
ಚಿನ್ನಬೆಳ್ಳಿ ತಯಾರಕರ ನಡುವೆ ಗಲಾಟೆ…ಮೂವರಿಗೆ ಗಾಯ…
- CrimeMysore
- February 7, 2023
- No Comment
- 206
ಚಿನ್ನಬೆಳ್ಳಿ ತಯಾರಕರ ನಡುವೆ ಗಲಾಟೆ…ಮೂವರಿಗೆ ಗಾಯ…
ಮೈಸೂರು,ಫೆ7,Tv10 ಕನ್ನಡ :
ವೇಸ್ಟೇಜ್ ಆಫರ್ ವಿಚಾರದಲ್ಲಿ ಚಿನ್ನ ಬೆಳ್ಳಿ ತಯಾರಕರ ನಡುವೆ ಗಲಾಟೆ ನಡೆದ ಘಟನೆ ಮೈಸೂರಿನ ಇರ್ವಿನ್ ರಸ್ತೆಯಲ್ಲಿ ನಡೆದಿದೆ.
ಅಂಗಡಿಗೆ ನುಗ್ಗಿದ ಗುಂಪು ಹಲ್ಲೆ ನಡೆಸಿದ್ದು ಮೂವರು ಗಾಯಗೊಂಡಿದ್ದಾರೆ.
ನೂತನ್, ಚೇತನ್, ಮನೋಜ್ ಗಾಯಗೊಂಡಿದ್ದಾರೆ.
ಆಭರಣ ತಯಾರಕರೇ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿರುವ ಆರೋಪ ಬಂದಿದೆ.ಕಡಿಮೆ ವೇಸ್ಟೇಜ್‌ನಲ್ಲಿ ಆಭರಣ ತಯಾರಿಸುವುದಾಗಿ ನೂತನ್ ಆಫರ್ ನೀಡಿದ್ದಾರೆ.
ಸಾಮಾನ್ಯವಾಗಿ ಶೇಕಡ 5ರಷ್ಟು ವೇಸ್ಟೇಜ್‌ನಲ್ಲಿ ಆಭರಣ ತಯಾರಿಕೆ ಮಾಡುವ ಪದ್ದತಿ ಇದೆ.
ಶೇಕಡ 4ರಷ್ಟು ವೇಸ್ಟೇಜ್‌ನಲ್ಲೇ ಆಭರಣ ತಯಾರಿಸಿ ಕೊಡುವುದಾಗಿ ನೂತನ್ ಆಫರ್ ನೀಡಿದ್ದಾರೆ.ಈ ಸಂಬಂಧ ಭಿತ್ತಿಪತ್ರ ಹಂಚಿದ್ದಾರೆ.ಈ ಹಿನ್ನೆಲೆಯಲ್ಲಿ ಚಿನ್ನ ಬೆಳ್ಳಿ ತಯಾರಿಸುವ ಕೆಲವು ಮಂದಿ ಆಕ್ಷೇಪ ವ್ಯಕ್ತಪಡಿಸಿ ಗಲಾಟೆ ಮಾಡಿದ್ದಾರೆ.ಮಾತಿನ ಚಕಮಕಿ ನಡೆದಿದೆ.
ಇದೇ ಕಾರಣಕ್ಕಾಗಿ ಗುಂಪಾಗಿ ಬಂದು ಗಲಾಟೆ ಮಾಡಿ ಹಲ್ಲೆ ನಡೆಸಿದ್ದಾರೆ.
ಲಷ್ಕರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…