
ಮೈಸೂರು:ಅನಸ್ತೇಷಿಯಾ ಇಂಜೆಕ್ಷನ್ ತೆಗೆದುಕೊಂಡು ನರ್ಸ್ ಆತ್ಮಹತ್ಯೆ…
- TV10 Kannada Exclusive
- February 11, 2023
- No Comment
- 173
ಮೈಸೂರು:ಅನಸ್ತೇಷಿಯಾ ಇಂಜೆಕ್ಷನ್ ತೆಗೆದುಕೊಂಡು ನರ್ಸ್ ಆತ್ಮಹತ್ಯೆ…
ಮೈಸೂರು,ಫೆ11,Tv10 ಕನ್ನಡ
ಅನಸ್ತೇಷಿಯಾ ಇಂಜೆಕ್ಷನ್ ತೆಗೆದುಕೊಂಡು ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಶರಣಾದ ಘಟನೆ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಶೈಲಜಾ(23)ಮೃತ ದುರ್ದೈವಿ.ಗುಂಡ್ಲುಪೇಟೆಯ ಬೆಟ್ಟದಪುರದ ನಿವಾಸಿಯಾದ ಶೈಲಜಾ ಮಹಮದ್ ಸೇಠ್ ಬ್ಲಾಕ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 5 ವರ್ಷಗಳಿಂದ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು.ಆಸ್ಪತ್ರೆ ಬಳಿ ಇರುವ ವುಮೆನ್ಸ್ ಹಾಸ್ಟೆಲ್ ನಲ್ಲಿ ವಾಸವಿದ್ದರು. ಮಾನಸಿಕವಾಗಿ ಖಿನ್ನತೆಗೆ ಒಳಗಾದ ಶೈಲಜಾ ಅನಸ್ತೇಷಿಯಾ ಇಂಜೆಕ್ಷನ್ ತೆಗೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣ ಎನ್ನಲಾಗಿದೆ.ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…