ಮೈಸೂರು:ಮಹಿಳಾ ಪೇದೆ ನೇಣಿಗೆ ಶರಣು…ಕೆ.ಎಸ್.ಆರ್.ಪಿ ಕ್ವಾರ್ಟರ್ಸ್ ನಲ್ಲಿ ಘಟನೆ…
- Crime
- February 20, 2023
- No Comment
- 155
ಮೈಸೂರು:ಮಹಿಳಾ ಪೇದೆ ನೇಣಿಗೆ ಶರಣು…ಕೆ.ಎಸ್.ಆರ್.ಪಿ ಕ್ವಾರ್ಟರ್ಸ್ ನಲ್ಲಿ ಘಟನೆ…
ಮೈಸೂರು,ಫೆ20,Tv10 ಕನ್ನಡ
ಮಹಿಳಾ ಪೇದೆಯೊಬ್ಬರು ನೇಣಿಗೆ ಶರಣಾದ ಘಟನೆ ಮೈಸೂರಿನ ಕೆ.ಎಸ್.ಆರ್.ಪಿ.ಕ್ವಾರ್ಟರ್ಸ್ ನಲ್ಕಿ ನಡೆದಿದೆ.ಗೀತಾ(32) ಮೃತ ದುರ್ದೈವಿ.ನಜರಬಾದ್ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಇಂದೆ ಬೆಳಿಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದರು.ಸುಮಾರು 12 ಗಂಟೆ ವೇಳೆಗೆ ಅನಾರೋಗ್ಯದ ಕಾರಣ ನೀಡಿ ಕ್ವಾರ್ಟರ್ಸ್ ಗೆ ತೆರಳಿದ್ದಾರೆ.ಪತಿಯನ್ನ ಎಟಿಎಂ ನಲ್ಲಿ ಹಣ ಡ್ರಾ ಮಾಡಿ ತರುವಂತೆ ಕಳುಹಿಸಿ ತಾನು ಆತ್ಮಹತ್ಯೆಗೆ ಶರಣಾಗಿದ್ದಾರೆ.OTP ಗಾಗಿ ಪತಿ ಕರೆ ಮಾಡಿದಾಗ ಗೀತಾ ಉತ್ತರಿಸಿಲ್ಲ.ನಂತರ ಮನೆಗೆ ಬಂದ ಪತಿಗೆ ಗೀತಾ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…