ಸಾರ್ವಜನಿಕರಿಗೆ ಅಭಯ…ಕಿಡಿಗೇಡಿಗಳಿಗೆ ಎಚ್ಚರಿಕೆ ಗಂಟೆ…ನೈಟ್ ಬೀಟ್ ಬಿಗಿಗೊಳಿಸಿದ ಉದಯಗಿರಿ ಠಾಣಾ ಪೊಲೀಸರು…
- TV10 Kannada Exclusive
- July 18, 2023
- No Comment
- 87
ಸಾರ್ವಜನಿಕರಿಗೆ ಅಭಯ…ಕಿಡಿಗೇಡಿಗಳಿಗೆ ಎಚ್ಚರಿಕೆ ಗಂಟೆ…ನೈಟ್ ಬೀಟ್ ಬಿಗಿಗೊಳಿಸಿದ ಉದಯಗಿರಿ ಠಾಣಾ ಪೊಲೀಸರು…
ಮೈಸೂರು,ಜುಲೈ18,Tv10 ಕನ್ನಡ
ರಾತ್ರಿ ವೇಳೆ ಕೈಚಳಕ ನಡೆಸುವ ಕಿಡಿಗೇಡಿಗಳಿಗೆ ಉದಯಗಿರಿ ಠಾಣಾ ಪೊಲೀಸರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.ರಾತ್ರಿ ಗಸ್ತನ್ನ ಬಿಗಿಗೊಳಿಸುವ ಮೂಲಕ ಸಾರ್ವಜನಿಕರಿಗೆ ಅಭಯ ನೀಡಿದ್ದಾರೆ.ಉದಯಗಿರಿಯ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಉದಯಗಿರಿ ಠಾಣಾ ಸಿಬ್ಬಂದಿಗಳಿಗೆ ದೇವರಾಜ ಉಪವಿಭಾಗದ ಎಸಿಪಿ ಶಾಂತಮಲ್ಲಪ್ಪ ರವರು ರಾತ್ರಿ ಗಸ್ತಿನ ಬಗ್ಗೆ ಖಡಕ್ ಸೂಚನೆ ನೀಡಿದ್ದಾರೆ.ತಮ್ಮ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಬಗ್ಗೆ ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದಾರೆ.ಕಿಡಿಗೇಡಿಗಳ ಚಟುವಟಿಕೆಗಳಿಗೆ ಬ್ರೇಕ್ ಹಾಕುವಂತೆ ತಿಳಿಸಿದ್ದಾರೆ.ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ವಶಕ್ಕೆ ಪಡೆದು ತೀವ್ರ ತಪಾಸಣೆಗೆ ಒಳಪಡಿಸುವಂತೆ ತಿಳಿಸಿದ್ದಾರೆ.ಇದುವರೆಗೆ ನೈಟ್ ಬೀಟ್ ಕರ್ತವ್ಯ ನಿಯೋಜನೆ ಕಾರ್ಯ ಠಾಣೆಯಲ್ಲೇ ನಡೆಯುತ್ತಿತ್ತು.ಸೂಕ್ಷ್ಮ ಪ್ರದೇಶಗಳಲ್ಲಿ ಸಿಬ್ಬಂದಿಗಳ ನಿಯೋಜನೆ ಮಾಡುವ ಮೂಲಕ ಸಾರ್ವಜನಿಕರಿಗೆ ಪೊಲೀಸರ ಕಾರ್ಯವೈಖರಿ ಬಗ್ಗೆ ಭರವಸೆ ಹುಟ್ಟಿಸುವ ಕೆಲಸ ಮಾಡಲಾಗುತ್ತಿದ್ದು ಇಂದು ಡಾ.ರಾಜ್ ಕುಮಾರ್ ರಸ್ತೆಯಲ್ಲಿ ರಾತ್ರಿ ಪಾಳಿ ಕೆಲಸ ನಿಯೋಜನೆ ಮಾಡುವ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ.ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಸೂಚನೆ ಮೇರೆಗೆ ರಾತ್ರಿ ಗಸ್ತನ್ನ ಬಿಗಿಗೊಳಿಸಲಾಗಿದೆ.ಈ ವೇಳೆ ಉದಯಗಿರಿ ಠಾಣೆ ನಿರೀಕ್ಷಕರಾದ ರಾಜು,ಸಬ್ ಇನ್ಸ್ಪೆಕ್ಟರ್ ಸುನಿಲ್ ಹಾಜರಿದ್ದರು…