
ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರ ಧಾರುಣ ಸಾವು…ಹಳಿ ದಾಟುವಾಗ ದುರ್ಘಟನೆ…
- CrimeTV10 Kannada Exclusive
- January 25, 2023
- No Comment
- 236
ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರ ಧಾರುಣ ಸಾವು…ಹಳಿ ದಾಟುವಾಗ ದುರ್ಘಟನೆ…
ಮಂಡ್ಯ,ಜ25,Tv10 ಕನ್ನಡ
ಮಾಲ್ಗುಡಿ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ ಘಟನೆ ಮಂಡ್ಯ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಮೈಸೂರಿಂದ- ಬೆಂಗಳೂರಿಗೆ ಹೊರಟಿದ್ದ ಮಾಲ್ಗುಡಿ ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಕಾಚಿಗುಡ ಎಕ್ಸ್ ಪ್ರೆಸ್ ನಿಂದ ಇಳಿದಿದ್ದ ಮಹಿಳೆಯರು
ಹಳಿ ಧಾಟುವಾಗ ರೈಲಿಗೆ ಸಿಲುಕಿದ್ದಾರೆ.
ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಕಾಚಿಗುಡ ಎಕ್ಸ್ ಪ್ರೆಸ್ ರೈಲು.ಇದೇ ವೇಳೆ ಮೈಸೂರಿನಿಂದ ಬೆಂಗಳೂರಿನತ್ತ ಹೊರಟಿದ್ದ ಮಾಲ್ಗುಡಿ ಎಕ್ಸ್ ಪ್ರೆಸ್.ಸ್ಥಳದಲ್ಲಿ ಸಂಬಂಧಿಕರ ಗೋಳಾಟ ಮುಗಿಲು ಮುಟ್ಟಿದೆ.ಬಸರಾಳು ಸಮೀಪದ ಹುರುಳಿಜವರನಕೊಪ್ಪಲು ಮೂಲದ ಶಶಿ ಮೃತ ಮಹಿಳೆ.
ಮತ್ತೊಬ್ಬರ ಗುರುತು ಪತ್ತೆಗಾಗಿ ಪ್ರಯತ್ನ ನಡೆದಿದೆ.ಸ್ಥಳಕ್ಕೆ ರೈಲ್ವೇ ಪೊಲೀಸರು, ಸ್ಥಳೀಯ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ…