ತವರಿಗೆ ಮರಳಿದ ಮಾಜಿ ಸಿಎಂ ಸಿದ್ದರಾಮಯ್ಯ…ಮೈಸೂರು ಭಾಗದ ಕಾಂಗ್ರೆಸ್ ಗೆ ಹೆಚ್ಚಿದ ಬಲ…
- MysorePolitics
- March 25, 2023
- No Comment
- 85
ಮೈಸೂರು,ಮಾ25,Tv10 ಕನ್ನಡ
ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.ಮಾಜಿ ಸಿಎಂ ಸಿದ್ದರಾಮಯ್ಯ ಸೇರದಂತೆ 124 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.ಒಂದು ವಿಚಾರ ಅಂದರೆ ಮಾಜಿ ಸಿಎಂ ಸಿದ್ದರಾಮಯ್ಯ ತವರಿಗೆ ಮರಳಿದ್ದಾರೆ.ಹಲವು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಊಹಾಪೋಹಗಳಿಗೆ ಇಂದು ಅಂತ್ಯ ಹಾಡಲಾಗಿದೆ.ಸಿದ್ದರಾಮಯ್ಯ ತಮ್ಮ ತವರು ಕ್ಷೇತ್ರದ ವರುಣಾದಿಂದ ಸ್ಪರ್ಧಿಸಲಿದ್ದಾರೆ.ತಂದೆಗಾಗಿ ಪುತ್ರ ಡಾ.ಯತೀಂದ್ತ ಸಿದ್ದರಾಮಯ್ಯ ಕ್ಷೇತ್ರ ತ್ಯಾಗ ಮಾಡಿದ್ದಾರೆ.ಸಧ್ಯ ವರುಣಾ ಕ್ಷೇತ್ರದಲ್ಲಿ ಸಿದ್ದು ಅಭಿಮಾನಿಗಳಲ್ಲಿ ಸಂತಸ ಮೂಡಿದೆ.ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಅಖಾಡಕ್ಕೆ ಇಳಿಯುವುದರಿಂದ
ಮೈಸೂರು ಭಾಗದ ಕಾಂಗ್ರೆಸ್ ಗೆ ಬಲ ಹೆಚ್ಚಿದಂತಾಗಿದೆ.
ಹಳೇ ಮೈಸೂರು ಭಾಗದಲ್ಲಿ ಮತ್ತೆ ಕೈ ಬಲಾಢ್ಯವಾಗಲಿದೆ.ಕಳೆದ ಬಾರಿ ಬಾದಾಮಿಯಲ್ಲಿ ಗೆದ್ದ ಕಾರಣ ಬಹುತೇಕ ಸಮಯ ಆ ಕ್ಷೇತ್ರದ ಅಭಿವೃದ್ದಿಗೆ ಸಿದ್ದರಾಮಯ್ಯ ಒತ್ತು ನೀಡಿದ್ದರು.ಇದೀಗ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದರಿಂದ
ಮೈಸೂರು, ಮಂಡ್ಯ, ಚಾಮರಾಜನಗರದ ಅಭ್ಯರ್ಥಿಗಳಿಗೆ ಸಿದ್ದು ಶ್ರೀರಕ್ಷೆಯಾಗಲಿದ್ದಾರೆ.
ಸಿದ್ದರಾಮಯ್ಯರನ್ನೇ ನಂಬಿರುವ ಕೈ ಅಭ್ಯರ್ಥಿಗಳಲ್ಲಿ ಸಂಚಲನ ಮೂಡಿದೆ.
ಕೈ ಅಭ್ಯರ್ಥಿಗಳಿಗೆ ಸಿದ್ದು ವರ್ಚಸ್ಸು, ಪ್ರಭಾವ ವರದಾನವಾಗಲಿದೆ.
ಮೈಸೂರಿನ ಕೈ ಅಭ್ಯರ್ಥಿಗಳಾದ
ಟಿ. ನರಸೀಪುರ ಹೆಚ್.ಸಿ ಮಹದೇವಪ್ಪ
ಕೆ.ಆರ್ ನಗರ ರವಿಶಂಕರ್, ಹುಣಸೂರು ಹೆಚ್.ಪಿ ಮಂಜುನಾಥ್,
ಹೆಚ್.ಡಿ ಕೋಟೆ ಅನಿಲ್ ಚಿಕ್ಕಮಾದು.
ಪಿರಿಯಾಪಟ್ಟಣ ವೆಂಕಟೇಶ್.
ನರಸಿಂಹರಾಜ ತನ್ವೀರ್ ಸೇಠ್‌ಗೆ ಬಲ ಹೆಚ್ಚಿದಂತಾಗಿದೆ.
ತವರು ಜಿಲ್ಲೆಯಲ್ಲಿ ಟಗರು ಮೊಡಿ ಮಾಡಲು ಸಿದ್ದವಾಗುತ್ತಿದೆ.
ಟಗರಿನ ಆಗಮನದಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗುತ್ತಿದೆ…