ಅಕ್ರಮ ಮಧ್ಯ ವಶ…ಬಸ್ ಸಮೇತ ಸಿಕ್ಕಿಬಿದ್ದ ಆರೋಪಿಗಳು…

ಅಕ್ರಮ ಮಧ್ಯ ವಶ…ಬಸ್ ಸಮೇತ ಸಿಕ್ಕಿಬಿದ್ದ ಆರೋಪಿಗಳು…

ಕೊಳ್ಳೇಗಾಲ,ಏ27,Tv10 ಕನ್ನಡ
ಖಾಸಗಿ ಬಸ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮಧ್ಯವನ್ನ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ವಶಪಡಿಸಿಕೊಂಡಿದ್ದಾರೆ.ಬಸ್ ಹಾಗೂ ಮದ್ಯದ ಒಟ್ಟು ಮೌಲ್ಯ 50,22,925 ಗಳಾಗಿದೆ.
ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಟೌನ್ ಮಾದೇಗೌಡ ಪೆಟ್ರೋಲ್ ಬಂಕ್ ಬಳಿ ಖಾಸಗಿ ಬಸ್ಸನ್ನು ತಡೆದು ನಿಲ್ಲಿಸಿ ದಾಳಿ ಮಾಡಿ ಶೋಧನೆ ಮಾಡಿದಾಗ 59.250 ಲೀಟರ್ ಮದ್ಯವನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದುದು ಕಂಡುಬಂದಿದೆ.ಬಸ್ಸಿನ ಚಾಲಕ ಸೆಲ್ವಕುಮಾರ್ ಹಾಗೂ ಕಂಡಕ್ಟರ್ ಕೆ. ರಾಜಕುಮಾರ್ ಎಂಬುವರನ್ನ ಆರೋಪಿಗಳನ್ನು ಬಂಧಿಸಲಾಗಿದೆ.
ಮದ್ಯ ಹಾಗೂ ವಾಹನವನ್ನು ವಶ ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಲಾಗಿದ್ದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮದ್ಯದ ಮೌಲ್ಯ 22,925ರೂ. ವಾಹನ ಮೌಲ್ಯ 50 ಲಕ್ಷ ರೂ. ಒಟ್ಟು 5022925 ರೂ ಎಂದು ಅಬಕಾರಿ ಇಲಾಖೆ‌ ಅಧಿಕಾರಿಗಳು ತಿಳಿಸಿದ್ದಾರೆ.ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಬಕಾರಿ ಜಂಟಿ ಆಯುಕ್ತರು (ಜಾರಿ ಮತ್ತು ತನಿಖೆ) ಮೈಸೂರು ವಿಭಾಗ
ಡಾ.ಬಿ. ಸಿ. ವಿಜಯ್ ಕುಮಾರ್ ಹಾಗೂ
ಅಬಕಾರಿ ಉಪ ಆಯುಕ್ತರು ಚಾಮರಾಜನಗರ ಜಿಲ್ಲೆ ಆರ್.ನಾಗಶಯನ ಅವರ ನಿರ್ದೇಶನದಂತೆ ಕೊಳ್ಳೇಗಾಲ ವಲಯದ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿ ಖಾಸಗಿ‌ ಬಸ್ ಮೇಲೆ ದಾಳಿ ಮಾಡಿದ್ದಾರೆ…

Spread the love

Related post

ಭದ್ರತೆಗಾಗಿ ನೀಡಿದ್ದ ಚೆಕ್ ದುರುಪಯೋಗ ಆರೋಪ…ಪಾಲಿಕೆ ಸೀನಿಯರ್ ಮೆಡಿಕಲ್ ಆಫೀಸರ್ ವಿರುದ್ದ ವಂಚನೆ ಪ್ರಕರಣ ದಾಖಲು…

ಭದ್ರತೆಗಾಗಿ ನೀಡಿದ್ದ ಚೆಕ್ ದುರುಪಯೋಗ ಆರೋಪ…ಪಾಲಿಕೆ ಸೀನಿಯರ್ ಮೆಡಿಕಲ್ ಆಫೀಸರ್ ವಿರುದ್ದ…

ಮೈಸೂರು,ಮೇ15,Tv10 ಕನ್ನಡ ವ್ಯವಹಾರದ ನಿಮಿತ್ತ ನೀಡಿದ್ದ ಮುಂಗಡ ಹಣಕ್ಕೆ ಭದ್ರತೆಗಾಗಿ ನೀಡಿದ್ದ ಚೆಕ್ ದುರುಪಯೋಗ ಪಡಿಸಿಕೊಂಡ ಆರೋಪದ ಹಿನ್ನಲೆ ಮೈಸೂರು ಮಹಾನಗರ ಪಾಲಿಕೆ ಸೀನಿಯರ್ ಮೆಡಿಕಲ್ ಆಫೀಸರ್ ವಿರುದ್ದ…
ಮಂಡ್ಯ:ಬಾಲಕಿಯರ ಕ್ರೀಡಾ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ…

ಮಂಡ್ಯ:ಬಾಲಕಿಯರ ಕ್ರೀಡಾ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ…

ಮಂಡ್ಯ:ಬಾಲಕಿಯರ ಕ್ರೀಡಾ ವಸತಿ ನಿಲಯಕ್ಕೆ ಜಿಲ್ಲಾಧಿಕಾರಿ ಭೇಟಿ… ಮಂಡ್ಯ,ಮೇ13,Tv10 ಕನ್ನಡ ಜಿಲ್ಲಾಧಿಕಾರಿ ಡಾ: ಕುಮಾರ ಅವರು ಇಂದು ಮಂಡ್ಯ ಜಿಲ್ಲಾ ಕ್ರೀಡಾಂಗಣದಲ್ಲಿರುವ ಬಾಲಕಿಯರ ಕ್ರೀಡಾ ವಸತಿನಿಲಯಕ್ಕೆ ಭೇಟಿ ನೀಡಿ…
ಕಲುಷಿತ ನೀರು ಸೇವನೆ…25 ಕ್ಕೂ ಹೆಚ್ಚು ಮಂದಿ ಅಸ್ವಸ್ಥ…

ಕಲುಷಿತ ನೀರು ಸೇವನೆ…25 ಕ್ಕೂ ಹೆಚ್ಚು ಮಂದಿ ಅಸ್ವಸ್ಥ…

ಮೈಸೂರು,ಮೇ12,Tv10 ಕನ್ನಡ ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆಹುಣಸೂರು ತಾಲ್ಲೂಕು ಕಡೇಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.ಅಸ್ವಸ್ಥರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಗ್ರಾಮ ಪಂಚಾಯ್ತಿ ಯಿಂದ ಮನೆಗಳಿಗೆ…

Leave a Reply

Your email address will not be published. Required fields are marked *