ಶ್ರೀ ಸ್ವಾಮಿನಾರಾಯಣ ಗುರುಕುಲ ಅಂತರಾಷ್ಟ್ರೀಯ ಶಾಲೆ ಲೋಕಾರ್ಪಣೆ
- TV10 Kannada Exclusive
- February 20, 2023
- No Comment
- 88
ಶ್ರೀ ಸ್ವಾಮಿನಾರಾಯಣ ಗುರುಕುಲ ಅಂತರಾಷ್ಟ್ರೀಯ ಶಾಲೆ ಲೋಕಾರ್ಪಣೆ
ಸಂಸ್ಕೃತಿ ಗಾಗಿ ಮೈಸೂರು ಸಂಸ್ಕಾರಕ್ಕಾಗಿ ಗುರುಕುಲ ಎಂಬ ಧ್ಯೇಯ ವಾಕ್ಯದೊಂದಿಗೆ ಹಸಿರು ಹೊತ್ತ ಪ್ರಕೃತಿಯ ನಡುವೆ ಕಾವೇರಿ ನದಿಯ ಮಡಿಲಿನಲ್ಲಿ ಶ್ರೀ ಸ್ವಾಮಿನಾರಾಯಣ ಗುರುಕುಲ ಅಂತರಾಷ್ಟ್ರೀಯ ಶಾಲೆಯು ಕೆ ಆರ್‌ಎಸ್ ರಸ್ತೆ ಬೆಳಗೊಳದಲ್ಲಿ ಲೋಕಾರ್ಪಣೆಗೆ ಸಿದ್ದಗೊಂಡಿದ್ದು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ರವರು ಉದ್ಘಾಟಿಸಿ
ಲೋಕಾರ್ಪಣೆಗೊಳಿಸಿದರು ಈ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸದ್ಗುರು ಮಹಾಂತ ಶ್ರೀ ದೇವಪ್ರಸಾದ್ ದಾಸ್ ಸ್ವಾಮೀಜಿ ಅವರು ಗುರುಕುಲ ಶಾಲೆಯ ಸಂಸ್ಕೃತಿ ಹಾಗೂ ಸಂಸ್ಕಾರದ ಬಗ್ಗೆ ಹಿತವಚನಗಳನ್ನು ತಿಳಿಸಿದರು ಹಾಗೂ ಮತ್ತೋರ್ವರು ಸ್ವಾಮೀಜಿಗಳಾದ ಗುರು ಮಹಾರಾಜ್ ಶ್ರೀ ಕೃಷ್ಣ ಚರಣ್ ಸ್ವಾಮೀಜಿಗಳು ಭಾಗವಹಿಸಿ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿದರು ಹಾಗೂ ಶ್ರೀಮುಕ್ತಿದಾನಂದ ಸ್ವಾಮೀಜಿಗಳು ಸಹ ಭಾಗವಹಿಸಿ ಕೆಲವು ಹಿತವಚನಗಳನ್ನು ನುಡಿದರು ಈ ಲೋಕಾರ್ಪಣ ಕಾರ್ಯಕ್ರಮದಲ್ಲಿ ಮೇಲುಕೋಟೆ ವಿಧಾನಸಭಾ ಸದಸ್ಯರಾದ ಶ್ರೀ ಪುಟ್ಟರಾಜರವರು ಭಾಗವಹಿಸಿ ಶಾಲೆಯಲ್ಲಿ ನೀಡುತ್ತಿರುವ ವಿದ್ಯಾ ಸದ್ವಿದ್ಯಾ ಬ್ರಹ್ಮ ವಿದ್ಯಾ ಶಿಕ್ಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಇದೆ ವೇದಿಕೆಯಲ್ಲಿ ಗುರುಕುಲ ಶಾಲೆಯ ಹಳೆಯ ವಿದ್ಯಾರ್ಥಿ ಬರೆದಿರುವ ವಿಲೇಜ್ ಟು ದಿ ವರ್ಲ್ಡ್ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ನಂತರ ಶಾಲೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಶಾಲೆಯ ಪ್ರಾಂಶುಪಾಲರಾದ ಶ್ರೀ ಹರ್ಷ ಜೋಶಿ ಅವರು ನೆರವೇರಿಸಿದರು ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥರಾದ ಸತ್ಸಂಗ ಪ್ರೀಯದಾಸ್ ಸ್ವಾಮೀಜಿಯವರು ಹಾಗೂ ನಿರ್ದೇಶಕರಾದ ಅಲ್ಫೇಸ್ ರವರು ಸಂಯೋಜಕರಾದ ಸತೀಶ್ ರವರು ಆಡಳಿತ ವರ್ಗದವರು ಶಿಕ್ಷಕರು ಶಿಕ್ಷಕೇತರರು ವಿದ್ಯಾರ್ಥಿಗಳು ಪೋಷಕರು ಸಾರ್ವಜನಿಕರು ಪಾಲ್ಗೊಂಡು ಲೋಕಾರ್ಪಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು