
ಚೆಕ್ ಬೌನ್ಸ್ ಕೇಸ್ ನಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಖೈದಿ ಸಾವು…
- CrimeMysore
- February 6, 2023
- No Comment
- 264
ಚೆಕ್ ಬೌನ್ಸ್ ಕೇಸ್ ನಲ್ಲಿ ಜೈಲು ಸೇರಿದ್ದ ವಿಚಾರಣಾಧೀನ ಖೈದಿ ಸಾವು…
ಮೈಸೂರು,ಫೆ6,Tv10 ಕನ್ನಡ
ಚೆಕ್ ಬೌನ್ಸ್ ಕೇಸ್ ನಲ್ಲಿ ಕಾರಾಗೃಹ ಸೇರಿದ್ದ ವಿಚಾರಣಾಧೀನ ಖೈದಿ ಅನಾರೋಗ್ಯದಿಂದ ಬಳಲಿ ಸಾವನ್ನಪ್ಪಿದ್ದಾರೆ.ನರಸಿಂಹ(40) ಮೃತ ಖೈದಿ.ವಿವಿ ಪುರಂ ಪೊಲೀಸ್ ಠಾಣೆ ಪೊಲೀಸರು ನರಸಿಂಹರನ್ನು ಬಂಧಿಸಿ ಜನವರಿ 4 ರಂದು ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಿದ್ದರು.ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನರಸಿಂಹರಿಗೆ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೆ ನರಸಿಂಹ ಮೃತಪಟ್ಟಿದ್ದಾರೆ.ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…