ಅಕ್ರಮ ವಿದ್ಯುತ್ ಸಂಪರ್ಕ ಸ್ಪರ್ಷಿಸಿ ಗಂಡಾನೆ ಸಾವು…ಆರೋಪಿ ಎಸ್ಕೇಪ್…
- CrimeMysore
- June 29, 2023
- No Comment
- 101
ಅಕ್ರಮ ವಿದ್ಯುತ್ ಸಂಪರ್ಕ ಸ್ಪರ್ಷಿಸಿ ಗಂಡಾನೆ ಸಾವು…ಆರೋಪಿ ಎಸ್ಕೇಪ್…
ಹುಣಸೂರು,ಜೂ29,Tv10 ಕನ್ನಡ
ವಿದ್ಯುತ್ ಸ್ಪರ್ಶಿಸಿ ಗಂಡಾನೆ ಸಾವನ್ನಪ್ಪಿದ ಘಟನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಡಿ.ಬಿ.ಕುಪ್ಪೆ ವನ್ಯಜೀವಿ ವಲಯದಲ್ಲಿ ನಡೆದಿದೆ.ಜಮೀನಿಗೆ ಅಳವಡಿಸಲಾದ ಸೋಲಾರ್ ಬೇಲಿಗೆ ಅಕ್ರಮ ವಿದ್ಯುತ್ ಸಂಪರ್ಕ ನೀಡಿದ್ದ ಹಿನ್ನಲೆ ಸ್ಪರ್ಶಿಸಿದ ಆನೆ ಸಾವನ್ನಪ್ಪಿದೆ.ಉದಯ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಘಟನೆ ನಡೆದಿದೆ.ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳಾದ ಹರ್ಷಕುಮಾರ್ ಚಿಕ್ಕನರಗುಂದ,ರಂಗಸ್ವಾಮಿ,ಮಧು ಚೆಸ್ಕಾಂ ಅಧಿಕಾರಿಗಳಾದ ದೀಪಕ್ ಅಂತರಸಂತೆ ಇನ್ಸ್ಪೆಕ್ಟರ್ ಲಕ್ಷ್ಮೀಕಾಂತ್,ಪಶುವೈಧ್ಯಾಧಿಕಾರಿ ಡಾ.ರಮೇಶ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಕ್ರಮ ವಿದ್ಯುತ್ ಸಂಪರ್ಕ ಒದಗಿಸಿದ್ದ ಆರೋಪಿ ಉದಯ್ ತಲೆ ಮರೆಸಿಕೊಂಡಿದ್ದಾರೆ.ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…