ಟ್ರಾಫಿಕ್ ವಾರ್ಡನ್ ಮಹೇಶ್ವರ ರವರಿಗೆ ಸನ್ಮಾನ…ಉತ್ತಮ ಸೇವೆಗೆ ಸಂದ ಗೌರವ…
- Mysore
- January 24, 2023
- No Comment
- 135
ಟ್ರಾಫಿಕ್ ವಾರ್ಡನ್ ಮಹೇಶ್ವರ ರವರಿಗೆ ಸನ್ಮಾನ…ಉತ್ತಮ ಸೇವೆಗೆ ಸಂದ ಗೌರವ…
ಮೈಸೂರು,ಜ24,Tv10 ಕನ್ನಡ
ಟ್ರಾಫಿಕ್ ವಾರ್ಡನ್ ಆಗಿ ಉತ್ತಮ ಸೇವೆ ಸಲ್ಲಿಸಿದ ಮಹೇಶ್ವರ ರವರಿಗೆ ಮೈಸೂರು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಇಂದು ತಮ್ಮ ಕಚೇರಿಯಲ್ಲಿ ಗೌರವಿಸಿ ಸನ್ಮಾನಿಸಿದ್ದಾರೆ.
ಟ್ರಾಫಿಕ್ ವಾರ್ಡನ್ ಆರ್ಗನೈಸೇಷನ್ ಪ್ರಾರಂಭವಾದ ದಿನಗಳಿಂದ ಸಂಚಾರ ನಿಯಂತ್ರಣ ಸೇವೆಗೆ ಮುಡಿಪಾದ ಮಹೇಶ್ವರ ರವರಿಗೆ ಪೊಲೀಸರಿಂದ ಇದು ಸಂದ ಗೌರವವಾಗಿದೆ.ದಸರಾ ಮಹೋತ್ಸವ,ಹಬ್ಬಹರಿದಿನಗಳು ಹಾಗೂ ಇತರೆ ದಿನಗಳಲ್ಲಿ ಪೊಲೀಸ್ ಬಂದೋಬಸ್ತ್ ಕರ್ತವ್ಯ ನಿರ್ವಹಿಸಿದ್ದಾರೆ.ಹಾಗೂ ಸಾರ್ವಜನಿಕರಿಗೆ ಮತ್ತು ಶಾಲಾ ಮಕ್ಕಳಿಗೆ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಿದ್ದಾರೆ.ಇಂತಹ ಉತ್ತಮ ಕಾರ್ಯಕ್ಕಾಗಿ ಮೈಸೂರು ನಗರ ಪೊಲೀಸರು ಪ್ರಶಂಸಿಸಿ ಗೌರವಿಸಿ ಸನ್ಮಾನಿಸಿದ್ದಾರೆ.ಈ ವೇಳೆ ಡಿಸಿಪಿ ಮುತ್ತುರಾಜ್ ರವರೂ ಮಹೇಶ್ವರ ರವರಿಗೆ ಶುಭಹಾರೈಸಿದ್ದಾರೆ…