ಅಣ್ಣ ‘ಕೈ’ ಅಭ್ಯರ್ಥಿ… ಜೆಡಿಎಸ್ ಬೆಂಬಲಕ್ಕೆ ನಿಂತ ತಂಗಿ…ಏನಾಗಿದೆ ಅನಿಲ್ ಚಿಕ್ಕಮಾದು ಕುಟುಂಬದಲ್ಲಿ…?

ಅಣ್ಣ ‘ಕೈ’ ಅಭ್ಯರ್ಥಿ… ಜೆಡಿಎಸ್ ಬೆಂಬಲಕ್ಕೆ ನಿಂತ ತಂಗಿ…ಏನಾಗಿದೆ ಅನಿಲ್ ಚಿಕ್ಕಮಾದು ಕುಟುಂಬದಲ್ಲಿ…?

ಹುಣಸೂರು,ಏ28,Tv10 ಕನ್ನಡ
ಹೆಚ್.ಡಿ.ಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅನಿಲ್ ಚಿಕ್ಕಮಾದು ಎರಡನೇ ಬಾರಿಯ ಗೆಲುವಿಗಾಗಿ ಹರಸಾಹಸ ನಡೆಸುತ್ತಿದ್ದರೆ ಇತ್ತ ಹುಣಸೂರಿನಲ್ಲಿ ಸಹೋದರಿ ರಂಜಿತಾ ಚಿಕ್ಕಮಾದು ಜಿಟಿಡಿ ಪುತ್ರ ಜೆಡಿಎಸ್ ಅಭ್ಯರ್ಥಿ ಹರೀಶ್ ಗೌಡ ಪರ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ.ಚಿಕ್ಕಮಾದು ಮಕ್ಕಳು ಅಣ್ಣತಂಗಿಯರಲ್ಲಿ ವಿಭಿನ್ನ ಅಭಿಪ್ರಾಯ ರಾಜಕೀಯ ಪಂಡಿತರಿಗೆ ಹುಬ್ಬೇರಿಸುವಂತಾಗಿದೆ.ಹೆಚ್.ಡಿ.ಕೋಟೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದ ಅನಿಲ್ ಚಿಕ್ಕಮಾದು ಗೆಲುವಿಗಾಗಿ ರಾತ್ರಿ ಹಗಲು ಮತದಾರರ ಮನೆಬಾಗಿಲು ತಟ್ಟಿ ಮನವಿ ಮಾಡುತ್ತಿದ್ದರೆ.ಇತ್ತ ರಂಜಿತಾ ಚಿಕ್ಕಮಾದು ಹಗಲಿರುಳೆನ್ನದೆ ಜಿ.ಡಿ.ಹರೀಶ್ ಗೌಡ ಗೆಲುವಿಗಾಗಿ ಪ್ರಚಾರದಲ್ಲಿ ಕಸರತ್ತು ನಡೆಸುತ್ತಿದ್ದಾರೆ.ಅನಿಲ್ ಚಿಕ್ಜಮಾದು ರವರು ಗೆಲುವಿನ ಮೂಲಕ ಸಿದ್ದರಾಮಯ್ಯ ಕೈ ಬಲಪಡಿಸಿ ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವ ಕನಸು ಕಾಣುತ್ತಿದ್ದರೆ ಸಹೋದರಿ ರಂಜಿತಾ ಚಿಕ್ಕಮಾದು ಮಾತ್ರ ಹರೀಶ್ ಗೌಡ ಕೈ ಬಲಪಡಿಸಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿದ್ದಾರೆ.ಹರೀಶ್ ಗೌಡರ ಪ್ರಚಾರದಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ರಂಜಿತಾ ಚಿಕ್ಕಮಾದು ಕಾಂಗ್ರೆಸ್ ಗೆ ಸಡ್ಡುಹೊಡೆದು ಜೆಡಿಎಸ್ ಆಶ್ರಯ ಪಡೆದಿದ್ದಾರೆ.ಕಾಂಗ್ರೆಸ್ ನಲ್ಲಿ ಟಿಕೆಟ್ ದೊರೆತು ಎರಡನೇ ಬಾರಿಗೆ ಶಾಸಕನಾಗುವ ಪ್ರಯತ್ನದಲ್ಲಿರುವ ಅನಿಲ್ ಚಿಕ್ಕಮಾದು ಪರ ಸಹೋದರಿ ಇದುವರೆಗೆ ಪ್ರಚಾರಕ್ಕೆ ಬಂದಿಲ್ಲ.ಒಂದೇ ಕುಟುಂಬದಲ್ಲಿ ಅಣ್ಣತಂಗಿಯರ ದ್ವಂದ್ವ ನಿಲುವು ಅಚ್ಚರಿಗೆ ಕಾರಣವಾಗಿದೆ.ಇದು ಇಬ್ಬರ ನಡುವಿನ ಭಿನ್ನಾಭಿಪ್ರಾಯದ ಸೂಚನೆಯೇ ಎಂಬ ಪ್ರಶ್ನೆ ರಾಜಕೀಯ ಪಂಡಿತರನ್ನ ಕಾಡುತ್ತಿದೆ…

Spread the love

Related post

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…
ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ…

ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ…ಆಟೋದಲ್ಲಿ ಬಂದ ಕಿಡಿಗೇಡಿಗಳ ಕೃತ್ಯ… ಮೈಸೂರು,ಸೆ10,Tv10 ಕನ್ನಡ ವೃದ್ದೆಯ ಚಿನ್ನದ ಸರ ಕಸಿಯಲು ವಿಫಲ ಯತ್ನ ನಡೆದಿದೆ.ಮೈಸೂರಿನ ಮೇಟಗಳ್ಳಿ ಪೊಲೀಸ್ ಠಾಣಾ…
ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ…

ಬೇಲಿ ಕಂಬಿಗೆ ಸಿಲುಕಿ ವ್ಯಕ್ತಿ ಸಾವು…ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವೇಳೆ ಘಟನೆ… ಮೈಸೂರು,ಸೆ6,Tv10 ಕನ್ನಡ ಕುಡಿದ ಮತ್ತಿನಲ್ಲಿ ಬೇಲಿ ಹಾರಿದ ವ್ಯಕ್ತಿಗೆ ಕಬ್ಬಿಣದ ರಾಡು ಚುಚ್ಚಿ ಸ್ಥಳದಲ್ಲೇ…

Leave a Reply

Your email address will not be published. Required fields are marked *