ಸಿಸಿಬಿ ಪೊಲೀಸರ ಜಾಲಕ್ಕೆ ಬಿದ್ದ ಖದೀಮ…ಶೆಟರ್ ಮೀಟಿ ಲಪಟಾಯಿಸುತ್ತಿದ್ದ ಐನಾತಿ…45 ಕನ್ನ ಕಳುವು ಪ್ರಕರಣಗಳಲ್ಲಿ ಭಾಗಿ…

ಸಿಸಿಬಿ ಪೊಲೀಸರ ಜಾಲಕ್ಕೆ ಬಿದ್ದ ಖದೀಮ…ಶೆಟರ್ ಮೀಟಿ ಲಪಟಾಯಿಸುತ್ತಿದ್ದ ಐನಾತಿ…45 ಕನ್ನ ಕಳುವು ಪ್ರಕರಣಗಳಲ್ಲಿ ಭಾಗಿ…

ಸಿಸಿಬಿ ಪೊಲೀಸರ ಜಾಲಕ್ಕೆ ಬಿದ್ದ ಖದೀಮ…ಶೆಟರ್ ಮೀಟಿ ಲಪಟಾಯಿಸುತ್ತಿದ್ದ ಐನಾತಿ…45 ಕನ್ನ ಕಳುವು ಪ್ರಕರಣಗಳಲ್ಲಿ ಭಾಗಿ…

ಮೈಸೂರು,ಫೆ5,Tv10 ಕನ್ನಡ
ಸಿಸಿಬಿ ವಿಶೇಷ ತಂಡ ಹಣೆದ ಬಲೆಗೆ ಖದೀಮ ಲಾಕ್ ಆಗಿದ್ದಾನೆ.ಮೈಸೂರು ಬೆಂಗಳೂರು ಸೇರಿದಂತೆ 10 ಕನ್ನಕಳುವು ಪ್ರಕರಣಗಳು ಪತ್ತೆಯಾಗಿದೆ.ವಿಚಾರಣೆ ವೇಳೆ ಈ ಹಿಂದೆ ಈತ 45 ಕನ್ನ ಕಳುವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಇತ್ತೀಚೆಗೆ ಕನ್ನ ಕಳುವು ಪ್ರಕರಣ ಹೆಚ್ಚಾದ ಹಿನ್ನಲೆ ಬ್ರೇಕ್ ಹಾಕಲು ಸಿಸಿಬಿ ಯಲ್ಲಿ ವಿಶೇಷ ತಂಡ ರಚಿಸಲಾಗಿತ್ತು.ಎನ್.ಆರ್.ಮೊಹಲ್ಲಾದಲ್ಲಿ ಅನುಮಾನಾಸ್ಪದ ವ್ಯಕ್ತಿಯನ್ನ ವಶಕ್ಕೆ ಪಡೆದ ವಿಶೇಷ ತಂಡ ವಿಚಾರಣೆಗೆ ಒಳಪಡಿಸಿದಾಗ ಶಾಕ್ ಆಗುವ ಸರದಿ ಪೊಲೀಸರದಾಗಿತ್ತು.ಶೆಟರ್ ಗಳನ್ನ ಮೀಟಿ ಕಳುವು ಮಾಡುತ್ತಿದ್ದ ವಿಚಾರವನ್ನ ಬಂಧಿತ ಆರೋಪಿ ಒಪ್ಪಿಕೊಂಡಿದ್ದ.ಬಂಧಿತನಿಂದ 1,32,850/- ನಗದು ಹಾಗೂ ಹಾಲಿನ ಉತ್ಪನ್ನಗಳನ್ನ ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನೂ ಸಹ ವಶಪಡಿಸಿಕೊಂಡಿದ್ದಾರೆ. ಹಾಲಿನ ಬೂತ್,ಮೆಡಿಕಲ್ ಶಾಪ್ ಹಾಗೂ ದೇವಸ್ಥಾನಗಳು ಈತನ ಟಾರ್ಗೆಟ್. ವಿಚಾರಣೆ ವೇಳೆ ಈತ 45 ಕನ್ನಕಳುವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.ಮೈಸೂರು,ಹಾಸನ,ಮಂಡ್ಯ,ಬಗಳೂರು ಸೇರಿದಂತೆ ವಿವಿದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕೃತ್ಯ ನಡೆಸಿರುವು ಬೆಳಕಿಗೆ ಬಂದಿದೆ.

ಅಪರಾದ ಮತ್ತು ಸಂಚಾರ ವಿಭಾಗದ ಡಿಸಿಪಿ ಎಸ್.ಜಾಹ್ನವಿ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಸಂದೇಶ್ ಕುಮಾರ್ ನೇತೃತ್ವದಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಕೃಷ್ಣಕುಮಾರ್ ಹಾಗೂ ಸಿಬ್ಬಂದಿಗಳಾದ ಸಲೀಂಪಾಷ,ಗೋವಿಂದ,ಮಧು,ಗಣೇಶ್,ಉಮಾಮಹೇಶ್ ಹಾಗೂ ಚಿಕ್ಕಣ್ಣ ಕಾರ್ಯಾಚರಣೆ ನಡೆಸಿದ್ದಾರೆ.

ಸಿಸಿಬಿ ಪೊಲೀಸರ ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಪ್ರಶಂಸಿಸಿದ್ದಾರೆ…

Spread the love

Related post

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…
ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ…

ವ್ಯಕ್ತಿ ಅನುಮಾನಾಸ್ಪದ ಸಾವು…ನೇಣುಬಿಗಿದ ಸ್ಥಿತಿಯಲ್ಲಿ ಶವ ಪತ್ತೆ… ಮೈಸೂರು,ಸೆ6,Tv10 ಕನ್ನಡ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ಮೇಟಗಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ನಡೆದಿದೆ.ನೇಣು ಬಿಗಿದ ಸ್ಥಿತಿಯಲ್ಲಿ ಶವ…

Leave a Reply

Your email address will not be published. Required fields are marked *