TV10 Kannada Exclusive

ಮಹಿಳೆಗೆ 1.41 ಕೋಟಿ ವಂಚನೆ…ಕೋ.ಆಪರೇಟಿವ್ ಬ್ಯಾಂಕ್ ನಿಂದ ಅಕ್ರಮವಾಗಿ ವರ್ಗಾವಣೆ…ಮ್ಯಾನೇಜರ್,ಜನರಲ್ ಮ್ಯಾನೇಜರ್,ಅಧ್ಯಕ್ಷನ ವಿರುದ್ದ ವಂಚನೆ ಪ್ರಕರಣ…

ಮಹಿಖೆಯೊಬ್ಬರ ಸಿಸಿಎಲ್ ಖಾತೆಯಿಂದ ಅಕ್ರಮವಾಗಿ 1.41 ಕೋಟಿ ಹಣವನ್ನ ಅನುಮತಿ ಇಲ್ಲದೆ ಅಕ್ರಮವಾಗಿ ವರ್ಗಾವಣೆ ಮಾಡಿದ ಹಿನ್ನಲೆ ಕೋ ಆಪರೇಟಿವ್ ಬ್ಯಾಂಕ್ ಒಂದರ ಮ್ಯಾನೇಜರ್,ಜನರಲ್ ಮ್ಯಾನೇಜರ್ ಹಾಗೂ ಅಧ್ಯಕ್ಷನ ವಿರುದ್ದ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಹೂಟಗಳ್ಳಿಯಲ್ಲಿರುವ ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಪ್ರಕರಣ ನಡೆದಿದ್ದು ವಂಚನೆಗೆ ಒಳಗಾದ ಸುನಿತ ಎಂಬುವರು ಮ್ಯಾನೇಜರ್ ಶಿವಕುಮಾರ್,ಜನರಲ್ ಮ್ಯಾನೇಜರ್ ಸುರೇಶ್ ಹಾಗೂ ಅಧ್ಯಕ್ಷ ಬಸಂತ್ ಎಂಬುವರ
Read More

ಮಾನಸಿಕ ಖಿನ್ನತೆ…ಯುವತಿ ಆತ್ಮಹತ್ಯೆ…ಡೆತ್ ನೋಟ್ ಬರೆದು ಸೂಸೈಡ್…

ಮೈಸೂರು,ಏ16, ಡೆಕಥ್ಲಾನ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ರಾಮಕೃಷ್ಣನಗರ ಹೆಚ್ ಬ್ಲಾಕ್ ನಲ್ಲಿ ನಡೆದಿದೆ.*ನಾನು ಯಾವತ್ತೋ ಸಾಯಬೇಕಿತ್ತು,ಈಗ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ.ನನ್ನ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾಳೆ.ಅಧ್ವಿಕ(21) ಮೃತ ದುರ್ದೈವಿ.ಮಾತಾಅಮೃತಾನಂದಮಯಿ ಕಾಲೇಜಿನಲ್ಲಿ ಬಿಕಾಂ ಮುಗಿಸಿ ಡೆಕಥ್ಲಾನ್ ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದಳು.ಕೆಲಸ ಮುಗಿಸಿ ಮನೆಗೆ ಬಂದ ಅಧ್ವಿಕ ಕೊಠಡಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದಾಳೆ.ತಾಯಿ
Read More

ವೃದ್ದ ಮಹಿಳೆ ಕೈಕಾಲು ಕಟ್ಟಿಹಾಕಿ ಚಿನ್ನಾಭರಣ ದೋಚಿದ ಖದೀಮರು…ಅಪರಿಚಿತ ಯುವಕ,ಯುವತಿಯಿಂದ ಕೃತ್ಯ…ಹಾಡುಹಗಲೇ ಹಲ್ಲೆ ನಡೆಸಿ ದರೋಡೆ…

ಸಾಲಿಗ್ರಾಮ,ಏ16,Tv10 ಕನ್ನಡ ಹಾಡುಹಗಲೇ ಅಪರಿಚಿತ ಯುವಕ ಹಾಗೂ ಯುವತಿ ಮನೆಗೆ ಪ್ರವೇಶಿಸಿ ಲಗ್ನಪತ್ರಿಕೆ ಕೊಡುವ ನೆಪದಲ್ಲಿ ವೃದ್ದೆಯ ಕೈಕಾಲು ಕಟ್ಟಿಹಾಕಿ ಹಲ್ಲೆ ನಡೆಸಿ 4 ಲಕ್ಷ ಮೌಲ್ಯದ 50 ಚಿನ್ನದ ಸರ ದರೋಡೆ ಮಾಡಿ ಪರಾರಿಯಾದ ಘಟನೆ ಕೆ.ಆರ್.ನಗರ ತಾಲೂಕು ಸಾಲಿಗ್ರಾಮದ ಹರದನಹಳ್ಳಿ ಗ್ರಾಮದಲ್ಲಿ ನಡೆದಿದೆ.ಶೈಲಾ(76) ಎಂಬ ವೃದ್ದ ಮಹಿಳೆಯನ್ನ ಕಟ್ಟಿಹಾಕಿ ಹಲ್ಲೆ ನಡೆಸಿ ಕೃತ್ಯವೆಸಗಲಾಗಿದೆ.ಅಪರಿಚಿತ ಯುವಕ ಹಾಗೂ ಯುವತಿ ವಿರುದ್ದ ವೃದ್ದ ಮಹಿಳೆಯ ಸಂಭಂಧಿಕರಾದ ಅನುರಾಗ್ ಅರಸ್ ಸಾಲಿಗ್ರಾಮ
Read More

ಬನ್ನೂರು ಹೊಸ ಸೇತುವೆ ಉದ್ಘಾಟಿಸಿ…ಜಿಲ್ಲಾಉಸ್ತುವಾರಿ ಸಚಿವರಿಗೆ ರೈತ ಮುಖಂಡರ ಮನವಿ…

ಬನ್ನೂರು,ಏ16, ಬನ್ನೂರು ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹೊಸ ಸೇತುವೆಯನ್ನ ಶೀಘ್ರದಲ್ಲಿ ಲೋಕಾರ್ಪಣೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ರೈತ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ರವರಿಗೆ ಮನವಿ ಪತ್ರ ಸಲ್ಲಿಸಿದರು.ಕರ್ನಾಟಕ ರಾಜ್ಯ ಮೂಲ ರೈತಸಂಘಟನೆಯ ಜಿಲ್ಲಾಧ್ಯಕ್ಷ ಬನ್ನೂರು ನಾರಾಯಣ್ ನೇತೃತ್ವದ ತಂಡ ಬೆಂಗಳೂರಿನ ಸಚಿವರ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿತು. ಸೇತುವೆ ಬಳಿ ನಡೆದ ಅಪಘಾತದಲ್ಲಿ ತಾಯಿ ಮಗ ಸಾವನ್ನಪ್ಪಿದ ಘಟನೆಯ ಮಾಹಿತಿಯನ್ನ ಸಚಿವರಿಗೆ ತಿಳಿಸಿ
Read More

ಮರಗಳ ಮಾರಣಹೋಮ ವಿಚಾರ…ಪುಟಾಣಿಗಳಿಂದ ಪ್ರತಿಭಟನೆ…

ಮೈಸೂರು,ಏ15, ಮೈಸೂರಿನಲ್ಲಿ ರಸ್ತೆ ಅಗಲಿಕರಣಕ್ಕೆ ಮರಗಳ ಮಾರಣಹೋಮ ನಡೆಸಿದ ಹಿನ್ನಲೆಪುಟಾಣಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದರು.ಮರ ಕಡಿದ ಹಾಕಿದ ರಸ್ತೆಯಲ್ಲಿ ಮರ ಉಳಿಸಿ ಎಂಬ ಪ್ಲೇ ಕಾರ್ಡ್ ಹಿಡಿದು ಜಾಥ ಮಾಡಿದರು.100 ಅಡಿ ರಸ್ತೆ ನಿರ್ಮಾಣಕ್ಕಾಗಿ ಮರ ಕಡಿಯಲಾಗಿತ್ತು.ಅರಣ್ಯ ಇಲಾಖೆ ಅನುಮತಿ ಪಡೆದು ಮರ ಕತ್ತರಿಸಿದ್ದ ಪಾಲಿಕೆ.ಎಸ್ ಪಿ ಕಚೇರಿಯಿಂದ ಹೈದರ್ ಅಲಿ ರಸ್ತೆಯ ಕಾಳಿಕಾಂಬ ದೇಗುಲದವರೆಗೂ ರಸ್ತೆ ನಿರ್ಮಾಣ ನಡೆಯಲಿದೆ.ಹೀಗಾಗಿ40ಕ್ಕೂ ಹೆಚ್ಚು ಮರಗಳನ್ನ ಪಾಲಿಕೆ ತೆರವುಗೊಳಿಸಿದೆ.ಪಾಲಿಕೆ ಹಾಗೂ ಅರಣ್ಯ ಇಲಾಖೆ
Read More

ಎಲೆಕ್ಟ್ರಿಕ್ ಶಾಕ್…ಮೊದಲ ಮಹಡಿಯಿಂದ ಬಿದ್ದು ಬಾರ್ ಬೆಂಡರ್ ಸಾವು…

ಮೈಸೂರು,ಏ15, ಬಾರ್ ಬೆಂಡಿಂಗ್ ಕೆಲಸ ಮಾಡುವಾಗ ಆಕಸ್ಮಿಕವಾಗಿ ವಿಧ್ಯುತ್ ಸಂಪರ್ಕವಾದ ಹಿನ್ನಲೆ ಮೊದಲ ಮಹಡಿಯಿಂದ ಬಿದ್ದು ಕಾರ್ಮಿಕ ಸಾವನ್ನಪ್ಪಿದ ಘಟನೆ ಮೈಸೂರಿನ ಕೆ.ಆರ್.ಮಿಲ್ ಕಾಲೋನಿಯಲ್ಲಿ ನಡೆದಿದೆ.ಟಿ.ನರಸೀಪುರ ನಿವಾಸಿ ರವಿ(35) ಮೃತ ದುರ್ದೈವಿ.ಹೊಸ ಮನೆ ಕಾಮಗಾರಿ ನಡೆಯುತ್ತಿದ್ದ ವೇಳೆ ಮೊದಲಮಹಡಿಯಲ್ಲಿ ಕೆಲಸ ಮಾಡುವಾಗ ಘಟನೆ ನಡೆದಿದೆ.ಕಬ್ಬಿಣದ ಬಾರ್ ಎತ್ತುವಾಗ ಆಕಸ್ಮಿಕವಾಗಿ ವಿದ್ಯುತ್ ಸಂಪರ್ಕವಾಗಿದೆ.ಶಾಕ್ ನಿಂದಾಗಿ ರವಿ ಮೊದಲ ಮಹಡಿಯಿಂದ ಬಿದ್ದಿದ್ದಾನೆಂದು ಹೇಳಲಾಗಿದೆ.ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
Read More

ಪೊಲೀಸ್ ಪೇದೆ ಮೇಲೆ ಹಲ್ಲೆ…ಕಾರ್ ನಿಲ್ಲಿಸಬೇಡ ತೆಗಿ ಎಂದಿದ್ದೇ ತಪ್ಪಾಯ್ತು…ಯುವಕನ ವಿರುದ್ದ FIR…

ಮೈಸೂರು,ಏ14, ಕಾರನ್ನ ನಿಲ್ಲಿಸಬೇಡ ತೆಗಿ ಎಂದು ಹೇಳಿದ ಕರ್ತವ್ಯ ನಿರತ ಪೊಲೀಸ್ ಪೇದೆ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿದ ಘಟನೆ ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಬಳಿ ನಡೆದಿದೆ.ದೇವರಾಜ ಪೊಲೀಸ್ ಠಾಣೆ ಪೇದೆ ಪುಟ್ಟರಾಜು ಎಂಬುವರು ಹಲ್ಲೆಗೊಳಗಾದವರು.ಕೆ.ಸಿ.ಲೇಔಟ್ ನ ನಿವಾಸಿ ಪ್ರೀತಂ ಹಲ್ಲೆ ನಡೆಸಿದ ಯುವಕ.ನಿನ್ನೆ ತಡರಾತ್ರಿ ಜಯಮಾರ್ತಾಂಡ ಗೇಟ್ ಬಳಿ ಪ್ರೀತಂ ಕಾರನ್ನ ನಿಲ್ಲಿಸಿದ್ದ.ತಡರಾತ್ರಿ ಆದ್ರೂ ನಿಲ್ಲಿಸಿದ ಬಗ್ಗೆ ಪ್ರಶ್ನಿಸಿದ ನೈಟ್ ಬೀಟ್ ನಲ್ಲಿದ್ದ ಪುಟ್ಟರಾಜು ಕಾರನ್ನ
Read More

ಎರಡನೇ ಪತ್ನಿ ಮಗನಿಂದ ತಂದೆ ಹತ್ಯೆ…ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ…

ಮೈಸೂರು,ಏ14, ಎರಡನೇ ಪತ್ನಿ ಮಗನಿಂದಲೇ ತಂದೆ ಭೀಕರವಾಗಿ ಕೊಲೆಯಾದ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೀಡಿಕಾಲೋನಿಯಲ್ಲಿ ನಡೆದಿದೆ.ಮುತೀಬ್(36) ಕೊಲೆಯಾದ ವ್ಯಕ್ತಿ.ಎರಡನೇ ಪತ್ನಿ ಮಗ ಮಾತೀನ್ ತಂದೆಯನ್ನೇ ಕೊಂದ ಮಗ.ತನ್ನ ತಾಯಿಯನ್ನ ಎರಡನೇ ಮದುವೆ ಆಗಿದ್ದ ಮುತೀಬ್ ಜೊತೆ ಆಗಾಗ ಮತೀನ್ ಗಲಾಟೆ ಮಾಡುತ್ತಿದ್ದ.ತಾಯಿಯನ್ನ ಮದುವೆ ಆಗಿದ್ದು ಮತೀನ್ ಇಷ್ಟ ಇರಲಿಲ್ಲವೆಂದು ಹೇಳಲಾಗಿದೆ.ಈ ವಿಚಾರದಲ್ಲಿ ಕೆಲವು ದಿನಗಳ ಹಿಂದೆ ಮುತೀಬ್ ಜೊತೆ ಮತೀನ್ ಗಲಾಟೆ ಮಾಡಿದ್ದ.ನಂತರ ಇಬ್ಬರ ನಡುವೆ
Read More

ಜೋಳ ಹಾಕುವ ವಿಚಾರದಲ್ಲಿ ಹೊಡಿಬಡಿ…ಚಾಕುವಿನಿಂದ ಇರಿತ…5 ಮಂದಿ ವಿರುದ್ದ FIR…

ಹುಣಸೂರು,ಏ11, ಜೋಳು ಬಿಡುವ ವಿಚಾರದಲ್ಲಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದ ಘಟನೆ ಹುಣಸೂರು ತಾಲೂಕು ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.ಈ ವೇಳೆ ವ್ಯಕ್ತಿಗೆ ಚಾಕುವಿನಿಂದ ಇರಿಯಲಾಗಿದೆ.ಘಟನೆ ಸಂಭಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 5 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ. ಮಹೇಶ್ ಎಂಬುವರಿಗೆ ಚಾಕುವಿನಿಂದ ಇರಿಯಲಾಗಿದೆ.ಹುಣಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಮಹೇಶ್ ಚಿಕಿತ್ಸೆ ಪಡೆಯುತ್ತಿದ್ದಾರೆ.ಹರಳಹಳ್ಳಿ ಗ್ರಾಮ ಸರ್ವೆ ನಂ.12 ರ 5 ಎಕ್ರೆ ಜಮೀನಿನಲ್ಲಿ ಮಹೇಶ್ ರವರು ಜೋಳ ಹಾಕಲು ಉಳುಮೆ
Read More

ಮುಡಾದಲ್ಲಿ ಮತ್ತೊಂದು ಗೋಲ್ ಮಾಲ್…ಪೌತಿಖಾತೆಯಲ್ಲ ಭ್ರಹ್ಮಾಂಡ ಭ್ರಷ್ಟಾಚಾರ…ನಕಲಿ ವ್ಯಕ್ತಿಗಳಿಗೆ ಪೌತಿಖಾತೆ… ವ್ಯವಸ್ಥಾಪಕ ಸಸ್ಪೆಂಡ್…ಆಯುಕ್ತ ಎ.ಎನ್.ರಘುನಂದನ್ ಆದೇಶ…ಮರಣಹೊಂದಿದ ವ್ಯಕ್ತಿಯ ಆಸ್ತಿ ಕಬಳಿಸಿದ

ಮುಡಾದಲ್ಲಿ ಮತ್ತೊಂದು ಗೋಲ್ ಮಾಲ್…ಪೌತಿಖಾತೆಯಲ್ಲ ಭ್ರಹ್ಮಾಂಡ ಭ್ರಷ್ಟಾಚಾರ…ನಕಲಿ ವ್ಯಕ್ತಿಗಳಿಗೆ ಪೌತಿಖಾತೆ… ವ್ಯವಸ್ಥಾಪಕ ಸಸ್ಪೆಂಡ್…ಆಯುಕ್ತ ಎ.ಎನ್.ರಘುನಂದನ್ ಆದೇಶ…ಮರಣಹೊಂದಿದ ವ್ಯಕ್ತಿಯ ಆಸ್ತಿ ಕಬಳಿಸಿದ ವಂಚಕರ ಜೊತೆ ಕೈಜೋಡಿಸಿದ ಆರೋಪ ಸಾಬೀತಾದ ಹಿನ್ನಲೆ ಅಮಾನತು… ಮೈಸೂರು,ಏ10,Tv10 ಕನ್ನಡ ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಎಂಬ ಆರೋಪಗಳು ಸಾರ್ವಜನಿಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದೆ.ಭ್ರಷ್ಟಾಚಾರದ ಸರಮಾಲೆಗಳನ್ನ ಹೊತ್ತು ಇಡಿ,ಲೋಕಾಯುಕ್ತ ಕಂಗೆಣ್ಣಿಗೆ ಗುರಿಯಾಗಿ ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾದ ಮುಡಾ ಇಷ್ಟೆಲ್ಲಾ ಹಗರಣಗಳನ್ನ ಮೈಮೇಲೆ ಎಳೆದುಕೊಂಡಿದ್ದರೂ ಬುದ್ದಿ
Read More