- May 26, 2023
ನಾನು ಸಚಿವ ಸ್ಥಾನ ಆಕಾಂಕ್ಷಿಯಲ್ಲ…ನೂತನ ಶಾಸಕ ಹರೀಶ್ ಗೌಡ…

ಮೈಸೂರು,ಮೇ26,Tv10 ಕನ್ನಡ
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ
ಮೈಸೂರು ಜಿಲ್ಲೆಯ ಮೂವರು ಹಿರಿಯ ಶಾಸಕರಿಗೆ ಸಚಿವ ಸ್ಥಾನ ಕೊಡಬೇಕು ಎಂಬುದು ನನ್ನ ಆಗ್ರಹ ಎಂದು
ಮೈಸೂರಿನ ಚಾಮರಾಜ ಕ್ಷೇತ್ರದಿಂದ ಆಯ್ಕೆಯಾದ ಶಾಸಕ ಹರೀಶ್ ಗೌಡ ಹೇಳಿಕೆ ನೀಡಿದ್ದಾರೆ.
ಶಾಸಕರಾಗಿರುವ ಮಹದೇವಪ್ಪ, ತನ್ವೀರ್ ಸೇಠ್, ವೆಂಕಟೇಶ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ನಾಯಕತ್ವ ಬದಲಾವಣೆ ವಿಚಾರ ಅಧಿಕಾರ ಹಂಚಿಕೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ.
ಹೈಕಮಾಂಡ್ ಮಟ್ಟದಲ್ಲಿ ಏನು ಮಾತುಕತೆ ನಡೆದಿದೆ ಎಂಬುದು ನನಗೆ ಗೊತ್ತಿಲ್ಲ.ಮುಂದಿನ ಇಪ್ಪತ್ತು ವರ್ಷ ಕಾಲ ನಮ್ಮ ಪಕ್ಷದ ಸರ್ಕಾರವೇ ಇರುತ್ತದೆ.
ಗ್ಯಾರಂಟಿ ಯೋಜನೆಗಳನ್ನು ಖಂಡಿತವಾಗಿಯೂ ಜಾರಿಗೊಳಿಸುತ್ತೇವೆ.
ನಮ್ಮಲ್ಲಿ ಸಿದ್ಧರಾಮಯ್ಯ, ಡಿ ಕೆ ಶಿವಕುಮಾರ್ ಬಣ ಅಂತ ಏನು ಇಲ್ಲ
ನಮ್ಮದೇನಿದ್ಧರೂ ಕಾಂಗ್ರೆಸ್ ಪಕ್ಷದ ಬಣ ಎಂದು ಸ್ಪಷ್ಟಪಡಿಸಿದ್ದಾರೆ…