ಸ್ಯಾಂಟ್ರೋ ರವಿ ಅಂದರ್…ಗುಜರಾತ್ ನಲ್ಲಿ ಸಿಕ್ಕಿಬಿದ್ದ ಆರೋಪಿ…

ಸ್ಯಾಂಟ್ರೋ ರವಿ ಅಂದರ್…ಗುಜರಾತ್ ನಲ್ಲಿ ಸಿಕ್ಕಿಬಿದ್ದ ಆರೋಪಿ…

  • Crime
  • January 13, 2023
  • No Comment
  • 208

ಸ್ಯಾಂಟ್ರೋ ರವಿ ಅಂದರ್…ಗುಜರಾತ್ ನಲ್ಲಿ ಸಿಕ್ಕಿಬಿದ್ದ ಆರೋಪಿ…

ಮೈಸೂರು,ಜ13,Tv10 ಕನ್ನಡ
ಮೈಸೂರಿನಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿಕೆ.
ಗುಜರಾತಿನ ಅಹಮದಾಬಾದ್ ನಗರದಲ್ಲಿ ಸ್ಯಾಂಟ್ರೋರವಿ ಸಿಕ್ಕಿಬಿದ್ದಿದ್ದಾನೆ.ಎಡಿಜಿಪಿ ಅಲೋಕ್ ಕುಮಾರ್ ರವರು ಇಂದು ಮೈಸೂರಿನ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಅರೆಸ್ಟ್ ಆದ ಮಾಹಿತಿ ನೀಡಿದ್ದಾರೆ.
ಮೈಸೂರು ನಗರ ಪೊಲೀಸ್‌ರು ಗುಜರಾತ್ ಪೊಲೀಸರ ಸಹಕಾರದೊಂದಿಗೆ ಸ್ಯಾಂಟ್ರೋರವಿಯನ್ನ ಅರೆಸ್ಟ್ ಮಾಡಿದ್ದಾರೆ.
ದೂರು ದಾಖಲಾದ ಮೇಲೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಸಂಚರಿಸಿದ್ದಾನೆ.
ನಾವು ಅವನನ್ನ ಪತ್ತೆ ಹಚ್ಚಲಿಕ್ಕೆ ಮುಂದಾದಾಗ ಬೇರೆ ರಾಜ್ಯಕ್ಕೆ ಹೋಗಿದ್ದಾನೆ.
ಈಗ ಗುಜರಾತ್ ನ್ಯಾಯಾಲಯದಲ್ಲಿ ಹಾಜರು ಪಡಿಸಿ ಅವರ ಅನುಮತಿ ಪಡೆದು ರಾಜ್ಯಕ್ಕೆ ಕರೆದುಕೊಂಡು ಬರುವುದಾಗಿ ಅಲೋಕ್ ಕುಮಾರ್ ತಿಳಿಸಿದ್ದಾರೆ.ಮೈಸೂರು ಬೆಂಗಳೂರು ಎರಡು ಕಡೆಗಳಲ್ಲಿ ಸ್ಯಾಂಟ್ರೋರವಿ ವಾಸವಿದ್ದ ಮನೆಗಳನ್ನ ಪರಿಶೀಲನೆ ಮಾಡಿದ್ದೀವಿ.ಇದಕ್ಕೆ ಸಂಬಂಧಿಸಿದಂತೆ ಒಡನಾಡಿ ಸಂಸ್ಥೆ, ಸಂತ್ರಸ್ತೆಯಿಂದ ಮಾಹಿತಿ ಪಡೆದಿದ್ದೆವು.

ಪೊಲೀಸರಿಂದ ತಪ್ಪಿಸಿಕೊಳ್ಳೊಕೆ ಮೊಬೈಲ್, ಸಿಮ್ ಬದಲಾವಣೆ ಮಾಡಿದ್ದಾನೆ.ಸ್ಥಳ ಬದಲಾವಣೆ ಮಾಡಿದ್ದಾನೆ.
ವಾಹನಗಳ ಬದಲಾವಣೆ ಮಾಡಿದ್ದಾನೆ.
ಇದ್ರಿಂದ ಪೊಲೀಸರಿಗೆ ಸ್ಯಾಂಟ್ರೋರವಿಯನ್ನ ಪತ್ತೆ ಹಚ್ಚಲಿಕ್ಕೆ ಕಷ್ಟ ಆಯ್ತು.ಅವನೊನ್ನ ಹಾರ್ಡ್ ಕ್ರಿಮಿನಲ್.
ಹಳೆಯ ಕ್ರಿಮಿನಲ್.
ಅವನು ಜೈಲಿನಲ್ಲಿದ್ದ.
ಅವನಿಗೆ ಈ ಬೆಳವಣಿಗೆಗಳೆಲ್ಲಾ ಗೊತ್ತಿತ್ತು.ಪರಾರಿಯಾದ ನಂತರ ಗುರುತು ಬದಲಿಸಿಕೊಂಡಿದ್ದ.ವಿಗ್ ತೆಗೆದು ಹಾಕಿ ಬದಲಾಗಿದ್ದ.ಎನ್.ಆರ್.ಠಾಣೆಯ ಇನ್ಸ್ಪೆಕ್ಟರ್ ಅಜರುದ್ದೀನ್ ಹಾಗೂ ಮೇಟಗಳ್ಳಿ ಇನ್ಸ್ ಪೆಕ್ಟರ್ ದಿವಾಕರ್ ರವರು ಆರೋಪಿಯ ಬಂಧನಕ್ಕೆ ಶ್ರಮಿಸಿರುವುದಾಗಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಗುಜರಾತ್ ನ ಅಹಮದಾಬಾದ್ ನಲ್ಲಿ ಮಂಜುನಾಥ್ ಕೆ ಎಸ್ @ ಸ್ಯಾಂಟ್ರೋರವಿ (51) ಜೊತೆಗೆ
ರಾಮ್ ಜೀ (45)
ಸತೀಶ್ ಕುಮಾರ್ (35) ರವರನ್ನೂ ಸಹ ಬಂಧಿಸಲಾಗಿದೆ ಎಂದು
ರಾಜ್ಯ ಎಡಿಜಿಪಿ ಅಲೋಕ್ ಕುಮಾರ್ ಮೈಸೂರಿನಲ್ಲಿ ತಿಳಿಸಿದ್ದಾರೆ…

Spread the love

Related post

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ…

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ……

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ… ಮೈಸೂರು,ಆ30,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆಯ ಗಾರ್ಬೇಜ್ ಮುಕ್ತ ಪಾಯಿಂಟ್ ಯೋಜನೆ…
ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು… ಮೈಸೂರು,ಆ20,Tv10 ಕನ್ನಡ ಹಳೇ ದ್ವೇಷದ ಹಿನ್ನಲೆ ನಡೆದ ಗಲಾಟೆಯಲ್ಲಿ ಕಾರಿನ ಬ್ಯಾನೆಟ್ ಮೇಲೆ…
50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ… ಮೈಸೂರು,ಆ19,Tv10 ಕನ್ನಡ 14-03-2023 ರ ನಿರ್ದೇಶನ ಉಲ್ಲಂಘಿಸಿ 50-50 ಅನುಪಾತದಡಿ ಹಂಚಿಕೆ ಮಾಡಿರುವ…

Leave a Reply

Your email address will not be published. Required fields are marked *