ಮಳೆಗಾಗಿ ಮಕ್ಕಳ ಮದುವೆ…ಹುಡುಗನಿಗೆ ಹೆಣ್ಣು ವೇಷ ಧರಿಸಿ ವಿವಾಹ…ಕೆ.ಆರ್.ಪೇಟೆಯಲ್ಲೊಂದು ಸಂಪ್ರದಾಯ…
- TV10 Kannada Exclusive
- June 24, 2023
- No Comment
- 129

ಮಳೆಗಾಗಿ ಮಕ್ಕಳ ಮದುವೆ…ಹುಡುಗನಿಗೆ ಹೆಣ್ಣು ವೇಷ ಧರಿಸಿ ವಿವಾಹ…ಕೆ.ಆರ್.ಪೇಟೆಯಲ್ಲೊಂದು ಸಂಪ್ರದಾಯ…

ಮಂಡ್ಯ,ಜೂ24,Tv10 ಕನ್ನಡ
ರಾಜ್ಯದ ಕೆಲವೆಡೆ ಪ್ರಸಕ್ತ ಸಾಲಿನಲ್ಲಿ ಮಳೆ ಕೈ ಕೊಟ್ಟಿದೆ.ಮಳೆಗಾಗಿ ಜನ ವಿಶೇಷ ಸಂಪ್ರದಾಯಗಳಿಗೆ ಮೊರೆ ಹೋಗಿದ್ದಾರೆ.
ಮಳೆಗಾಗಿ ಮಂಡ್ಯದ ಕೆ.ಆರ್.ಪೇಟೆಯ ಗಂಗನಹಳ್ಳಿಯಲ್ಲಿ ವಿಚಿತ್ರ ಸಂಪ್ರದಾಯ ಆಚರಿಸಲಾಗಿದೆ.ರಾತ್ರಿ ವೇಳೆ ಮಕ್ಕಳ ಮದುವೆ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥಿಸಲಾಗಿದೆ.
ಎರಡು ಗಂಡು ಮಕ್ಕಳಲ್ಲಿ ಒಂದು ಗಂಡು ಮಗುವಿಗೆ ಹೆಣ್ಣಿನ ವೇಷ ಧರಿಸಿ ಮದುವೆ ಮಾಡಲಾಗಿದೆ.
ಮದುವೆಯ ಬಳಿಕ ಗ್ರಾಮದ ನಿವಾಸಿಗಳಿಗೆ ಭೋಜನ ವ್ಯವಸ್ಥೆಯನ್ನೂ ಸಹ ಮಾಡಲಾಗಿದೆ.ಇಂತಹ ಆಚರಣೆಯಿಂದ ಮಳೆ ಬರುತ್ತದೆ ಎಂಬ ನಂಬಿಕೆ ಗಂಗನಹಳ್ಳಿ ಗ್ರಾಮಸ್ಥರಲ್ಲಿದೆ…