ಎನ್.ಟಿ.ಎಂ.ಶಾಲೆ ಉಳಿವಿಗಾಗಿ ಮುಂದುವರೆದ ಹೋರಾಟ…ನಂಜನಗೂಡು ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಪ್ರತಿಭಟನೆ…
- TV10 Kannada Exclusive
- February 7, 2023
- No Comment
- 146

ಎನ್.ಟಿ.ಎಂ.ಶಾಲೆ ಉಳಿವಿಗಾಗಿ ಮುಂದುವರೆದ ಹೋರಾಟ…ನಂಜನಗೂಡು ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಪ್ರತಿಭಟನೆ…

ನಂಜನಗೂಡು,ಫೆ7,Tv10 ಕನ್ನಡ
ಎನ್.ಟಿ.ಎಮ್.ಶಾಲೆ ಉಳಿವಿಗಾಗಿ ಹೋರಾಟ ಮುಂದುವರೆದಿದೆ.ಎನ್.ಟಿ.ಎಂ.ಶಾಲೆ ಉಳಿಸಿ ಹೋರಾಟ ಒಕ್ಕೂಟ ವತಿಯಿಂದ ಇಂದು ನಂಜನಗೂಡಿನ ನಂಜುಂಡೇಶ್ವರನ ದೇವಾಲಯದ ಮುಂಭಾಗ ಪ್ರತಿಭಟನೆ ನಡೆದಿದೆ.ರಾಮಕೃಷ್ಣ ಆಶ್ರಮದವರು ಕೊಟ್ಟ ಮಾತನ್ನ ತಪ್ಪಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿದೆ.ಸ್ಮಾರಕ ನಿರ್ಮಾಣ ವೇಳೆ ಶಾಲೆ ನಿರ್ಮಿಸುವುದಾಗಿ ನೀಡಿದ ಭರವಸೆಯನ್ನ ರಾಮಕೃಷ್ಣ ಆಶ್ರಮದ ಆಡಳಿತ ಮಂಡಳಿ ಹುಸಿ ಮಾಡಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.ಎನ್.ಟಿ.ಎಂ.ಶಾಲೆ ಉಳಿವಿಗಾಗಿ ನಿರಂತರ ಹೋರಾಟ ಮುಂದುವರೆಯುತ್ತಿದೆ.ಒಕ್ಕೂಟದ ಅಧ್ಯಕ್ಷ ಎಂ.ಮೋಹನ್ ಕುಮಾರ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ…