ಡಾ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಜಿಪಂ ಸಿಇಓ ಭೇಟಿ… ಮೂಲಭೂತ ಸೌಕರ್ಯಗಳ ಪರಿಶೀಲನೆ…

ಡಾ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಜಿಪಂ ಸಿಇಓ ಭೇಟಿ… ಮೂಲಭೂತ ಸೌಕರ್ಯಗಳ ಪರಿಶೀಲನೆ…

ಮೈಸೂರು,ಜೂ24,Tv10 ಕನ್ನಡ
ಮೈಸೂರಿನ ಗಾಂಧಿನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ ಎಮ್ ಗಾಯತ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುಮಾರು ಒಂದುವರೆ ಗಂಟೆಗೂ ಹೆಚ್ಚು ಕಾಲ ಮಕ್ಕಳೊಡನೆ ಬೆರೆತು ಮೂಲಭೂತ ಸೌಕರ್ಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಬಾಡಿಗೆ ಕಟ್ಟಡದಲ್ಲಿ ಸ್ಥಳಾವಕಾಶದ ಕೊರತೆ ಇರುವುದನ್ನು ಗಮನಿಸಿ ಯಾವುದಾದರೂ ದೊಡ್ಡ ಕಟ್ಟಡಕ್ಕೆ ಸ್ಥಳಾಂತರ ಮಾಡುವಂತೆ ಹಾಗೂ ನಗರದ ಹೊರವಲಯದ ಮಂಡಕಳ್ಳಿ ಬಳಿ ದೊರೆತಿರುವ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡುವ ಸಂಬಂಧ ಅನುದಾನ ಬಿಡುಗಡೆಗೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ತಯಾರಿ ಮಾಡುವಂತೆ ಸ್ಥಳದಲ್ಲಿ ಹಾಜರಿದ್ದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಂಗೇಗೌಡರವರಿಗೆ ಸೂಚಿಸಿದರು.

ಪರಿಶಿಷ್ಟ ಜಾತಿ ಅಲೆಮಾರಿ ಜನಾಂಗಕ್ಕೆ ಸೇರಿದ ತಂದೆ ತಾಯಿಗಳ ಮಕ್ಕಳೇ ಅತಿ ಹೆಚ್ಚು ಇರುವ ವಸತಿ ಶಾಲೆಗೆ ಹೆಚ್ಚಿನ ಮೂಲಭೂತ ಸೌಕರ್ಯ ಬೇಕಾಗಿದೆ ಎಂಬುದನ್ನು ಮನಗಂಡು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸುಮಾರು ಒಂದುವರೆ ಗಂಟೆಗೂ ಹೆಚ್ಚು ಕಾಲ ಮಕ್ಕಳ ಕುಟುಂಬದ ಪೂರ್ವಪರ ವಿಚಾರಿಸಿ ಮಕ್ಕಳಿಗೆ ಬುದ್ಧಿ ಮಾತು ಹೇಳಿ ಅವರಿಗೆ ಸಿಹಿ ತಿಂಡಿ ನೀಡಿದರು.
ಇಲ್ಲಿನ ಮಕ್ಕಳ ತಂದೆತಾಯಿಗಳು, ಮಕ್ಕಳನ್ನು ಶಿಕ್ಷಣ ಪಡೆಯುವ ಉದ್ದೇಶದಿಂದ ಶಾಲೆಯಲ್ಲಿ ಬಿಟ್ಟು ಬೇರೆ ಬೇರೆ ನಗರಗಳು ಹಳ್ಳಿಗಳಿಗೆ ಕೂಲಿಕೆಲಸ, ವ್ಯಾಪಾರ ವ್ಯವಹಾರ ಮಾಡಲು ಹೊರಗಡೆ ಹೋಗಿರುತ್ತಾರೆ.ಆದ್ದರಿಂದ ಇಂತಹ ಮಕ್ಕಳ ಯೋಗ ಕ್ಷೇಮ ಸರಿಯಾಗಿ ನೋಡಿಕೊಳ್ಳಬೇಕು ಎಂದು ವಾರ್ಡನ್ ರವರಿಗೆ ಸೂಚಿಸಿದರು.
ಇಂತಹ ಶಾಲೆಗಳ ಅವಶ್ಯಕತೆ ಇರುವುದನ್ನು ಮನಗಂಡು ಮತ್ತೊಂದು ಶಾಲೆಯ ಪ್ರಾರಂಭ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು ಹಾಗೂ ಈ ಶಾಲೆಗೆ ಅಗತ್ಯವಾಗಿ ಬೇಕಾಗಿರುವ ಹೆಚ್ಚುವರಿ ವಸ್ತುಗಳನ್ನು ಪಟ್ಟಿ ಮಾಡಿ ಕೊಡಲು ಸೂಚಿಸಿದರು…

Spread the love

Related post

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ…

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ……

ಸಾರ್ವಜನಿಕರ ಆಶ್ರಯ ತಾಣವಾದ ಕಸದ ರಾಶಿ ಸ್ಥಳ…ಪಾಲಿಕೆ ಅಧಿಕಾರಿಗಳ ಉತ್ತಮ ಕಾರ್ಯ… GVP ಯೋಜನೆ ಸಾರ್ಥಕ… ಮೈಸೂರು,ಆ30,Tv10 ಕನ್ನಡ ಮೈಸೂರು ಮಹಾನಗರ ಪಾಲಿಕೆಯ ಗಾರ್ಬೇಜ್ ಮುಕ್ತ ಪಾಯಿಂಟ್ ಯೋಜನೆ…
ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು…

ಕೊಲೆ ಯತ್ನ ಆರೋಪಿಗೆ 10 ವರ್ಷ ಜೈಲು ಶಿಕ್ಷೆ…50 ಸಾವಿರ ದಂಡ…ಮೈಸೂರು ನ್ಯಾಯಾಲಯ ತೀರ್ಪು… ಮೈಸೂರು,ಆ20,Tv10 ಕನ್ನಡ ಹಳೇ ದ್ವೇಷದ ಹಿನ್ನಲೆ ನಡೆದ ಗಲಾಟೆಯಲ್ಲಿ ಕಾರಿನ ಬ್ಯಾನೆಟ್ ಮೇಲೆ…
50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ…

50-50 ಅನುಪಾತ ಬದಲಿ ನಿವೇಶನ ಹಂಚಿಕೆ ಮಾಡುವ ಆದೇಶ ರದ್ದು…ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ… ಮೈಸೂರು,ಆ19,Tv10 ಕನ್ನಡ 14-03-2023 ರ ನಿರ್ದೇಶನ ಉಲ್ಲಂಘಿಸಿ 50-50 ಅನುಪಾತದಡಿ ಹಂಚಿಕೆ ಮಾಡಿರುವ…

Leave a Reply

Your email address will not be published. Required fields are marked *