ಗುಂಡು ಪಾರ್ಟಿಯಲ್ಲಿ ಕಿರಿಕ್…ಸ್ನೇಹಿತರಿಂದಲೇ ರೌಡಿಶೀಟರ್ ಹತ್ಯೆ…
- Crime
- June 29, 2023
- No Comment
- 227
ಗುಂಡು ಪಾರ್ಟಿಯಲ್ಲಿ ಕಿರಿಕ್…ಸ್ನೇಹಿತರಿಂದಲೇ ರೌಡಿಶೀಟರ್ ಹತ್ಯೆ…
ಮಂಡ್ಯ,ಜೂ29,Tv10 ಕನ್ನಡ
ಎಣ್ಣೆ ಪಾರ್ಟಿಯಲ್ಲಿ ಸ್ನೇಹಿತರೊಂದಿಗೆ ಕಿರಿಕ್ ಮಾಡಿಕೊಂಡ ರೌಡಿಶೀಟರ್ ಭೀಕರವಾಗಿ ಕೊಲೆಯಾದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಹುಲಿಕೆರೆ ಗ್ರಾಮದಲ್ಲಿ ನಡೆದಿದೆ.ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿರುವ ಸುಧೀರ್ ಕೊಲೆಯಾದ ದುರ್ದೈವಿ.ಗುಂಡು ಪಾರ್ಟಿಯಲ್ಲಿದ್ದ ಸ್ನೇಹಿತರೇ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.ಎಣ್ಣೆ ಪಾರ್ಟಿಯಲ್ಲಿ ಗಲಾಟೆ ಆಗಿದೆ.ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರೊಂದಿಗೆ ಸುಧೀರ್ ಗಲಾಟೆ ಮಾಡಿಕೊಂಡಿದ್ದಾನೆ
ಬಳಿಕ ಪಾರ್ಟಿಯಿಂದ ಸುಧೀರ್ ಹೊರನಡೆದಿದ್ದಾನೆ.
ಹುಲಿಕೆರೆಯ ರಸ್ತೆಯ ಬಳಿ ನಿಂತಿದ್ದ ಸುಧೀರ್ ಮೇಲೆ ಅಟ್ಯಾಕ್ ಮಾಡಿದ ಸ್ನೇಹಿತರು ಕುತ್ತಿಗೆ ಕತ್ತರಿಸಿದ್ದಾರೆ.
ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಕೆ.ಆರ್.ಎಸ್. ಠಾಣಾ ಪೊಲೀಸರು ಜಾಲ ಬೀಸಿದ್ದಾರೆ…