ಲೋಕಾಯುಕ್ತ ಬಲೆಗೆ ಪಾಂಡವಪುರ ತಹಸೀಲ್ದಾರ್ ಸೌಮ್ಯ…40 ಸಾವಿರ ಲಂಚ ಪಡೆಯವ ವೇಳೆ ದಾಳಿ…
- TV10 Kannada Exclusive
- June 22, 2023
- No Comment
- 113

ಲೋಕಾಯುಕ್ತ ಬಲೆಗೆ ಪಾಂಡವಪುರ ತಹಸೀಲ್ದಾರ್ ಸೌಮ್ಯ…40 ಸಾವಿರ ಲಂಚ ಪಡೆಯವ ವೇಳೆ ದಾಳಿ…

ಮಂಡ್ಯ,ಜೂ22,Tv10 ಕನ್ನಡ
ವಿಎ ವರ್ಗಾವಣೆಗೆ 40 ಸಾವಿರ ಲಂಚ ಪಡೆಯುವ ವೇಳೆ ತಹಸೀಲ್ದಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ತಹಶೀಲ್ದಾರ್
ಕೆ.ಸಿ.ಸೌಮ್ಯ ಲೋಕಾಯುಕ್ತ ಬಲೆಗೆ ಬಿದ್ದವರು ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಕಚೇರಿಯಲ್ಲೇ ಲಂಚ ಪಡೆಯುವ ವೇಳೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ.
ವಿಎ ಮರಿಸ್ವಾಮಿ ಎಂಬುವರ ವರ್ಗಾವಣೆಗೆ 40 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ವಿಎ ಮರಿಸ್ವಾಮಿ ಅವರಿಂದ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಈ ಬಗ್ಗೆ ಜೂನ್ 21 ರಂದು ಲೋಕಾಯುಕ್ತಕ್ಕೆ ಮರಿಸ್ವಾಮಿ ದೂರು ನೀಡಿದ್ದರು.ಲೋಕಾಯುಕ್ತ ಇನ್ಸ್ಪೆಕ್ಟರ್ ಬ್ಯಾಟರಾಯಿಗೌಡ, ಮೋಹನ್ ರೆಡ್ಡಿ, ಪ್ರಕಾಶ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ…