• March 15, 2023

ಸಾವಿನಲ್ಲಿ ಒಂದಾದ ತಂದೆಮಗ…ಎಚ್.ಡಿ.ಕೋಟೆಯಲ್ಲಿ ಮನಕಲುಕುವ ಘಟನೆ…

ಸಾವಿನಲ್ಲಿ ಒಂದಾದ ತಂದೆಮಗ…ಎಚ್.ಡಿ.ಕೋಟೆಯಲ್ಲಿ ಮನಕಲುಕುವ ಘಟನೆ…

ಸಾವಿನಲ್ಲಿ ಒಂದಾದ ತಂದೆಮಗ…ಎಚ್.ಡಿ.ಕೋಟೆಯಲ್ಲಿ ಮನಕಲುಕುವ ಘಟನೆ…

ಹೆಚ್.ಡಿ.ಕೋಟೆ,ಮಾ15,Tv10 ಕನ್ನಡ
ತಂದೆಯ ಸಾವಿನ ಬೆನ್ನ ಹಿಂದೆಯೇ ಮಗ ಸಾವನ್ನಪ್ಪಿದ ಮನಕಲುಕುವ ಘಟನೆ ಹೆಚ್.ಡಿ.ಕೋಟೆಯ ಜಕ್ಕಳ್ಳಿ ಕಾಲೋನಿಯಲ್ಲಿ ನಡೆದಿದೆ. ಕೌಟುಂಬಿಕ ಕಲಹದ ಹಿನ್ನೆಲೆ ನಿನ್ನೆ ತಂದೆ ನೇಣಿಗೆ ಶರಣಾದರೆ ತಂದೆ ಸಾವಿನಿಂದ ಮನನೊಂದ ಮಗ ಕೂಡ ನೇಣಿಗೆ ಶರಣಾಗಿದ್ದಾನೆ.
ಜಕ್ಕಳ್ಳಿ ಕಾಲೋನಿಯ ನಾಗೇಗೌಡ ಮತ್ತು ಮಧು ಆತ್ಮಹತ್ಯೆಗೆ ಶರಣಾದ ಅಪ್ಪಮಗ.
ಕೌಟುಂಬಿಕ ಕಲಹದಿಂದ ಬೇಸೆತ್ತಿದ್ದ ತಂದೆ ನಾಗೇಗೌಡ(55) ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ಬೇಳೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದರು.
ತಂದೆ ಸಾವಿನ ಸುದ್ದಿ ತಿಳಿದು ಮನನೊಂದ ಮಗ ಮಧು (24) ತಡರಾತ್ರಿ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಒಂದೇ ಕುಟುಂಬದ ತಂದೆ ಮಗನ ಎರಡು ಮೃತದೇಹಗಳ ಅಂತ್ಯಸಂಸ್ಕಾರವನ್ನ ಗ್ರಾಮದಲ್ಲಿ ಏಕಕಾಲದಲ್ಲಿ ನೆರವೇರಿಸಲಾಗಿದೆ.ಸಾವಿನಲ್ಲೂ ತಂದೆ ಮಗ ಒಂದಾಗಿದ್ದಾರೆ
ಅಂತರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ದೂರು ನೀಡದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿಲ್ಲ…

Spread the love

Leave a Reply

Your email address will not be published.