ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥಶ್ರೀಪಾದಂಗಳವರ 36ನೇ ಚಾತುರ್ಮಾಸ್ಯ ಮೈಸೂರಿನಲ್ಲಿ…ಜುಲೈ 2 ರಿಂದ ಸೆಪ್ಟೆಂಬರ್ 29 ರವರಿಗೆ ಕಾರ್ಯಕ್ರಮ…

ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥಶ್ರೀಪಾದಂಗಳವರ 36ನೇ ಚಾತುರ್ಮಾಸ್ಯ ಮೈಸೂರಿನಲ್ಲಿ…ಜುಲೈ 2 ರಿಂದ ಸೆಪ್ಟೆಂಬರ್ 29 ರವರಿಗೆ ಕಾರ್ಯಕ್ರಮ…

ಮೈಸೂರು,ಜೂ30,Tv10 ಕನ್ನಡ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಪ್ರತೀ ವರ್ಷವೂ ಪಾಲನೆ ಮಾಡಿಕೊಂಡು ಬರುತ್ತಿರುವ ಚಾತುರ್ಮಾಸ್ಯ ವ್ರತವನ್ನು ಈ ಬಾರಿ ಮೈಸೂರು ನಗರದಲ್ಲಿ ನಡೆಸಲು ಉದ್ದೇಶಿಸಿದ್ದಾರೆಂದು ಶ್ರೀಕೃಷ್ಣ ಟ್ರಸ್ಟ್ ಚಾತುರ್ಮಾಸ್ಯಸಮಿತಿ ಅಧ್ಯಕ್ಷ ವಾಸುದೇವ್ ಭಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜುಲೈ 3 ರಿಂದ ಸೆಪ್ಟೆಂಬರ್ 20 ರವರೆಗೆ 90 ದಿನಗಳ ಚಾತುರ್ಮಾಸ್ಯ ವ್ರತವನ್ನು ಸರಸ್ವತಿಪುರಂನ ಶ್ರೀ ಕೃಷ್ಣಧಾಮದಲ್ಲಿ ಕೈಗೊಳ್ಳಲಿದ್ದಾರೆ. ಶ್ರೀಕೃಷ್ಣ, ರಾಮವಿಠಲ ದೇವರ ಪೂಜೆ, ಜಪ, ತಪ ಅನುಷ್ಠಾನಗಳಿಂದ ಮೈಸೂರು ನಗರದ ಭಕ್ತ ಜನತೆಯನ್ನು ಅನುಗ್ರಹಿಸಲಿದ್ದಾರೆ. ತಾ. 02.07.2023 ಭಾನುವಾರ ಸಾಯಂಕಾಲ ಮೈಸೂರು ನಗರಕ್ಕೆ ಆಗಮಿಸಲಿರುವ ಶ್ರೀ ಶ್ರೀಗಳನ್ನು ಸರಸ್ವತಿ ಪುರಂನಲ್ಲಿರುವ ಅಗ್ನಿರಾಮಕ ದಳ ವೃತ್ತದಲ್ಲಿ ಸ್ವಾಗತಿಸಿ ಸಂಜೆ 4 ಗಂಟೆಗೆ ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣಧಾಮಕ್ಕೆ ಸ್ವಾಗತಿಸಲಾಗವುದು. ಈ ಮೆರವಣಿಗೆಯಲ್ಲಿ ಮಂಗಳವಾದ್ಯ, ಚಂಡೆವಾದನ, ಭಕ್ತರಿಂದ ಭಜನೆ, ವೇದಘೋಷ ಮತ್ತು ಕೀಲುಕುದುರೆ, ಡೊಳ್ಳು ಕುಣಿತ, ಕಂಸಾಳೆ ಇತ್ಯಾದಿ ಕಲಾ ಪ್ರಾಕಾರಗಳು ಮೆರಗನ್ನು ನೀಡಲಿವೆ. ಶ್ರೀ ಶ್ರೀಗಳನ್ನು ಶ್ರೀ ಕೃಷ್ಣಧಾಮದಲ್ಲಿ ಸ್ವಾಗತಿಸಿದ ಬಳಿಕ ಶ್ರೀಕೃಷ್ಣ ಸಭಾ ಭವನದಲ್ಲಿ 5 ಗಂಟೆಯಿಂದ ಸ್ವಾಗತ ಸಮಾರಂಭವನ್ನು ಏರ್ಪಡಿಸಲಾಗಿದೆ. ಶ್ರೀ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಈ ಕಾರ್ಯಕ್ರಮವನ್ನು ಮೈಸೂರಿನ ಮಹಾರಜರಾದ ಯದುವೀರಕೃಷ್ಣದತ್ತಚಾಮರಾಜಒಡೆಯರ್ ರವರುಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಲಿದ್ದಾರೆ. ನೂತನವಾಗಿ ಚುನಾಯಿತರಾದ ಕೃಷ್ಣರಾಜಕ್ಷೇತ್ರದ ಶಾಸಕರಾದ ಶ್ರೀ ಟಿ. ಎಸ್, ಶ್ರೀವತ್ಸ ರವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಚಾಮರಾಜಕ್ಷೇತ್ರದ ಶಾಸಕರಾದ ಶ್ರೀ ಕೆ.ಹರೀರಗೌಡರವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮೈಸೂರು ನಗರದ ಗಣ್ಯವ್ಯಕ್ತಿಗಳೆಲ್ಲಾ ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಶ್ರೀಗಳು ಕೃಷ್ಣಧಾಮ ಮಾತ್ರವಲ್ಲದೆ ಜಯಲಕ್ಷ್ಮೀಪುರಂನ ರಾಯರಮಠ, ಉದಯಗಿರಿಯ ಶ್ರೀರಾಮಧಾಮ, ಜೆ.ಪಿ.ನಗರದ ವಿಠಲಧಾಮ, ಅಗ್ರಹಾರದ ಉತ್ತರಾಧಿಮಠ, ಉಡುಪಿ ಶ್ರೀ ಕೃಷ್ಣಮಂದಿರ, ಕೃಷ್ಣಮೂರ್ತಿಪುರಂನ ವ್ಯಾಸರಾಯ ಮಠ, ಚಾಮರಾಜರಸ್ತೆಯ ವೆಂಕಟಾಚಲಧಾಮ, ಟಿ.ಕೆ.ಲೇಔಟ್‌ನ ರಾಯರ ಮಠ ಮುಂತಾದ ಧಾರ್ಮಿಕ ಕೇಂದ್ರಗಳಲ್ಲಿ ಆಸ್ಥಾನ ಪೂಜೆಯನ್ನು ಕೈಗೊಳ್ಳಲಿದ್ದಾರೆ. ಶ್ರೀ ಶ್ರೀಗಳು ತಮ್ಮ 40ನೇ ಪರ್ವದಲ್ಲಿ ನಡೆಸುತ್ತಿರುವ ಈ ಚಾತುರ್ಮಾಸ್ಯ ವ್ರತದಲ್ಲಿ ದೇವರ ಪೂಜೆ, ಪ್ರವಚನಗಳಿಗೆ ಮಾತ್ರ ಸೀಮಿತಗೊಳಿಸದೆ, ಸಾಮಾಜಿಕ ಕಾರ್ಯಕ್ರಮಗಳನ್ನೂ ಕೂಡ ಭಾಗವಹಿಸಲಿದ್ದಾರೆ. ವಿವಿಧ ವಿದ್ಯಾಕೇಂದ್ರಗಳನ್ನು ಸಂದರ್ಶಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ, ದೀನ ದಲಿತರ ಕೇರಿಗಳ ಸಂದರ್ಶನ ಹಾಗೂ ಆಶೀರ್ವಚನ, ಆಸತ್ರೆ, ವೃದ್ಧಾಶ್ರಮ ಇತ್ಯಾದಿಗಳನ್ನು ಸಂದರ್ಶಿಸಿ ಹೆಣ್ಣು ಹಂಪಲು ವಿತರಣೆ ಮುಂತಾದ ಧರ್ಮ ಕಾರ್ಯಗಳನ್ನು ನಡೆಸಲಿದ್ದಾರೆ.

90 ದಿನಗಳ ಪರ್ಯಂತ ನಡೆಯುವ ಈ ಉತ್ಸವದಲ್ಲಿ ಪ್ರತೀದಿನ ಕೃಷ್ಣಧಾಮದಲ್ಲಿ ಸಾಯಂಕಾಲ 5 ರಿಂದ 8.30 ವರೆಗೆ ಭಜನೆ, ವಿದ್ವಾಂಸರಿಂದ ಭಾಗವತ ಪ್ರವಚನ, ಶ್ರೀ ಶ್ರೀಗಳಿಂದ ಸಮಗ್ರ ರಾಮಯಣ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಕೃಷ್ಣಧಾಮದಲ್ಲಿ 90 ದಿನಗಳ ಪರ್ಯಂತ ಪ್ರತೀ ದಿನ ಸಾಯಂಕಾಲ 5.00 ಗಂಟೆಯಿಂದ 8.00 ಗಂಟೆಯವರೆಗೆ ನುರಿತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷದ ವಿತರಣೆಯನ್ನು ಆಯೋಜಿಸಲಾಗಿದೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳಲು ಉತ್ಸುಕರಾದ ಶ್ರೀಗಳಿಂದ ವಿವಿಧ ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿವೆ. ಹೀಗೆ ಈ ಚಾತುರ್ಮಾಸ್ಯ ಕಾಲದಲ್ಲಿ ಪರಮ ಪೂಜ್ಯ ಶ್ರೀ ಗಳಿಂದ ಮೈಸೂರಿನ ಜನತೆಗಾಗಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಕ್ರಮಗಳು ನಡೆಯಲಿವೆ.
ಭಕ್ತಾದಿಗಳು ಚಾತುರ್ಮಾಸ್ಯ ವ್ರತದ ಮಾಹಿತಿಗಳನ್ನು ಪಡೆಯಲು 9448271837/9342183124/9945230501 ಸಂಪರ್ಕಿಸಬಹುದು

ಚಾತುರ್ಮಾಸ್ಯ ಸಮಿತಿಯ ವಿದ್ವತ್ ಸಮಿತಿಯ ಅಧ್ಯಕ್ಷರಾದ ಬೆನಾ ವಿಜೇಂದ್ರ ಚಾರ್ಯ, ಸಮಿತಿಯ ಗೌರವಾಧ್ಯಕ್ಷರು ಆರ್ ವಾಸುದೇವ್ ಭಟ್, ಅಧ್ಯಕ್ಷರು ಎಂ ಕೃಷ್ಣ ದಾಸ್ ಪುರಾಣಿಕ್, ಕಾರ್ಯಧ್ಯಕ್ಷರು ರವಿ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಆರ್ ತಂತ್ರಿ, ಪ್ರಚಾರ ಸಮಿತಿಯ ಉಪಾಧ್ಯಕ್ಷ ವಿಕ್ರಂ ಅಯ್ಯಂಗಾರ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು…

Spread the love

Related post

ಮಹಿಳಾ ಪ್ರಯಾಣಿಕರ ಜೊತೆ ನಿರ್ವಾಹಕನ ಅನುಚಿತ ವರ್ತನೆ…ಮಹಿಳೆಯ ವಿಡಿಯೋ ಚಿತ್ರೀಕರಣ ಆರೋಪ…ಡಿಪೋ ಮ್ಯಾನೇಜರ್ ಗೆ ದೂರು…

ಮಹಿಳಾ ಪ್ರಯಾಣಿಕರ ಜೊತೆ ನಿರ್ವಾಹಕನ ಅನುಚಿತ ವರ್ತನೆ…ಮಹಿಳೆಯ ವಿಡಿಯೋ ಚಿತ್ರೀಕರಣ ಆರೋಪ…ಡಿಪೋ…

ನಂಜನಗೂಡು,ಡಿ21,Tv10 ಕನ್ನಡ ಮಹಿಳಾ ಪ್ರಯಾಣಿಕರೊಂದಿಗೆ ಕೆಎಸ್ ಆರ್ ಟಿಸಿ ಬಸಿ ನಿರ್ವಾಹಕನ ವಿರುದ್ದ ಸಂಘಟಕರು ಡಿಪೋ ಮ್ಯಾನೇಜರ್ ಗೆ ದೂರು ನೀಡಿದ್ದಾರೆ.ನಂಜನಗೂಡಿನಿಂದ ಚಿಕ್ಕಬರಗಿ ಗ್ರಾಮಕ್ಕೆ ತೆರಳುವ ಬಸ್ ಸಂಖ್ಯೆ…
ಸರೋಜಿನಿ ಮಹಿಷಿ ವರದಿ ಶೀಘ್ರ ಅನುಷ್ಠಾನವಾಗಲಿ…87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಆಗ್ರಹ…

ಸರೋಜಿನಿ ಮಹಿಷಿ ವರದಿ ಶೀಘ್ರ ಅನುಷ್ಠಾನವಾಗಲಿ…87ನೇ ಅಖಿಲ ಭಾರತ ಕನ್ನಡ ಸಾಹಿತ್ಯ…

ಮಂಡ್ಯ,ಡಿ20,Tv10 ಕನ್ನಡ ಸಕ್ಕರೆ ನಾಡಿನಲ್ಲಿ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೊಳಗಿದೆ.ಎಲ್ಲೆಲ್ಲೂ ಕನ್ನಡ ಕಂಪು ಪಸರಿಸುತ್ತಿದೆ.ಸಾಹಿತ್ಯ ಸಮ್ಮೇಳನವನ್ನ ಉದ್ಘಾಟಿಸಿ ಮಾತನಾಡಿದ ಅಧ್ಯಕ್ಷರಾದ ಗೊ.ರೂ.ಚೆನ್ನಬಸ್ಸಪ್ಪ ಕನ್ನಡ…
ಭೂಗಳ್ಳರಿಗೆ ಶಾಕ್…25 ಕೋಟಿ ಬೆಲೆ ಬಾಳುವ ಸರ್ಕಾರಿ ಜಮೀನು ವಶಕ್ಕೆ…ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ…

ಭೂಗಳ್ಳರಿಗೆ ಶಾಕ್…25 ಕೋಟಿ ಬೆಲೆ ಬಾಳುವ ಸರ್ಕಾರಿ ಜಮೀನು ವಶಕ್ಕೆ…ತಹಸೀಲ್ದಾರ್ ಮಹೇಶ್…

ಮೈಸೂರು,ಡಿ20,Tv10 ಕನ್ನಡ ನಕಲಿ ದಾಖಲೆ ಸೃಷ್ಟಿಸಿಕೊಂಡು ಸರ್ಕಾರಿ ಜಮೀನು ಕಬಳಿಸಿದ್ದ ಭೂಗಳ್ಳರಿಗೆ ಜಿಲ್ಲಾಡಳಿತ ಬೆಳ್ಳಂಬೆಳಗ್ಗೆ ಶಾಕ್ ನೀಡಿದೆ.25 ಕೋಟಿ ಬೆಲೆ ಬಾಳುವ 5 ಎಕ್ರೆ 20 ಗುಂಟೆ ಜಮೀನನ್ನ…

Leave a Reply

Your email address will not be published. Required fields are marked *