ಗ್ರಾಮೀಣ ಭಾಗದ ಅನಾಧಿಕೃತ ಮದ್ಯದ ಅಂಗಡಿಗಳ ಮೇಲೆ ದಾಳಿ ನಡೆಸಿ
- TV10 Kannada Exclusive
- April 21, 2023
- No Comment
- 63
ಮಂಡ್ಯ,ಫೆ.21:-ಗ್ರಾಮೀಣ ಭಾಗದಲ್ಲಿ ಅನಾಧಿಕೃತ ಮದ್ಯದ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದಲ್ಲಿ, ದಾಳಿ ನಡೆಸಿ ಕ್ರಮ ಕೈಗೊಳ್ಳುವಂತೆ ಮದ್ದೂರು ಚುನಾವಣಾ ವೆಚ್ಚ ವೀಕ್ಷಕರಾದ ಗೌರಿ ಶಂಕರ್ ಸಿಂಗ್ ಅವರು ತಿಳಿಸಿದರು.
ಅವರು ಇಂದು ಚುನಾವಣಾ ವೆಚ್ಚ ವೀಕ್ಷಕರು, ಸಾಮಾನ್ಯ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಅನಾಧಿಕೃತ ಮದ್ಯ ಮಾರಾಟ ಪ್ರಕರಣಗಳನ್ನು ಕಂಡು ಬರುತ್ತದೆ. ಹಚ್ಚಿನ ಸಿಬ್ಬಂದಿಗಳನ್ನು ಈ ಭಾಗದಲ್ಲಿ ನಿಯೋಜಿಸಿ ಎಂದರು.
ಬ್ಯಾಂಕ್ ಗಳಲ್ಲಿ ಸಂಶಯಾಸ್ಪದವಾಗಿ ಹಣದ ವಹಿವಾಟು ನಡೆದಲ್ಲಿ. ಪೋನ್ ಪೇ, ಗೂಗಲ್ ಪೇ ಮೂಲಕ ಹಣದ ವರ್ಗಾವಣೆ ನಡೆದಲ್ಲಿ ಅದರ ವಿವರ ನಡೆದಲ್ಲಿ ವಿವರ ನೀಡಬೇಕು. ಇದರೊಂದಿಗೆ ಒಂದೇ ಮೊತ್ತದ ದೊಡ್ಡ ಸಂಖ್ಯೆಯಲ್ಲಿ ಡಿ.ಡಿ ಯನ್ನು ಪಡೆದಲ್ಲಿ ಪ್ರತಿದಿನ ವರದಿ ನೀಡಬೇಕು ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಬ್ಯಾಂಕ್ ಗಳ ವ್ಯವಸ್ಥಾಪಕರು ಜಿಲ್ಲೆಯಲ್ಲಿ ಬ್ಯಾಂಕ್ ಗಳ ಶಾಖೆಗಳ ವಿವರ ಹಾಗೂ ವರದಿಯನ್ನು ಸಲ್ಲಿಸುವ ಬಗ್ಗೆ ವಿವರಿಸಿದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ಅಮಿತ್ವ ಬ್ಯಾನರ್ಜಿ ಅವರು ಮಾತನಾಡಿ ಪಿ.ಎಸ್.ಎಸ್.ಕೆ ಸಕ್ಕರೆ ಕಾರ್ಖಾನೆ, ಹೊಳಲು ಬಳಿ ಇರುವ ಚೆಕ್ ಪೋಸ್ಟ್ ಗಳಿಗೆ ಹೆಚ್ಚಿನ ಸಿಬ್ಬಂದಿ ಬೇಕಿದ್ದು, ಪರಿಶೀಲಿಸುವಂತೆ ಚುನಾವಣಾಧಿಕಾರಿಗಳಿಗೆ ತಿಳಿಸಿದರು.
ಮದ್ದೂರು ಮತ್ತು ಮಳವಳ್ಳಿ ಸಾಮಾನ್ಯ ವೀಕ್ಷಕರಾದ ಅಮಿತ್ ಕುಮಾರ್ ಅವರು ಮಾತನಾಡಿ ಮತಗಟ್ಟೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರು ಪ್ರವೇಶಿಸಲು ಹಾಗೂ ನಿರ್ಗಮಿಸಲು ಒಂದೇ ದ್ವಾರವಿದ್ದು, ಮತದಾರರಿಗೆ ಯಾವುದೇ ತೊಂದರೆಯಾಗದಂತೆ ನಿರ್ವಹಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.
ವೆಚ್ಚ ವೀಕ್ಷಕರಾದ ಕೇದುಪ್ ಬುಟಿಯಾ ಅವರು ಪ್ರತಿ ದಿನ ರಾಜಕೀಯ ಪಕ್ಷಗಳು ನಡೆಸುವ ಪ್ರಚಾರ ಕಾರ್ಯಕ್ರಮಗಳಲ್ಲಿ ಉಪಯೋಗಿಸುವ ವಾಹನ ಹಾಗೂ ಇನ್ನಿತರೆ ವಸ್ತುಗಳಿಗೆ ಪಡೆದಿರುವ ಅನುಮತಿಯ ವಿವರಗಳನ್ನು ವೆಚ್ಚ ವೀಕ್ಷಣಾ ತಂಡ ಕ್ಕೆ ಒದಗಿಸುವಂತೆ ತಿಳಿಸಿದರು.
ಜಿಲ್ಲಾಧಿಕಾರಿ ಡಾ: ಹೆಚ್.ಎನ್ ಗೋಪಾಲಕೃಷ್ಣ ಅವರು ಮಾತನಾಡಿ ಮತದಾರರಿಗೆ ಆಮಿಷ್ ನೀಡಲು ಕೂಪನ್ ನೀಡುವ ರೀತಿ ಬೇರೆ ತಂತ್ರಗಳನ್ನು ಉಪಯೋಗಿಸಬಹುದು. ಹೆಚ್ಚು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಿ ಎಂದರು.
ಅಪರ ಜಿಲ್ಲಾಧಿಕಾರಿ ಡಾ: ಹೆಚ್ ಎಲ್ ನಾಗರಾಜ್ ಅವರು ಜಿಲ್ಲೆಯಲ್ಲಿ ಚುನಾವಣಾ ಕೆಲಸಗಳಿಗೆ ಮಾಡಲಾಗಿರುವ ವಿವಿಧ ತಂಡಗಳು, ಸಿದ್ಧತೆಗಳು, ಪೋಸ್ಟಲ್ ಬ್ಯಾಲೆಟ್, ಮತ ಎಣಿಕೆ ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ವಿವರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಅವರು ಮಾತನಾಡಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿ.ಐ.ಎಸ್.ಎಫ್ ತಂಡಗಳು ಎರಡು ಬಾರಿ ಪಥ ಸಂಚಲನ ನಡೆಸಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಪೊಲೀಸ್ ವೀಕ್ಷಕರಾದ ಅವಿನಾಶ್ ಕುಮಾರ್, ವೆಚ್ಚ ವೀಕ್ಷಕರುಗಳಾದ ಲೋಕೇಶ್ ದಾಮೋರ್, ಪ್ರಸನ್ನದತ್ತ, ಪ್ರದೀಪ್ ಕುಮಾರ್ ಸಾಮಾನ್ಯ ವೀಕ್ಷಕರುಗಳಾದ ಸುರೇಶ್ ಕುಮಾರ್, ತನ್ಮಯ್ ಚಕ್ರಬರ್ತಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶೇಕ್ ತನ್ವೀರ್ ಆಸಿಫ್ ಉಪಸ್ಥಿತರಿದ್ದರು.