- March 16, 2023
ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ವಸತಿ ಸಮುಚ್ಚಯಕ್ಕೆ ಶಂಕುಸ್ಥಾಪನೆ


ನ್ಯಾಯಾಂಗ ಇಲಾಖೆಯ ಅಧಿಕಾರಿಗಳ ವಸತಿ ಸಮುಚ್ಚಯಕ್ಕೆ ಶಂಕುಸ್ಥಾಪನೆ

ಮಂಡ್ಯ ನಗರದ ಮನುಗನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ನ್ಯಾಯಾಂಗ ಇಲಾಖೆ ಅಧಿಕಾರಿಗಳ ವಸತಿ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಕರ್ನಾಟಕ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಅವರು ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು.

ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿ
ಜಿಲ್ಲೆಯ ನ್ಯಾಯಲಯಗಳಲ್ಲಿರುವ ವ್ಯಾಜ್ಯಗಳನ್ನ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು.
ನ್ಯಾಯಾಲಯದ ಮುಂದೆ ಬರುವ ವ್ಯಾಜ್ಯಗಳನ್ನು ವಿಲೇವಾರಿ ಮಾಡಲು ವಕೀಲರ ಸಂಘದ ಸದಸ್ಯರು,ವಕೀಲರು, ಕಾನೂನು ಸೇವಾ ಪ್ರಾಧಿಕಾರ ಶ್ರಮಿಸುತ್ತಿದೆ ಎಂದರು.
ಕೋವಿಡ್ ನಂತಹ ಸಂದರ್ಭದಲ್ಲೂ ಕರ್ನಾಟಕ ರಾಜ್ಯದಲ್ಲಿ ನ್ಯಾಯಾಲಯಗಳು ವರ್ಚುಯಲ್ ವಿಧದಲ್ಲಿ ಕಾರ್ಯನಿರ್ವಹಿಸಿತು. ಇದು ಶ್ಲಾಘನೀಯ ಎಂದರು.
ನ್ಯಾಯಧೀಶರು ಹಾಗೂ ನ್ಯಾಯಾಲಯದಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಕೆಲಸದ ಒತ್ತಡ ಹೆಚ್ಚು, ಆದರೂ ಸಹ ಕೆಲಸ ನಿರ್ವಹಣೆಯಲ್ಲಿ ಹಿಂದೆ ಸರಿಯುವಂತಿಲ್ಲ. ಒತ್ತಡದ ನಡುವೆಯೋ ಉತ್ತಮ ರೀತಿಯಲ್ಲಿ ಕೆಲಸ ಮಾಡುವುದನ್ನು ರೂಡಿಸಿಕೊಳ್ಳಬೇಕು ಎಂದರು.
ಮಂಡ್ಯ ಜಿಲ್ಲೆ ಅಕ್ಕರೆಯ ಬೀಡು. ಸಕ್ಕರೆಯನಾಡು ಎಂದು ದೇಶದಲ್ಲಿಯೇ ಪ್ರಖ್ಯಾತಿ ಹೊಂದಿದೆ. ಆಗಾಗಿ ನನಗೆ ಮಂಡ್ಯಕ್ಕೆ ಬರುವುದಕ್ಕೆ ಬಹಳ ಖುಷಿಯಾಗುತ್ತದೆ ಎಂದರು.
ಮಂಡ್ಯ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಎಚ್.ಬಿ ಪ್ರಭಾಕರ್ ಶಾಸ್ತ್ರಿ ಅವರು ಮಾತನಾಡಿ ನ್ಯಾಯಾಂಗ ಇಲಾಖೆಗೆ ಸರ್ಕಾರ ಮತ್ತು ಸಮಾಜದಿಂದ ಹಲವು ಸೌಲಭ್ಯಗಳು ದೊರಕುತ್ತಿದ್ದು, ಅದರ ಋಣ ತೀರಿಸಲು ನಾವು ಬದ್ಧತೆಯಿಂದ ಕೆಲಸ ಮಾಡಬೇಕೀದೆ ಎಂದರು.
ನ್ಯಾಯಾಲಯದಲ್ಲಿ ನ್ಯಾಯ ಒದಗಿಸುವ ಪ್ರಕ್ರಿಯೆಯಲ್ಲಿ ನ್ಯಾಯಾಧೀಶರ ಪಾತ್ರ ಎಷ್ಟು ಮುಖ್ಯವೋ ವಕೀಲರ ಪಾತ್ರವು ಅಷ್ಟೇ ಪ್ರಮುಖವಾಗಿರುತ್ತದೆ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಬಿ.ಎಂ ಶ್ಯಾಮ್ ಪ್ರಸಾದ್, ಇ.ಎಸ್ ಇಂದ್ರೇಶ್, ಮಂಡ್ಯ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶರಾದ ಬಿ.ಜಿ ರಮಾ, ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್. ಹುಲ್ಮನಿ,
ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ ಸೇರಿದಂತೆ ಇನ್ನೀತರರು ಹಾಜರಿದ್ದರು.