
ಹೆಚ್.ಡಿ.ಕೋಟೆ: ಈ ಬಾರಿ ವಿಧಾನಸೌಧಕ್ಕೆ ಎಂಟ್ರಿ ಯಾರಿಗೆ…ಅನಿಲ್ ಇತಿಹಾಸ ಸೃಷ್ಟಿಸುವರೇ…?
- Politics
- February 8, 2023
- No Comment
- 106

ಹೆಚ್.ಡಿ.ಕೋಟೆ: ಈ ಬಾರಿ ವಿಧಾನಸೌಧಕ್ಕೆ ಎಂಟ್ರಿ ಯಾರಿಗೆ…ಅನಿಲ್ ಇತಿಹಾಸ ಸೃಷ್ಟಿಸುವರೇ…?
ಮೈಸೂರು,ಫೆ8,Tv10 ಕನ್ನಡ
ದಿನೇ ದಿನೇ ವಿಧಾನ ಸಭಾ ಚುನಾವಣೆ ಕಾವು ಹೆಚ್ಚುತ್ತಿದೆ.ಆಕಾಂಕ್ಷಿಗಳಲ್ಲೂ ತಳಮಳ ಹೆಚ್ಚುತ್ತಿದೆ.
ಹೆಚ್‌ಡಿ ಕೋಟೆ ಕ್ಷೇತ್ರದಲ್ಲಿ ಚುನಾವಣೆ ಭರಾಟೆ ಆರಂಭವಾಗಿದೆ.ಸ್ಪರ್ಧೆಗಾಗಿ ಆಕಾಂಕ್ಷಿಗಳು ವೇದಿಕೆಗೆ ಸಜ್ಜಾಗುತ್ತಿದ್ದಾರೆ. ಈಗಾಗಲೇ
ಕ್ಷೇತ್ರದಲ್ಲಿ ಮತದಾರ ಮನೆ ಬಾಗಿಲು ತಟ್ಟುತ್ತಿದ್ದಾರೆ.
ಹೆಚ್.ಡಿ ಕೋಟೆ ಕ್ಷೇತ್ರದಲ್ಲಿ ಕೈ ತೆನೆ ನಡುವೆ ನೇರ ಹಣಾಹಣಿ ಇದೆ.
ಈ ಬಾರಿ ಕೋಟೆಯಲ್ಲಿ ಗೆಲ್ಲೋ ನಾಯಕ ಯಾರು…? ಎಂಬ ಪ್ರಶ್ನೆಗೆ ಮತದಾರ ಉತ್ತರ ನೀಡಲಿದ್ದಾನೆ.
ಮಾಜಿ ಶಾಸಕರ ಪುತ್ರರತ್ನರೇ ಜಿದ್ದಾಜಿದ್ದಿನ ಕದನಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ.
ಹಾಲಿ ಶಾಸಕ ಅನಿಲ್ ಚಿಕ್ಕಮಾದು ವಿಜಯಪತಾಕೆ ಹಾರಿಸುವರೇ..? ಎಂಬ ಕುತೂಹಲ ಮನೆ ಮಾಡಿದೆ.
ಮತ್ತೊಮ್ಮೆ ಅನಿಲ್ ವಿಜಯಿಯಾದರೆ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಯಾಗಲಿದೆ.
ಮಾಜಿ ಶಾಸಕ ಚಿಕ್ಕಣ್ಣ ಪುತ್ರನಿಗೆ ಈ ಚುನಾವಣೆ ಪ್ರತಿಷ್ಠೆಯಾಗಿ ಹೊರಹೊಮ್ಮಿದೆ.ಈ ಕ್ಷೇತ್ರದಲ್ಲಿ
ಇದುವರೆಗೂ ಬಿಜೆಪಿ ಖಾತೆ ತೆರೆದಿಲ್ಲ.
ಈ ಕ್ಷೇತ್ರದಲ್ಲಿ ಸತತ ಎರಡನೇ ಬಾರಿ ಗೆದ್ದ ಇತಿಹಾಸವಿಲ್ಲ.
ಗೆದ್ದರು ಎರಡನೇ ಬಾರಿಗೆ ಅದೇ ಪಕ್ಷದಲ್ಲಿ ಗೆದ್ದಿರುವ ಇತಿಹಾಸವಿಲ್ಲ. ಹೀಗಾಗಿ ಈ ಬಾರಿ ಅನಿಲ್ ಗೆದ್ದರೆ ಹೊಸ ಇತಿಹಾಸ ಸೃಷ್ಟಿಯಾಗಲಿದೆ.
ಮೈಸೂರು ಭಾಗದ ನಾಯಕ ಸಮುದಾಯದ ಪ್ರಭಾವಿ ಮುಖಂಡ ದಿವಂಗತ ಎಸ್. ಚಿಕ್ಕಮಾದು.
ತಂದೆಯ ನಾಮ ಬಲವೆ ಹಾಲಿ ಶಾಸಕ ಅನಿಲ್‌ಗೆ ಶ್ರೀರಕ್ಷೆಯಾಗಿದೆ.
ಯುವಕನಾಗಿದ್ದರು ಹಿಂದಿನ ಚುನಾವಣೆ ಗೆದ್ದಿದ್ದು ಅಪ್ಪನ ಹೆಸರಿನ ಪ್ರಭಾವದ ಮೇಲೆ.
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್, ಮಾಜಿ ಸಚಿವ ಹೆಚ್.ಸಿ ಮಹದೇವಪ್ಪರ ಬೆಂಬಲವಿರುವ ಅನಿಲ್
ಈ ಬಾರಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ.ಇತ್ತ ಜೆಡಿಎಸ್‌ನಲ್ಲಿ ಟಿಕೆಟ್‌ಗಾಗಿ ಫೈಟ್ ಇದೆ.ಮಾಜಿ ಶಾಸಕ ಚಿಕ್ಕಣ್ಣ ಪುತ್ರ ಜಯಪ್ರಕಾಶ್, ಕೃಷ್ಣನಾಯಕರ ನಡುವೆ ಟಿಕೆಟ್ ಗಾಗಿ ಫೈಟ್ ನಡೆಯುತ್ತಿದೆ.
ಬಿಜೆಪಿಯಲ್ಲೂ ಟಿಕೆಟ್‌ಗಾಗಿ ಪೈಪೋಟಿ ಇದೆ. ಟಿಕೆಟ್‌ಗಾಗಿ ಅಪ್ಪಣ್ಣ ಹಾಗೂ ಸಿದ್ದರಾಜು ನಾಯಕರ ದುಂಬಾಲು ಬಿದ್ದಿದ್ದಾರೆ.
ವಿಧಾನಸೌಧಕ್ಕೆ ಯಾರಿಗೆ ಎಂಟ್ರಿ ಸಿಗುತ್ತೆ ಮತದಾರರು ನಿರ್ಧರಿಸಲಿದ್ದಾರೆ.
ಒಟ್ಟು ಮತದಾರರು 2,14,974
ಪುರುಷರು: 1,08,477
ಮಹಿಳೆಯರು: 1,06370
ಇತರೆ-7