ಕಾನೂನನ್ನು ಪಾಲಿಸುವ ಮೂಲಕ ಯುವಶಕ್ತಿಯು ಸದೃಢ ದೇಶ ಕಟ್ಟಲು ಸಾದ್ಯ : ಲಯನ್ ಸಿ.ಆರ್.ದಿನೇಶ್.

ಕಾನೂನನ್ನು ಪಾಲಿಸುವ ಮೂಲಕ ಯುವಶಕ್ತಿಯು ಸದೃಢ ದೇಶ ಕಟ್ಟಲು ಸಾದ್ಯ : ಲಯನ್ ಸಿ.ಆರ್.ದಿನೇಶ್.

ಕಾನೂನನ್ನು ಪಾಲಿಸುವ ಮೂಲಕ ಯುವಶಕ್ತಿಯು ಸದೃಢ ದೇಶ ಕಟ್ಟಲು ಸಾದ್ಯ : ಲಯನ್ ಸಿ.ಆರ್.ದಿನೇಶ್.

ಮೈಸೂರು : ಯಾವುದೇ ಒಂದು ದೇಶ ಸದೃಢ ದೇಶವಾಗ ಬೇಕಾದರೆ ಆ ದೇಶದ ಕಾನೂನು ಪಾಲಿಸಬೇಕು. ನಿಜವಾದ ಸಂಪತ್ತು ಆ ದೇಶದ ಆರೋಗ್ಯವಂತ ಪ್ರಜೆಗಳು ಅದರಲ್ಲೂ ಯುವಕರು. ಹಾಗಾಗಿ ಚೈತನ್ಯದಾಯಕ ಕ್ರಿಯಾಶೀಲ ಯುವಶಕ್ತಿಯೇ ದೇಶದ ಶಕ್ತಿ ಎಂದು ಪ್ರಾಂಶುಪಾಲರು ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಲಯನ್ ಸಿ ಆರ್ ದಿನೇಶ್ ತಿಳಿಸಿದರು.

SBRR ಮಹಾಜನ ಕಾನೂನು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನೆ ಮಾಡಿ ಯುವಕರನ್ನು ಸದೃಢ ಪ್ರಜೆಗಳನ್ನಾಗಿ ರೂಪಿಸುವುದೇ ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶವಾಗಿದೆ. ಹಾಗಾಗಿ ಯುವಕರು ವಿದ್ಯಾರ್ಜನೆಯ ಜೊತೆಗೆ ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಳ್ಳಬೇಕು. ವಿವಿಧತೆಯಲ್ಲಿ ಏಕತೆಯ ಮಂತ್ರಕ್ಕೆ ಬದ್ಧರಾಗಿ ಎಲ್ಲರೊಡನೆ ಬೆರೆಯಬೇಕು. ಸಂಕುಚಿತ ಭಾವನೆಗಳಿಗೆ ಯಾವುದೇ ಕಾರಣಕ್ಕೂ ಒಳಗಾಗಬಾರದು. ಚುನಾವಣೆಯಲ್ಲಿ ಸಚ್ಚಾರಿತ್ರ್ಯದ ಅಭ್ಯರ್ಥಿಯನ್ನು ಯಾವುದೇ ಆಮಿಷಗಳಿಗೆ ಒಳಗಾಗದೇ ಆಯ್ಕೆ ಮಾಡಬೇಕು. ಅಭ್ಯರ್ಥಿಗಳೇ ಆಗುವ ಅವಕಾಶ ಸಿಕ್ಕಾಗ ನೈತಿಕ ನಿಷ್ಠೆಯಿಂದ ಮುನ್ನಡೆಯಬೇಕು. ಭೋಗಜೀವನಕ್ಕೆ ಪಕ್ಕಾಗದೆ ಇತರರಿಗೆ ಮಾದರಿಯಾಗಬೇಕು. ನಮ್ಮ ದೇಶವನ್ನು ಕಟ್ಟಿದ ಹಿರಿಯ ಚೇತನಗಳಾದ ಕಡುಗಲಿಗಳ, ಶಾಂತಿಪ್ರಿಯರ, ಧರ್ಮ ಸಹಿಷ್ಣುಗಳ ಇತಿಹಾಸವನ್ನು ಅರಿತು ಆ ಗುಣಗಳನ್ನು ಅಳವಡಿಸಿಕೊಂಡು ಅವರ ಕನಸಿನ ನನಸಾಗಬೇಕು. ಕಾಯಕಕ್ಕಾಗಿ ಆಯ್ದುಕೊಳ್ಳುವ ಕ್ಷೇತ್ರ ಯಾವುದೇ ಆಗಿರಲಿ ಪ್ರಾಮಾಣಿಕತೆ, ಸರಳತೆ, ಸಜ್ಜನಿಕೆಗಳನ್ನು ಮೈಗೂಡಿಸಿಕೊಳ್ಳಬೇಕು. ಧಾರ್ಮಿಕವಾಗಿ ಒಡಕುಗಳು ಮೂಡಿದಾಗ ಸಾಮರಸ್ಯದಿಂದ ಬಗೆಹರಿಸಿಕೊಳ್ಳಬೇಕು. ದುಡುಕಬಾರದು. ಇದೇ ಭಾರತೀಯರೆಲ್ಲರ ಪ್ರಮುಖ ಹಾಗೂ ಅನಿವಾರ್ಯ ಲಕ್ಷಣವಾಗಿದೆ. ಹನಿಹನಿಗೂಡಿದರೆ ಹಳ್ಳವೆಂಬಂತೆ ಒಬ್ಬೊಬ್ಬರೂ ಸರಿ ಹೋದಾಗ ಸಮುದಾಯವೇ ಸಬಲಗೊಳ್ಳುತ್ತದೆ. ಪ್ರಧಾನಿಯವರ ಆಶಯದಂತೆ ಸೈನ್ಯದಲ್ಲಷ್ಟೇ ಅಲ್ಲದೆ ಎಲ್ಲೆಡೆಯೂ ಅಗ್ನಿವೀರರಾಗಬೇಕೆಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ . ಪ್ರಭುಸ್ವಾಮಿ ಎಮ್ ಎಮ್ ರವರು ವಹಿಸಿ ಇಂದಿನ ಯುವಜನರಲ್ಲಿ ಮೌಲ್ಯಗಳು ಕಡಿಮೆಯಾಗುತ್ತಿದೆ ಹಾಗಾಗಿ ಮೌಲ್ಯಯುತ ಬದುಕನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುಬೇಕೆಂದು ಹೇಳಿದರು . ಘಟಕದ ಕಾರ್ಯಕ್ರಮ ಅಧಿಕಾರಿ ಸಿದ್ದರಾಜು ಉಪಸ್ಥಿತರಿದ್ದರು.

Spread the love

Related post

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ…

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ……

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ… ಮೈಸೂರು,ಆ30,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆಯ ಗಾರ್ಬೇಜ್ ಮುಕ್ತ ಪಾಯಿಂಟ್ ಯೋಜನೆ…
ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು… ಮೈಸೂರು,ಆ20,Tv10 ಕನ್ನಡ ಹಳೇ ದ್ವೇಷದ ಹಿನ್ನಲೆ ನಡೆದ ಗಲಾಟೆಯಲ್ಲಿ ಕಾರಿನ ಬ್ಯಾನೆಟ್ ಮೇಲೆ…
50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ… ಮೈಸೂರು,ಆ19,Tv10 ಕನ್ನಡ 14-03-2023 ರ ನಿರ್ದೇಶನ ಉಲ್ಲಂಘಿಸಿ 50-50 ಅನುಪಾತದಡಿ ಹಂಚಿಕೆ ಮಾಡಿರುವ…

Leave a Reply

Your email address will not be published. Required fields are marked *