ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಿದ ಗ್ರಾಮ ಲೆಕ್ಕಿಗ ಆಂಥೋಣಿ ಸುನಿಲ್ ರಾಜ್ ಸಸ್ಪೆಂಡ್…ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ…Tv10 ವರದಿ ಫಲಶೃತಿ…

ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಿದ ಗ್ರಾಮ ಲೆಕ್ಕಿಗ ಆಂಥೋಣಿ ಸುನಿಲ್ ರಾಜ್ ಸಸ್ಪೆಂಡ್…ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ…Tv10 ವರದಿ ಫಲಶೃತಿ…

ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಿದ ಗ್ರಾಮ ಲೆಕ್ಕಿಗ ಆಂಥೋಣಿ ಸುನಿಲ್ ರಾಜ್ ಸಸ್ಪೆಂಡ್…ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ…Tv10 ವರದಿ ಫಲಶೃತಿ…

ಮೈಸೂರು,ಫೆ8,Tv10 ಕನ್ನಡ
ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಿದ ಟಿ.ನರಸೀಪುರ ತಾಲೂಕು ಮೂಗೂರು ಹೋಬಳಿ ಗ್ರಾಮಲೆಕ್ಕಿಗ ಆಂಥೋಣಿ ಸುನಿಲ್ ರಾಜ್ ಅಮಾನತ್ತಾಗಿದ್ದಾರೆ.ದಾಖಲೆಗಳನ್ನ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರವರು ಆರೋಪ ಸಾಬೀತಾದ ಹಿನ್ನಲೆ ಮಹತ್ವದ ಆದೇಶ ಹೊರಡಿಸಿದ್ದಾರೆ.ಇದು Tv10 ಕನ್ನಡವಾಹಿನಿಯ ವರದಿ ಫಲಶೃತಿಯಾಗಿದೆ.ಈ ಬಗ್ಗೆ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ದಾಖಲೆ ಸಮೇತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು.ಜನವರಿ 31 ರಂದು ಆಂಥೋಣಿ ಸುನಿಲ್ ರಾಜ್ ರ ಗೋಲ್ಮಾಲ್ ಸುದ್ದಿಯನ್ನ Tv10 ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡಿತ್ತು.ವರದಿಗೆ ಎಚ್ಚೆತ್ತ ಜಿಲ್ಕಾಧಿಕಾರಿಗಳು ಆಂಥೋಣಿ ಸುನಿಲ್ ರಾಜ್ ವಿರುದ್ದ ಕ್ರಮ ಕೈಗೊಂಡಿದ್ದಾರೆ.

ಮಾಡ್ರಹಳ್ಳಿಯ ಗ್ರಾಮಲೆಕ್ಕಿಗನಾಗಿರುವ ಆಂಥೋಣಿ ಸುನಿಲ್ ರಾಜ್ ಜಮೀನುಗಳಿಗೆ ಕಂದಾಯ ಪಾವತಿಸಿದ ರೈತರಿಗೂ ವಂಚಿಸಿದ್ದರು ಅಲ್ಲದೆ ಸರ್ಕಾರಕ್ಕೆ ಸೇರಬೇಕಾದ ಹಣವನ್ನ ಗುಳುಂ ಮಾಡಿ ಖಜಾನೆಗೂ ಧೋಕಾ ಮಾಡಿದ್ದರು.ಕಂದಾಯ ಪಾವತಿಸಿದ ವೇಳೆ ಸರ್ಕಾರಕ್ಕೆ ಸೇರಬೇಕಾದ ಕಾಪಿಯಲ್ಲಿ ಒಂದು ಮೊತ್ತ ರೈತರಿಗೆ ನೀಡಲಾದ ರಸೀತಿಯಲ್ಲಿ ಒಂದು ಮೊತ್ತ ನಮೂದಿಸಿ ವಂಚಿಸಿದ್ದರು.ಒಂದೇ ದಿನದಲ್ಲಿ 7 ರೈತರಿಗೆ ವಂಚಿಸಿ ಸರ್ಕಾರಕ್ಕೂ ದ್ರೋಹ ಬಗೆದಿದ್ದರು.7 ರೈತರಿಂದ 8162 ರೂಗಳನ್ನ ಪಾವತಿಸಿಕೊಂಡಿದ್ದರು.ಸರ್ಕಾರಕ್ಕೆ ಸೇರಿದ ಕಾಪಿಯಲ್ಲಿ ಕೇವಲ 440 ರೂ ಮಾತ್ರ ನಮೂದಿಸಿದ್ದರು.ಉಳಿದ 7722 ರೂಗಳನ್ನ ಕಬಳಿಸಿದ್ದರು.ಈ ಸಕ್ರಮವನ್ನ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ದಾಖಲೆ ಸಮೇತ ಬಯಲಿಗೆ ಎಳೆದು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದರು.ಈ ಅಕ್ರಮವನ್ನ Tv10 ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡಲಾಗಿತ್ತು.ಇದೀಗ ಸರ್ಕಾರಕ್ಕೆ ವಂಚಿಸಿದ ಗ್ರಾಮಲೆಕ್ಕಿಗ ಆಂಥೋಣಿ ಸುನಿಲ್ ರಾಜ್ ರನ್ನ ಸಸ್ಪೆಂಡ್ ಮಾಡಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *