ಗಂಡು ಮಗುವಿಗೆ ಜನ್ಮ ನೀಡದ ಪತ್ನಿಗೆ ಮಾರಣಾಂತಿಕ ಹಲ್ಲೆ…ಪತಿ ಅಂದರ್…
- CrimeMysore
- March 27, 2023
- No Comment
- 60
ಹೆಚ್.ಡಿ.ಕೋಟೆ,ಮಾ27,Tv10 ಕನ್ನಡ
ಗಂಡು ಮಗುವಿಗೆ ಜನ್ಮ ನೀಡದ ಪತ್ನಿಗೆ ಪತ್ನಿ ಮೊಚ್ಚಿನಿಂದ ಹೊಡೆದು ಹಲ್ಲೆ ಮಾಡಿದ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಸೋನಳ್ಳಿ ಗ್ರಾಮದಲ್ಲಿ ನಡೆದಿದೆ.
ಪತಿ ಚಂದ್ರು ಎಂಬಾತನಿಂದ ಪತ್ನಿ ಶಿವಮ್ಮ ಮೇಲೆ ಹಲ್ಲೆ ನಡೆಸಿದ್ದಾನೆ.
ಹಲ್ಲೆಗೆ ನಡೆಸಲು ಮಾವ ರಾಮೇಗೌಡ ಹಾಗೂ ಅತ್ತೆ ಕೆಂಪಮ್ಮ ಕುಮ್ಮಕ್ಕು ನೀಡಿದ್ದಾರೆಂದು ಆರೋಪಿಸಲಾಗಿದೆ.
ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಶಿವಮ್ಮ ಇದೇ ಪತಿ ಚಂದ್ರು ಕಾರಣವಾಗಿ ಮಾನಸಿಕ ಹಿಂಸೆ ನೀಡುತ್ತಿದ್ದ.ಪತಿ ಹಾಗೂ ಮನೆಯವರು
ಈ ಬಗ್ಗೆ ಹಲವು ಭಾರಿ ನ್ಯಾಯ ಪಂಚಾಯತಿ ನಡೆಸಿದ್ದರು.ಕಿರುಕುಳ ತಾಳಲಾರದೆ ಕಳೆದ ವರ್ಷ ಶಿವಮ್ಮ ಎಚ್.ಡಿ.ಕೋಟೆ ಪೊಲೀಸರಿಗೆ ದೂರು ನೀಡಿದ್ದರು.
ಸದ್ಯ ಪತಿ ಚಂದ್ರು ಬಂಧನವಾಗಿದೆ. ಮಾವ ರಾಮೇಗೌಡ ಅತ್ತೆ ಕೆಂಪಮ್ಮ ತಲೆ ಮರೆಸಿಕೊಂಡಿದ್ದಾರೆ.
ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…