ಶ್ರೀರಂಗಪಟ್ಟಣ-ಚನ್ನರಾಯಪಟ್ಟಣ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭ: ಸಚಿವ ಡಾ.ನಾರಾಯಣಗೌಡ

ಶ್ರೀರಂಗಪಟ್ಟಣ-ಚನ್ನರಾಯಪಟ್ಟಣ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭ: ಸಚಿವ ಡಾ.ನಾರಾಯಣಗೌಡ

ಶ್ರೀರಂಗಪಟ್ಟಣ-ಚನ್ನರಾಯಪಟ್ಟಣ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭ: ಸಚಿವ ಡಾ.ನಾರಾಯಣಗೌಡ

ಮಂಡ್ಯ: 15 ಕೋಟಿ ವೆಚ್ಚದಲ್ಲಿ ಶ್ರೀರಂಗಪಟ್ಟಣ-ಕೆಆರ್ ಪೇಟೆ- ಚನ್ನರಾಯಪಟ್ಟಣ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.

ಶ್ರೀರಂಗಪಟ್ಟಣ -ಕೆಆರ್ ಪೇಟೆ-ಅರಸೀಕೆರೆ ರಸ್ತೆ ತುಂಬಾ ಹದಗೆಟ್ಟಿದ್ದರಿಂದ ಸಚಿವ ಡಾ.ನಾರಾಯಣಗೌಡ ಅವರು ಲೋಕೋಪಯೋಗಿ ಸಚಿವರ ಗಮನಕ್ಕೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು. ಸಚಿವ ನಾರಾಯಣಗೌಡ ಅವರು ಒತ್ತಾಯದಂತೆ ಕೆಆರ್ ಪೇಟೆ ವ್ಯಾಪ್ತಿಯಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು 15 ಕೋಟಿ ರೂಪಾಯಿ ಬಿಡುಗಡೆ ಮಾಡಿ ಲೋಕೋಪಯೋಗಿ ಇಲಾಖೆಯಿಂದ ಆದೇಶ ಹೊರಡಿಸಲಾಗಿತ್ತು. ಟೆಂಡರ್ ಪ್ರಕ್ರಿಯೆ ಮುಗಿದು ಇಂದು ಡಾಂಬರೀಕರಣ ಆರಂಭವಾಗಿದ್ದು, ಶೀಘ್ರದಲ್ಲೇ ಮುಕ್ತಾಯಗೊಳಿಸಲಾಗುತ್ತದೆ.

ಇದರ ಜೊತೆಗೆ ಶ್ರೀರಂಗಪಟ್ಟಣ to ಅರಸೀಕೆರೆ ನಡುವಿನ ಚತುಷ್ಪತ ರಸ್ತೆಗೆ ಅಭಿವೃದ್ಧಿಗೊಳಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಲಾಗಿದೆ. ಅದು ನೀತಿ ಆಯೋಗದ ಕ್ರಮ ಸಂಖ್ಯೆ 67 ರಲ್ಲಿ ಇದ್ದುದರಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸುವ ಪ್ರಕ್ರಿಯೆಯಲ್ಲಿ ಈ ಡಾಂಬರೀಕರಣ ವಿಳಂಬವಾಗಿತ್ತು. ಇದೀಗ ಚತುಷ್ಪತ ಹೆದ್ದಾರಿಯಾಗುವರೆಗೂ ರಸ್ತೆಯನ್ನು ಡಾಂಬರೀಕರಣ ಕೈಗೊಂಡು ಸುಸ್ಥಿತಿಯಲ್ಲಿಡಲಾಗುತ್ತದೆ.

ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ- ಅಭಿವೃದ್ಧಿಯೇ ನನ್ನ ಗುರಿ : ಸಚಿವ ಡಾ.ನಾರಾಯಣಗೌಡ

ಶ್ರೀರಂಗಪಟ್ಟಣ- ಚನ್ನರಾಯಪಟ್ಟಣ ರಸ್ತೆ ಹದಗೆಟ್ಟಿದ್ದರಿಂದ ವಾಹನ ಸವಾರರಿಗೆ ತೀವ್ರ ಸಮಸ್ಯೆ ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದು 15 ಕೋಟಿ ವೆಚ್ಚದಲ್ಲಿ, ಡಾಂಬರೀಕರಣ ಆರಂಭವಾಗಿದೆ. ಕೆಆರ್ ಪೇಟೆಯ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟಿದ್ದು, ಕೆಲಸವೇ ನನ್ನ ಗುರಿ. ಯಾವುದೇ ರೀತಿಯ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಚಿವ ಡಾ.ನಾರಾಯಣಗೌಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ‌.

Spread the love

Related post

ಭಾಗಮಂಡಲ ಪೊಲೀಸರ ಮಿಂಚಿನ ಕಾರ್ಯಾಚರಣೆ…ಮನೆಗಳ್ಳರ ಬಂಧನ…ನಗದು ಸೇರಿದಂತೆ 14.50 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಭಾಗಮಂಡಲ ಪೊಲೀಸರ ಮಿಂಚಿನ ಕಾರ್ಯಾಚರಣೆ…ಮನೆಗಳ್ಳರ ಬಂಧನ…ನಗದು ಸೇರಿದಂತೆ 14.50 ಲಕ್ಷ ಮೌಲ್ಯದ…

ಮಡಿಕೇರಿ,ಏ16,Tv10 ಕನ್ನಡ ಮನೆ ಬಾಗಿಲು ಮೀಟಿ 15 ಲಕ್ಷ ಮೌಲ್ಯದ 232 ಗ್ರಾಂ ಚಿನ್ನಾಭರಣಗಳನ್ನ ಕಳುವು ಮಾಡಿದ ಚೋರರನ್ನ ಬಂಧಿಸುವಲ್ಲಿ ಭಾಗಮಂಡಲ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತರಿಂದ 14.50 ಲಕ್ಷ…
ಮೈಸೂರು:ಗೋಮಾಂಸ ಮಾರಾಟ…ಓರ್ವನ ಬಂಧನ…

ಮೈಸೂರು:ಗೋಮಾಂಸ ಮಾರಾಟ…ಓರ್ವನ ಬಂಧನ…

ಮೈಸೂರು,ಏ16,Tv10 ಕನ್ನಡ ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಸರ್ವರ್ ಬಂಧಿತ ಆರೋಪಿ.ಈತ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಆರ್.ಮೊಹಲ್ಲಾದ ಎ.ಜೆ.ಬ್ಲಾಕ್ ನಲ್ಲಿ ಇರುವ ತನ್ನ…
ಲಾಡ್ಜ್ ನಲ್ಲಿ ಹೆತ್ತಮಗನನ್ನ ಬಿಟ್ಟು ಎಸ್ಕೇಪ್ ಆದ ಮಹಿಳೆ…ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿದ ಲಷ್ಕರ್ ಠಾಣಾ ಪೊಲೀಸರು…ಈಕೆ ಹೀಗೆ ಮಾಡಿದ್ದು ಯಾಕೆ ಗೊತ್ತಾ…?

ಲಾಡ್ಜ್ ನಲ್ಲಿ ಹೆತ್ತಮಗನನ್ನ ಬಿಟ್ಟು ಎಸ್ಕೇಪ್ ಆದ ಮಹಿಳೆ…ಕೆಲವೇ ಗಂಟೆಗಳಲ್ಲಿ ಪತ್ತೆ…

ಮೈಸೂರು,ಏ16,Tv10 ಕನ್ನಡ ಲಾಡ್ಜ್ ನಲ್ಲಿ ಹೆತ್ತಮಗನನ್ನ ಒಂಟಿಯಾಗಿ ಬಿಟ್ಟ ಮಹಿಳೆ ಮಧ್ಯರಾತ್ರಿ ಧಢೀರ್ ನಾಪತ್ತೆಯಾದ ಘಟನೆ ಮೈಸೂರಿನ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.ಘಟನೆ ಬೆಳಕಿಗೆ ಬಂದ…

Leave a Reply

Your email address will not be published. Required fields are marked *