಂದ ಬಿಡುಗಡೆಯಾದ ಸ್ಯಾಂಟ್ರೋ ರವಿ ಮೊದಲ ಕೆಲಸ ಚಂದ್ರಿಕಾಳನ್ನ ಪತ್ತೆ ಹಚ್ಚುವುದು.ಕೊನೆಗೂ ಚಂದ್ರಿಕಾಳನ್ನ ಪತ್ತೆ ಹಚ್ಚಿ ಮಗುವಿನ ಸಮೇತ ಕರೆದೊಯ್ದ.ಕೆಲವು ದಿನಗಳ ಕಾಲ ಚಂದ್ರಿಕಾ ಕಾಣಿಸುವುದಿಲ್ಲ.ಚಂದ್ರಿಕಾ ತಾಯಿ ಮಂಡ್ಯಾದಲ್ಲಿ ದೂರು ನೀಡಿದ್ರು.ಕೆಲವು ದಿನಗಳ ನಂತರ ಶ್ರೀರಂಗಪಟ್ಟಣದಲ್ಲಿ ಮಹಿಳೆಯ ಕೊಳೆತ ಮೃತದೇಹ ಪತ್ತೆಯಾಯ್ತು.ಇದು ಚಂದ್ರಿಕಾ ಮೃತದೇಹ ಅನ್ನೋ ತೀರ್ಮಾನಕ್ಕೆ ಬಂದ್ರು.ನಂತರದ ದಿನಗಳಲ್ಲಿ ಚಂದ್ರಿಕಾ ಸತ್ತಿಲ್ಲ ಎಂಬ ಮಾಹಿತಿಯೂ ಬಹಿರಂಗವಾಯ್ತು.ಮತ್ತೊಂದೆಡೆ ಸ್ಯಾಂಟ್ರೋ ರವಿಯನ್ನ ಒಡನಾಡಿ ಸಂಸ್ಥೆಯವರು ಮತ್ತೊಮ್ಮೆ ವೇಶ್ಯಾವಟಿಕೆ ಆರೋಪದಲ್ಲಿ ಅರೆಸ್ಟ್ ಮಾಡಿಸಿದ್ರು.ಆಗ ಕಿರಣ್ ಎಂಬ ಹೆಸರಿನಲ್ಲಿ ರವಿ ಅರೆಸ್ಟ್ ಆದ.

ಪತ್ರಕರ್ತನಾಗಿ,ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕನಾಗಿ ನಂತರ ವೇಧ್ಯಾವಟಿಕೆಯ ಕಿಂಗ್ ಪಿನ್ ಆಗಿ ಹೆಸರಾಗುವ ಮಂಜುನಾಥ್.@.ಸ್ಯಾಂಟ್ರೋ ರವಿ.@.ಕಿರಣ್ ಶ್ರೀಮಂತರ ಕಿಸೆಗೇ ಕೈ ಹಾಕುತ್ತಿದ್ದ..ಹೈ ಪ್ರೊಫೈಲ್ ಗಳ ಬೆಲೆವಣ್ಣುಗಳನ್ನ ಮುಂದಿಟ್ಟುಕೊಂಡು ತನ್ನದೇ ಸಾಮ್ರಾಜ್ಯ ಸ್ಥಾಪಿಸಿಕೊಂಡು ಸಾಗಿದ.ಮೂರ್ನಾಲ್ಕು ಭಾರಿ ಅರೆಸ್ಟ್ ಆದ್ರೂ ಒಂದು ಬಾರಿಯೂ ಕನ್ವಿಕ್ಷನ್ ಆಗದಂತೆ ಚಾಕಚಕ್ಯತೆಯಿಂದ ನುಣುಚಿಕೊಂಡ ಸ್ಯಾಂಟ್ರೋ ರವಿ ಸುಮಾರು ಒಂದೂವರೆ ದಶಕ ಎಲೆಮರೆ ಕಾಯಂತೆ ದಂಧೆ ನಡೆಸಿಕೊಂಡು ಹೋಗುತ್ತಿದ್ದ.ಇದೀಗ ಥಟ್ ಅಂತ ಬಿಜೆಪಿ ಸರ್ಕಾರಕ್ಕೆ ಮಸಿ ಬಳಿಯುವಂತಹ ಕೆಲಸಕ್ಕೆ ಕೈ ಹಾಕಿದ್ದಾನೆ.ಪೊಲೀಸ್ ಇಲಾಖೆಯಲ್ಲೂ ತನ್ನ ಹವಾ ಪ್ರದರ್ಶಿಸಿದ್ದಾನೆ.ಕುಮಾರ ಕೃಪದಲ್ಲಿ ತಂಗುವಷ್ಟು ಪ್ರಭಾವ ಬೆಳೆಸಿಕೊಂಡಿದ್ದಾನೆ ಅಂದ್ರೆ ಈತನ ಹವಾ ಎಷ್ಟಿರಬಹುದು ಊಹಿಸಬಹುದು.ರೌಡಿಗಳು ಎಂಟ್ರಿ ಕೊಡುತ್ತಿದ್ದ ಸ್ಥಳಕ್ಕೆ ಇದೀಗ ಪಿಂಪ್ ಗಳು ಎಂಟ್ರಿ ಕೊಡುವಂತಾಗಿದೆ ಕುಮಾರ ಕೃಪಾದ ಸ್ಥಿತಿ.

ಹೆಣ್ಣುಮಕ್ಕಳನ್ನ ಮದುವೆ ಆಗಿ ನಂತರ ತನ್ನ ಅನುಕೂಲಕ್ಕ ತಕ್ಕಂತೆ ಬಳಸಿಕೊಳ್ಳುತ್ತಿದ್ದ ಸ್ಯಾಂಟ್ರೋ ರವಿ ಇದೀಗ ತನ್ನ ಪತ್ನಿ ಕೊಟ್ಟ ದೂರಿನಿಂದಲೇ ತಗಲಾಕಿಕೊಂಡಿದ್ದಾನೆ.ಈ ಬಾರಿ ಹೆಸರಾಂತ ರಾಜಕಾರಿಣಿಗಳ ಜೊತೆ ತನ್ನ ಒಡನಾಟ ಇರುವುದಾಗಿ ತೋರಿಸಿಕೊಂಡು ಇಕ್ಕಟ್ಟಿಗೆ ಸಿಲುಕಿದ್ದಾನೆ.ಸರ್ಕಾರವೇ ಅಲುಗಾಡುವಂತೆ ಮಾಡಿದ ಸ್ಯಾಂಟ್ರೋ ರವಿ.ಆ.ಮಂಜುನಾಥ್ ಇದೀಗ ಪೊಲೀಸ್ ಇಲಾಖೆಯ ಮೋಸ್ಟ್ ವಾಂಟೆಡ್ ಕ್ರಿಮಿನಲ್.ಒಬ್ಬ ಪಿಂಪ್ ನ ಹಿಡಿಯಲು ಇಡೀ ಪೊಲೀಸ್ ಇಲಾಖೆ ವೀರಪ್ಪನ್ ಸೆರೆಗೆ ಕಾರ್ಯಾಚರಣೆ ನಡೆಸಿದಂತೆ ನಡೆಸಿದೆ.ಇಡೀ ಇಲಾಖೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಜಾಡು ಹಿಡಿದು ಗುಜರಾತ್ ನಲ್ಲಿ ಬಂಧಿಸಿದೆ.ಅಂದ್ರೆ ಸ್ಯಾಂಟ್ರೋ ರವಿಯ ದಂಧೆ ಇಡೀ ದೇಶದಲ್ಲೇ ವಿಸ್ತರಿಸಿದೆ ಅಂದ್ರೂ ತಪ್ಪಿಲ್ಲ.ಸಧ್ಯ ಸ್ಯಾಂಟ್ರೋ ರವಿ ಅರೆಸ್ಟ್ ಗೆ ಮಾತ್ರ ಸೀಮಿತವಾಗದೆ ರಾಜಕಾರಿಣಿಗಳ ಹಾಗೂ ಸೆಲೆಬ್ರಿಟಿಗಳ ಪಾತ್ರಗಳು ಎಷ್ಟಿದೆ ಎಂಬ ಮಾಹಿತಿಯನ್ನ ಪೊಲೀಸರು ಬಿಚ್ಚಿಡಬೇಕಿದೆ.ಪೊಲೀಸ್ ಅಧಿಕಾರಿಗಳನ್ನೇ ವರ್ಗಾವಣೆ ಮಾಡಿಸ್ತಾನೆ ಅಂದ್ರೆ ಇವನಿಗೆ ಇನ್ನೆಂತಹ ಬ್ಯಾಕ್ಗ್ರೌಂಡ್ ಇದೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜವೇ.ಸ್ಯಾಂಟ್ರೋ ರವಿಯಿಂದ ಸತ್ಯ ಕಕ್ಕಿಸುವ ಕಾರ್ಯ ನಡೆಯುತ್ತಿದೆ.ಸಧ್ಯ ಯಾವುದೇ ಸ್ಪೋಟಕ ವಿಚಾರ ಹೊರಬಂದಿಲ್ಲ.

ಕೇವಲ ಪತ್ರಕರ್ತನಾಗಿ ವೃತ್ತಿ ಆರಂಭಿಸಿದ ಸ್ಯಾಂಟ್ರೋ ರವಿ ಕಾರು ಕಳ್ಳನಾಗಿ,ವೇಶ್ಯಾವಟಿಕೆಯ ಕಿಂಗ್ ಪಿನ್ ಆಗಿ,ಬಿಜೆಪಿ ಕಾರ್ಯಕರ್ತನಾಗಿ,ಹಿರಿಯ ರಾಜಕಾರಿಣಿಗಳ ಸ್ನೇಹ ಗಳಿಸುವ ವರೆಗೂ ಬೆಳೆದಿದ್ದಾನೆ.ಕೇವಲ ಮಾಂಸ ದಂಧೆಯಿಂದಲೇ ಖ್ಯಾತಿ ಪಡೆದಿದ್ದಾನೆ.ಜೈಲುವಾಸ ಈತನಿಗೆ ಛಾಳಿ ಎಂದ್ರೂ ತಪ್ಪಿಲ್ಲ.ಈ ಹಿಂದೆ ಕೇವಲ ಪಿಂಪ್ ಆಗಿ ಸಿಕ್ಕಿಬಿದ್ದಿದ್ದ ರವಿ ಇದೀಗ ಹೈಟೆಕ್ ಹೆಸರಿನಲ್ಲಿ ಗುರುತಿಸಿಕೊಂಡಿದ್ದಾನೆ.ಸಧ್ಯ ಈತನ ಮೇಲಿರುವ ಆರೋಪ ಕ್ಕೆ ಭಾರಿ ಶಿಕ್ಷೆಗೆ ಗುರಿಯಾಗಲು ಸಾಧ್ಯವಿಲ್ಲ.ಹಾಗೊಮ್ಮೆ ಬಿಡುಗಡೆ ಭಾಗ್ಯ ದೊರೆತರೆ ಮತ್ತೆ ಅದೇ ಕಸುಬು ಮುಂದುವರೆಸುವಲ್ಲಿ ಯಾವುದೇ ಸಂದೇಹವಿಲ್ಲ.ಅಮಾಯಕ ಮಹಿಳೆಯರನ್ನ‌ ಟಾರ್ಗೆಟ್ ಮಾಡಿಕೊಳ್ಳುವ ಇವನಿಗೆ ಈಗಾದ್ರೂ ಖಾಕಿ ಪಡೆ ಸರಿಯಾದ ಲಾಳ ಹೊಡೆಯಬೇಕಿದೆ.ಇಲ್ಲದಿದ್ದಲ್ಲಿ ಮತ್ತೆ ಇಂತದ್ದೇ ಪ್ರಕರಣಗಳು ಪುನರಾವರ್ತನೆಯಾಗತ್ತೆ.ಬಿಜೆಪಿ ರಾಜಕಾರಿಣಿಗಳ ಜೊತೆ ಒಡನಾಟ ಬೆಳೆಸಿದ ಪರಿಣಾಮ ಪೊಲೀಸರು 12 ದಿನ ಬರೋಬರಿ ಶ್ರಮಿಸಿ ಸ್ಯಾಂಟ್ರೋ ರವಿಯ ಹೆಡೆಮುರಿ ಕಟ್ಟಿದ್ದಾರೆ.ಇನ್ನಾದ್ರೂ ಈತನ ಚಾಳಿಗೆ ಬ್ರೇಕ್ ಬೀಳಬೇಕಿದೆ…

Spread the love

Related post

ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ಪೊಲೀಸರ ದಾಳಿ…ಓರ್ವನ ಬಂಧನ…ವಾಣಿಜ್ಯ ಹಾಗೂ ಗೃಹಬಳಕೆಯ 119 ಸಿಲಿಂಡರ್ ಸೀಜ್…

ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ಪೊಲೀಸರ ದಾಳಿ…ಓರ್ವನ ಬಂಧನ…ವಾಣಿಜ್ಯ ಹಾಗೂ…

ಮೈಸೂರು,ನ21,Tv10 ಕನ್ನಡ ಸಿಸಿಬಿ ಹಾಗೂ ಸರಸ್ವತಿಪುರಂ ಠಾಣೆ ಮತ್ತು ಆಹಾರ ಇಲಾಖೆ ಅಧಿಕಾರಿಗಳು ಅಕ್ರಮವಾಗಿ ನಡೆಸುತ್ತಿದ್ದ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ದಾಳಿ ನಡೆಸಿ ಓರ್ವನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.…
ಲೋಕಾ ಬಲೆಗೆ ಬಿದ್ದ ಬಿಲ್ ಕಲೆಕ್ಟರ್…ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಲಾಕ್…

ಲೋಕಾ ಬಲೆಗೆ ಬಿದ್ದ ಬಿಲ್ ಕಲೆಕ್ಟರ್…ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಲಾಕ್…

ಮೈಸೂರು,ನ21,Tv10 ಕನ್ನಡ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿಲ್ ಕಲೆಕ್ಟರ್ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.ಮೈಸೂರಿನ ಲೋಕಾಯುಕ್ತ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ.ಹೂಟಗಳ್ಳಿ ನಗರಸಭೆಯ ಬಿಲ್ ಕಲೆಕ್ಟರ್ ದಿನೇಶ್ ಲೋಕಾಯುಕ್ತ ಬಲೆಗೆ…
ಕಾಡು ತೊರೆದು ನಾಡಿಗೆ ಬಂದ್ರೂ ಮೂಲ ಆದಿವಾಸಿಗಳಿಗೆ ಸಿಗದ ಸರ್ಕಾರಿ ಸೌಲಭ್ಯ…21 ಕುಟುಂಬ ಹೈರಾಣು…

ಕಾಡು ತೊರೆದು ನಾಡಿಗೆ ಬಂದ್ರೂ ಮೂಲ ಆದಿವಾಸಿಗಳಿಗೆ ಸಿಗದ ಸರ್ಕಾರಿ ಸೌಲಭ್ಯ…21…

ನಂಜನಗೂಡು,ನ20,Tv10 ಕನ್ನಡ ಕಾಡುತೊರೆದು ನಾಡಿಗೆ ಬಂದು ನೆಲೆಸಿದರೂ ಮೂಲ ಆದಿವಾಸಿ ಜನರಿಗೆ ಬವಣೆ ತಪ್ಪಿಲ್ಲ.ಸರ್ಕಾರಿ ಸೌಲಭ್ಯಗಳಿಂದ ವಂಚಿತಾರದ ಸುಮಾರು 21 ಕುಟುಂಬ ಹೈರಾಣರಾಗಿದ್ದಾರೆ.ಪರಿಶಿಷ್ಟ ಪಂಗಡ ಅಧಿಕಾರಿಗಳ ನಿರ್ಲಕ್ಷತನಕ್ಕೆ ಇದೊಂದು…

Leave a Reply

Your email address will not be published. Required fields are marked *