ಗಣಪತಿ ಶ್ರೀಗಳ ಜನ್ಮದಿನೋತ್ಸವ…ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಭಾಗಿ…

ಗಣಪತಿ ಶ್ರೀಗಳ ಜನ್ಮದಿನೋತ್ಸವ…ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಭಾಗಿ…

ಮೈಸೂರು,ಜೂ4,Tv10 ಕನ್ನಡ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 81 ಜನ್ಮದಿನೋತ್ಸವ ಕಾರ್ಯಕ್ರಮ ಇಂದು ಆಶ್ರಮದಲ್ಲಿ ಅದ್ದೂರಿಯಾಗಿ ನೆರವೇರಿತು.ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ನಂತರ ಮಾತನಾಡಿ ಶ್ರೀಗಳ ಜೀವನ ಇತಿಹಾಸದ ಪುಟಗಳಲ್ಲಿ ಬರೆದಿಡುವಂತದ್ದು, ಅವರ ಜನಪರ ಕಾರ್ಯಗಳಿಗೆ ನಾನು ಸಂಪೂರ್ಣ ಸಹಕಾರ ಕೊಟ್ಟು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು


ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜನರ ಏಳಿಗೆಗಾಗಿ ಪ್ರಜಾಪ್ರಭುತ್ವದ ಸ್ಥಾಪನೆಗಾಗಿ ಐತಿಹಾಸಿಕ ನಿರ್ಧಾರಗಳಿಂದ ಮಾದರಿ ಆಡಳಿತ ನೀಡಿ ಮಾದರಿಯಾಗಿರುವಂತೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಮಹಾನ್ ಮಾನವತಾವಾದಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು. 81ನೇ ವರ್ಷದ ಜನ್ಮ ದಿನೋತ್ಸವದ ಪ್ರಯುಕ್ತ ಆದಿವಾಸಿಗಳು ಮತ್ತು ‌ವಿಕಲಚೇತನರಿಗೆ ಕೊಡುಗೆಗಳನ್ನು ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು


ಆದಿವಾಸಿ ಮಕ್ಕಳಿಗೆ ಶಾಲಾ ವಾಹನ ನೀಡುವುದು, ಅಲ್ಪಸಂಖ್ಯಾತರಿಗೆ,ವಿಕಲಚೇತನರಿಗೆ ಸಹಾಯ ಹಸ್ತ ನೀಡಿ, ಸಮಾಜಮುಖಿ ಕೆಲಸ ಮಾಡುವ ಮೂಲಕ‌ ಪೂಜಾ ಸ್ವಾಮೀಜಿಯವರು ತಮ್ಮ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ ಎಂದು ನುಡಿದರು.ಶೋಷಿತ ಸಮುದಾಯದವರಿಗೆ, ನಿರ್ಗತಿಕರಿಗೆ, ಬಡವರಿಗೆ, ಮಹಿಳೆಯರಿಗೆ ಮತ್ತು ಎಲ್ಲಾ ಜನರಿಗೆ ಸ್ವಾಮೀಜಿಯವರ ಮಾರ್ಗದರ್ಶನ ಲಭ್ಯವಾಗಲಿ ಹಾರೈಸಿದರು.
ಅವಧೂತ ದತ್ತ ಪೀಠದ ವತಿಯಿಂದ
ಎಚ್ ಡಿ ಕೋಟೆ, ಸೋನಹಳ್ಳಿ, ಮಡಿಲು ಸೇವಾ ಟ್ರಸ್ಟ್ ನವರಿಗೆ ಶಾಲಾ ವಾಹನ ಹಾಗೂ ವಿಕಲಚೇತನರಿಗೆ 80ಕ್ಕೂ ಹೆಚ್ಚು ಉಪಕರಣಗಳನ್ನು ಸಚಿವ‌ ‌ಮಹದೇವಪ್ಪ ವಿತರಿಸಿದರು.
ಇದಕ್ಕೂ ಮೊದಲು ಭಕ್ತರಿಗೆ ಆಶೀರ್ವಚನ ನೀಡಿದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು
ಭಗವದ್ಗೀತೆ ಎಲ್ಲರನ್ನು ರಕ್ಷಣೆ ಮಾಡುವ ಒಂದು ವರ ಎಂದು ಬಣ್ಣಿಸಿದರು.ಭೂಕಂಪ ಸೇರಿದಂತೆ ಯಾವುದೇ ಅವಗಡಗಳಿಂದ ಭಗವದ್ಗೀತೆ ನಮ್ಮನ್ನು ರಕ್ಷಣೆ ಮಾಡುತ್ತದೆ, ಭಗವದ್ಗೀತೆಯನ್ನು ಕಂಠಪಾಠ ಮಾಡುತ್ತಿದ್ದರೆ ಮನಸ್ಸು ಪವಿತ್ರವಾಗುತ್ತದೆ, ಪ್ರತಿದಿನ ಗೀತೆಯ ಒಂದು ಅಧ್ಯಾಯ ಓದಿದರೆ ಒಳಿತಾಗಲಿದೆ ಎಂದು ‌ಸಲಹೆ ನೀಡಿದರು.ಪ್ರತಿದಿನ ಭಗವಂತನ ಸ್ಮರಣೆಗೆ ಸ್ವಲ್ಪವಾದರೂ ಸಮಯ ಮೀಸಲಿಡಿ ಎಂದು ಶ್ರೀಗಳು ತಿಳಿಸಿದರು.ಇದೇ ವೇಳೆ ಭಗವದ್ಗೀತೆ 700 ಲೋಕಗಳನ್ನು ಕಂಠಪಾಠ ಮಾಡಿದವರಿಗೆ ಚಿನ್ನದ ಪದಕವನ್ನು ಸ್ವಾಮೀಜಿ ವಿತರಣೆ ಮಾಡಿದರು. ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು…

Spread the love

Related post

ಆರ್.ಟಿ.ಐ.ಮಾಹಿತಿ ಪತ್ರಿಕೆ ಅಸ್ತಿತ್ವಕ್ಕೆ…ಭಾಷ್ಯಂ ಸ್ವಾಮೀಜಿ ರವರಿಂದ ಬಿಡುಗಡೆ…

ಆರ್.ಟಿ.ಐ.ಮಾಹಿತಿ ಪತ್ರಿಕೆ ಅಸ್ತಿತ್ವಕ್ಕೆ…ಭಾಷ್ಯಂ ಸ್ವಾಮೀಜಿ ರವರಿಂದ ಬಿಡುಗಡೆ…

ಮೈಸೂರು,ಜು7,Tv10 ಕನ್ನಡ ಮೈಸೂರಿನ ಯೋಗನರಸಿಂಹ ಸ್ವಾಮಿ ದೇವಾಲಯದಲ್ಲಿ ಇಂದು ಆರ್.ಟಿ.ಐ.ಮಾಹಿತಿ ಪತ್ರಿಕೆ ಬಿಡುಗಡೆ ಮಾಡಲಾಯಿತು.ದೇವಾಲಯದ ಸಂಸ್ಥಾಪಕರಾದ ಪ್ರೊ.ಭಾಷ್ಯಂ ಸ್ವಾಮೀಜಿ ರವರು ಬಿಡುಗಡೆ ಮಾಡಿದರು.ಈ ವೇಳೆ ದೇವಸ್ಥಾನದ ಆಡಳಿತಾಧಿಕಾರಿ ಶ್ರೀನಿವಾಸ್…
ಮಹಿಳೆ ಬಗ್ಗೆ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್…ಅಪ್ ಲೋಡ್ ಮಾಡಿದ ಮಹಿಳೆ ಮೇಲೆ FIR…

ಮಹಿಳೆ ಬಗ್ಗೆ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್…ಅಪ್ ಲೋಡ್ ಮಾಡಿದ…

ಮೈಸೂರು,ಜು6,Tv10 ಕನ್ನಡ ಖಾಸಗಿ ಕಂಪನಿ ಉದ್ಯೋಗಿ ಬಗ್ಗೆ ಅಸಭ್ಯ ಹಾಗೂ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಹಿಳೆಯೊಬ್ಬರ ಮೇಲೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕ್ರಾಪಿನ್ ಕಂಪನಿಗೆ ಸೇರಿದ…
ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ…

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ…

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ… ಮೈಸೂರು,ಜು6,Tv10 ಕನ್ನಡ ಹುಚ್ಚುನಾಯಿ ಕಡಿತದಿಂದ ಮೃತಪಟ್ಟ ಮಹಾಲಿಂಗೇಶ್ವರ ದೇವಸ್ಥಾನದ ಬಸವನಿಗೆ ಮೇಟಗಳ್ಳಿ ಗ್ರಾಮಸ್ಥರು ಶ್ರದ್ದಾಂಜಲಿ ಅರ್ಪಿಸಿದ್ದಾರೆ.ಕೆಲವು…

Leave a Reply

Your email address will not be published. Required fields are marked *