TV10 Kannada Exclusive

ನಗರದಲ್ಲಿ ಖಾಕಿ ಪಡೆ ಹೈ ಅಲರ್ಟ್…ಅಶೋಕಾ ರಸ್ತೆಯಲ್ಲಿ ಗಸ್ತು…ಜ್ಯೂಯಲರಿ ಮಳಿಗೆ,ಬ್ಯಾಂಕ್ ಭದ್ರತೆ ಬಗ್ಗೆ ಪರಿಶೀಲನೆ…ಸಲಹೆ ಸೂಚನೆ…

ಮೈಸೂರು,ಜ20,Tv10 ಕನ್ನಡ ದರೋಡೆ ಪ್ರಕರಣಗಳು ಘಟಿಸಿದ ಬೆನ್ನ ಹಿಂದೆಯೇ ಮೈಸೂರು ನಗರ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.ಸಾಂಸ್ಕೃತಿಕ ನಗರಿಯಲ್ಲಿ ಯಾವುದೇ ಪ್ರಕರಣಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಮುಂದಾಗಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಅಶೋಕಾ ರಸ್ತೆಯಲ್ಲಿ ಪೆರೇಡ್ ಮಾಡಿದ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವರಾದ ಮುತ್ತುರಾಜ್ ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಅಭಯ ನೀಡಿದರು.ಚಿನ್ನಾಭರಣ ಅಂಗಡಿಗಳ ಭದ್ರತೆ ಹಾಗೂ ಸಿಸಿ ಕ್ಯಾಮರಾಗಳನ್ನ ಪರಿಶೀಲಿಸಿದರು.ಜ್ಯೂಯಲರಿ
Read More

ಮೇಕಪ್ ಆರ್ಟಿಸ್ಟ್ ಖಾಸಗಿ ಫೋಟೋಸ್ ವಿಡಿಯೋ ತೆಗೆದ ಛಾಯಾಗ್ರಾಹಕ…ಮಹಿಳೆ ಕೊಟ್ಟ ಸಾಲ ತೀರಿಸಲು ಸಾಧ್ಯವಾಗದೆ ಬ್ಲಾಕ್ ಮೇಲ್…

ಮೈಸೂರು,ಜ20,Tv10 ಕನ್ನಡ ಆರ್ಥಿಕ ಸಂಕಷ್ಟದಲ್ಲಿದ್ದ ಸ್ನೇಹಿತನಿಗೆ ಕೊಟ್ಟಿದ್ದ ಸಾಲ ವಾಪಸ್ ಹಿಂದಿರುಗಿಸುವಂತೆ ಕೇಳಿದ ಮೇಕಪ್ ಆರ್ಟಿಸ್ಟ್ ರವರ ಖಾಸಗಿ ಫೋಟೋಸ್ ಮತ್ತು ವಿಡಿಯೋಗಳನ್ನ ಪ್ರದರ್ಶಿಸಿ ಬ್ಲಾಕ್ ಮೇಲ್ ಮಾಡಿರುವ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.ಈ ಸಂಭಂಧ ಹೆಸರಾಂತ ಫೋಟೋಗ್ರಾಫರ್ ಹಾಗೂ ಇವರ ತಾಯಿ ವಿರುದ್ದ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಸಂತ್ರಸ್ಥ ಮಹಿಳೆ ಪ್ರಕರಣ ದಾಖಲಿಸಿದ್ದಾರೆ.ಗೋಕುಲಂ ಬಡಾವಣೆಯ ಅಮರನಾಥ್ ಹಾಗೂ ಇವರ ತಾಯಿ ಸರಸ್ವತಿ ಎಂಬುವರ ವಿರುದ್ದ ಸಂತ್ರಸ್ಥೆ ಪೂನಮ್ ಸತ್ಯಜಿತ್
Read More

ಸೀಟ್ ಬಾಡಿಗೆ ವಿಚಾರದಲ್ಲಿ ಕಿರಿಕ್…ಆಟೋ ಚಾಲಕನಿಗೆ ಚಾಕುವಿನಿಂದ ಇರಿತ…ಇಬ್ಬರ ವಿರುದ್ದ ಪ್ರಕರಣ ದಾಖಲು…

ಮೈಸೂರು,ಜ20,Tv10 ಕನ್ನಡ ಆಟೋ ಸೀಟ್ ಬಾಡಿಗೆ ಹೊಡೆಯುವ ವಿಚಾರದಲ್ಲಿ ಇಬ್ಬರು ಯುವಕರು ಕಿರಿಕ್ ತೆಗೆದು ಚಾಲಕನಿಗೆ ಚಾಕುವಿನಿಂದ ಇರಿದ ಘಟನೆ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಸಾತಗಳ್ಳಿ ನಿವಾಸಿ ನವೀದ್ ಪಾಷಾ (25) ಗಾಯಗೊಂಡವರು.ಓಂಕಾರ್ ಹಾಗೂ ಶೇಖರ ಎಂಬುವರ ವಿರುದ್ದ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದೆ.ನವೀದ್ ಪಾಷಾ ರವರು ಗ್ರಾಮಾಂತರ ಬಸ್ ನಿಲ್ದಾಣದಿಂದ ಶಾಂತಿನಗರ,ಕೆಸರೆ ಬಡಾವಣೆಗೆ ಸೀಟ್ ಬಾಡಿಗೆ ಹೊಡೆಯುತ್ತಾರೆ.ಈ ವಿಚಾರದಲ್ಲಿ ಓಂಕಾರ್ ವಿರೋಧಿಸಿ ಈ ಜಾಗದಲ್ಲಿ ಸೀಟ್ ಬಾಡಿಗೆ
Read More

ಕಾಂಗ್ರೆಸ್ ಮುಖಂಡರನ್ನ ಗ್ರಾಮಕ್ಕೆ ನಿಷೇಧಿಸಲಾಗಿದೆ…ನಗರ್ಲೆ ಗ್ರಾಮದಲ್ಲಿ ರಾರಾಜಿಸುತ್ತಿರುವ ಫ್ಲೆಕ್ಸ್ ಗಳು…

ನಂಜನಗೂಡು,ಜ20,Tv10 ಕನ್ನಡ ನಗರ್ಲೆ ಗ್ರಾಮದ ಕಾಂಗ್ರೆಸ್ ಮುಖಂಡರು ಕೈಲಾಗದವರು(ನಾಮರ್ಧರು) ಆದ ಕಾರಣ ಯಾವುದೇ ಕಾಂಗ್ರೆಸ್ ಮುಖಂಡರನ್ನ ಗ್ರಾಮಕ್ಕೆ ನಿಷೇಧಿಸಲಾಗಿದೆ…ವರುಣಾ ವಿಧಾನಸಭಾ ಕ್ಷೇತ್ರ… ಇಂತಹ ಸಂದೇಶವಿರುವ ಫ್ಲೆಕ್ಸ್ ಗಳು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸಿದ ವರುಣಾ ವಿಧಾನಸಭಾ ಕ್ಷೇತ್ರದ ನಗರ್ಲೆ ಗ್ರಾಮದಲ್ಲಿ ರಾರಾಜಿಸುತ್ತಿವೆ.ಸಾಕಷ್ಟು ಸ್ಥಳಗಳಲ್ಲಿ ಇಂತಹ ಭಿತ್ತಿ ಫಲಕಗಳನ್ನ ಅಳವಡಿಸಲಾಗಿದೆ.ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲೇ ಇಂತಹ ಸಂದೇಶ ಕಾಂಗ್ರೆಸ್ ಗೆ ಮುಜುಗರ ತಂದಿದೆ.ನಗರ್ಲೆ ಗ್ರಾಮದ ಅಭಿವೃದ್ದಿ ಬಗ್ಗೆ ಬೇಸತ್ತಿರುವ ಗ್ರಾಮಸ್ಥರು ಇಂತಹ ನಿರ್ಧಾರಕ್ಕೆ
Read More

ಗಾಂಜಾ ಸೇವನೆ ಮಾಡ್ತೀಯ ಎಂದು ಬೆದರಿಸಿ 10 ಸಾವಿರ ಕಿತ್ತ ಖದೀಮರು…ನಾಲ್ವರ ವಿರುದ್ದ FIR ದಾಖಲು…

ಮೈಸೂರು,ಜ20,Tv10 ಕನ್ನಡ ಗಾಂಜಾ ಸೇವನೆ ಮಾಡುತ್ತಿದ್ದೀಯ ಪೊಲೀಸರನ್ನ ಕರೆಸ್ತೀನಿ,ಮನೆಯವರನ್ನ ಕರೆಸ್ತೀನಿ ಎಂದು ಬೆದರಿಕೆ ಹಾಕಿದ ನಾಲ್ವರು ಯುವಕರ ತಂಡ ಖಾಸಗಿ ಕಂಪನಿ ಉದ್ಯೋಗಿಯಿಂದ 10 ಸಾವಿರ ಪೀಕಿದ ಘಟನೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ವಿನಾಯಕನಗರದಲ್ಲಿ ನಡೆದಿದೆ.ಪಡುವಾರಹಳ್ಳಿ ನಿವಾಸಿಗಳಾದ ವರುಣ್,ಒಂಟೆ ಹಾಗೂ ಇನ್ನಿಬ್ಬರ ಮೇಲೆ ಪ್ರಕರಣ ದಾಖಲಾಗಿದೆ.ಖಾಸಗಿ ಕಂಪನಿಯೊಂದರ ಟೆಕ್ನಿಕಲ್ ಅಡ್ವೈಸರ್ ಆಗಿರುವ ಚಿರಾಗ್ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿನಾಯಕನಗರದಲ್ಲಿ ಬಾಡಿಗೆ ಪಡೆದಿದ್ದ ಕೊಠಡಿಯಲ್ಲಿ ಒಂಟಿಯಾಗಿ ಕುಳಿತಿದ್ದ ವೇಳೆ
Read More

ಯೂಟ್ಯೂಬ್ ನಲ್ಲಿ ಬಂದ ಲಿಂಕ್ ಎಫೆಕ್ಟ್…ವೈದ್ಯನಿಗೆ 29.70 ಲಕ್ಷ ಉಂಡೆನಾಮ…

ಮೈಸೂರು,ಜ20,Tv10 ಕನ್ನಡ ಯೂಟ್ಯೂಬ್ ನಲ್ಲಿ ಬಂದ ಲಿಂಕ್ ಒಂದರ ಮೆಸೇಜ್ ಫಾಲೋ ಮಾಡಿದ ಮೈಸೂರಿನ ವೈದ್ಯರೊಬ್ಬರು 29.71 ಲಕ್ಷ ಹಣ ಕಳೆದುಕೊಂಡಿದ್ದಾರೆ.ಶ್ರೀರಾಂಪುರ ನಿವಾಸಿ ಡಾ.ಪಿ.ಶ್ರೀನಿವಾಸ ಮೂರ್ತಿ ಹಣ ಕಳೆದುಕೊಂಡವರು.ಈ ಕುರಿತಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯೂಟ್ಯೂಬ್ ವೀಕ್ಷಿಸುತ್ತಿದ್ದ ವೇಳೆ ಲಿಂಕ್ ಒಂದು ಬಂದಿದೆ.ಇದನ್ನ ಓಪನ್ ಮಾಡಿದಾಗ ಇಂಟರ್ ನ್ಯಾಷನಲ್ ಕಾಂಪಿಟೇಷನ್ ನಲ್ಲಿ ಭಾಗವಹಿಸಲು ಇಚ್ಛೆ ಇದೆಯಾ ಎಂದು ಕೇಳಿದ್ದಾರೆ.ಇದಕ್ಕೆ ಡಾ.ಶ್ರೀನಿವಾಸ ಮೂರ್ತಿ ಒಪ್ಪಿಕೊಂಡು ಅವರು ಹೇಳಿದಂತೆ ಕೆವೈಸಿ
Read More

ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಡಾಲಿ ಧನಂಜಯ ಮದುವೆ ಆಹ್ವಾನ ಪತ್ರಿಕೆ ವಿತರಣೆ…

ನಂಜನಗೂಡು,ಜ19,Tv10 ಕನ್ನಡ ದಕ್ಷಿಣಕಾಶಿ ನಂಜನಗೂಡಿಗೆ ಆಗಮಿಸಿದ ನಟ ಡಾಲಿ ಧನಂಜಯಶ್ರೀಕಂಠಶ್ವರನ ಸನ್ನಿಧಿಯಲ್ಲಿ ಮದುವೆ ಆಹ್ವಾನ ಪತ್ರ ಇಟ್ಟು ಪೂಜೆ ನೆರವೇರಿಸಿ ಪ್ರಾರ್ಥಿಸಿದರು.ನಟ ಡಾಲಿ ಧನಂಜಯಗೆ ಶಾಸಕ ದರ್ಶನ್ ಧ್ರುವನಾರಾಯಣ್ ಸಾಥ್ ನೀಡಿದರು.ದೇವಸ್ಥಾನ ಅರ್ಚಕರು ಸಿಬ್ಬಂದಿಗೆ ಆಮಂತ್ರಣ ಪತ್ರ ನೀಡಿ ಮದುವೆಗೆ ಆಹ್ವಾನಿಸಿದರು. ಧನಂಜಯಇಂದು ಮೈಸೂರಿನ ವಿವಿಧ ಗಣ್ಯರು ಸ್ನೇಹಿತರಿಗೆ ಮದುವೆ ಆಹ್ವಾನ ಪತ್ರಿಕೆ ನೀಡಲಿದ್ದಾರೆ…
Read More

ರಕ್ಷಣೆ ನೀಡಬೇಕಾದ ಪೊಲೀಸರಿಂದ ನಿಂದನೆ ಆರೋಪ…ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ…

ಸರಗೂರು,ಜ18,Tv10 ಕನ್ನಡ ಗಂಡ ಹಾಗೂ ಮನೆಯವರು ನೀಡುತ್ತಿರುವ ಕಿರುಕುಳದ ಬಗ್ಗೆ ದೂರು ನೀಡಲು ಠಾಣೆಗೆ ತೆರಳಿದ ಮಹಿಳೆ ಹಾಗೂ ಸಹೋದರನಿಗೆ ಪೊಲೀಸರು ನಿಂದಿಸಿದ್ದಾರೆಂಬ ಆರೋಪ ಕೇಳಿಬಂದಿದೆ.ಪೊಲೀಸರ ವರ್ತನೆ ಹಾಗೂ ಗಂಡನ ಮನೆಯವರ ಕಿರುಕುಳದಿಂದ ಮನನೊಂದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಸರಗೂರು ತಾಲೂಕು ಮುಳ್ಳೂರು ಗ್ರಾಮದಲ್ಲಿ ಘಟನೆ ನಡೆದಿದೆ.ವಿಷ ಸೇವಿಸಿದ ಮಹಿಳೆಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಳ್ಳೂರು ಗ್ರಾಮದ ಮಹಾಲಕ್ಷ್ಮಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಗೃಹಿಣಿ.ಸರಗೂರು ಪೊಲೀಸ್
Read More

ಎಟಿಎಂ ಗೆ ಹಣ ಹಾಕದೆ ಲಪಟಾಯಿಸಿದ ನೌಕರ…5.80 ಲಕ್ಷ ವಂಚನೆ…ಇಬ್ಬರ ವಿರುದ್ದ FIR ದಾಖಲು…

ಹುಣಸೂರು,ಜ18,Tv10 ಕನ್ನಡ ಹಣ ಎಟಿಎಂಗೆ ತುಂಬದೆ‌ ತೆಗೆದುಕೊಂಡ ಹೋದ ಆರೋಪ ಹಿನ್ನಲೆ ಇಬ್ಬರ ವಿರುದ್ದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹಣ ತುಂಬದೆ ತೆಗೆದುಕೊಂಡು ಹೋದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಹಿನ್ನಲೆ ಪ್ರಕರಣ ದಾಖಲಾಗಿದೆ.ಅಕ್ಷಯ್ ಕುಮಾರ್ ಹಾಗೂ ತೇಜಸ್ವಿನಿ ಎಂಬುವವರ ವಿರುದ್ದ ಎಫ್ ಐ ಆರ್ ದಾಖಲಾಗಿದೆ.ಎಟಿಎಂಗೆ ಹಣ‌ ತುಂಬವ ಏಜೆನ್ಸಿ‌ ಪಡೆದಿದ್ದ ಟಿ ಎಲ್ ಎಂಟರ್‌ಪ್ರೈಸಸ್ ನಲ್ಲಿ ಕೆಲಸ ಮಾಡುತ್ತಿದ್ದ ಅಕ್ಷಯ್ ಮೈಸೂರು ಜಿಲ್ಲೆಯ ಒಟ್ಟು 16
Read More

ಶೀಲ ಶಂಕೆ: ಪತಿಯಿಂದಲೇ ಪತ್ನಿ ಕೊಲೆ…

ಎಚ್.ಡಿ.ಕೋಟೆ,ಜ16,Tv10 ಕನ್ನಡ ಪತ್ನಿ ಶೀಲ ಶಂಕಿಸಿ ಪತಿ ಮಚ್ಚಿನಿಂದ ಪತ್ನಿ ಕುತ್ತಿಗೆ ಸೀಳಿ ಕೊಂದ ಘಟನೆ ಹೆಚ್.ಡಿ.ಕೋಟೆ ತಾಲೂಕು ಕಣಿಯನಹುಂಡಿ ಗ್ರಾಮದಲ್ಲಿ ನಡೆದಿದೆ.ತೇಜಸ್ವಿನಿ(26) ಮೃತ ದುರ್ದೈವಿ.ಪತಿ ದೇವರಾಜು ನಿಂದ ಕೃತ್ಯ.ಕಳೆದ ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ.ಇಬ್ಬರು ಮಕ್ಕಳೊಂದಿಗೆ ತೋಟದ ಮನೆಯಲ್ಲಿ ವಾಸವಾಗಿದ್ದ ಕುಟುಂಬ.ಘಟನೆ ನಡೆದ ಒಂದೇ ತಾಸಿನಲ್ಲಿ ಆರೋಪಿಯನ್ನ ದಸ್ತಗಿರಿ ಮಾಡಿದ ಪೊಲೀಸರು.ಎಚ್.ಡಿ.ಕೋಟೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು.ಘಟನ ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್, ಅಡಿಷಿನಲ್ ಎಸ್ಪಿ ಮಲ್ಲಿಕ್, ಡಿವೈಎಸ್ಪಿ
Read More