ಕಡಲ ತೀರದಲ್ಲಿ ಅಪರೂಪದ ಆಕರ್ಷಕ ಬಣ್ಣದ ಅರೋಳಿ ಮೀನು ಪತ್ತೆ…
- TV10 Kannada Exclusive
- July 18, 2023
- No Comment
- 85
ಸೂರತ್ಕಲ್,ಜು18,Tv10 ಕನ್ನಡ
ಬಲುಅಪರೂಪ ಹಾಗೂ ಆಕರ್ಷಕ ಬಣ್ಣದಿಂದ ರಚನೆಯಾದ ಆರೋಳಿ ಮೀನು ಪತ್ತೆಯಾಗಿದೆ.
ಸುರತ್ಕಲ್ ಬಳಿ ಗುಡ್ಡೆ ಕೊಪ್ಪಳ ಬೀಚ್ ಬಳಿ ಪತ್ತೆಯಾಗಿದೆ.ಸಂಜೆಯಹೊತ್ತು ನಡೆದುಕೊಂಡು ಹೋಗುವಾಗ ಬಲು ಆಕರ್ಷಣೆಯ ಬಣ್ಣ ಹೊಂದಿದ ಆರೋಳಿ ಮೀನು ಅನುಪಮಾ ಶಿವರಾಂ ರವರ ಗಮನಕ್ಕೆ ಬಂದಿದೆ. ನೋಡಲು ಕನ್ನಡಿ ಹಾವಿನಂತಿದೆ. ಆದರೆ ಆರೋಳಿ ಮೀನು ಹೆಚ್ಚಾಗಿ ಕೆಂಪು ಬಣ್ಣದಿಂದ ಕೂಡಿರುತ್ತದೆ. ಈ ಮೀನು ಬಣ್ಣ ಮಾತ್ರ ಅಪರೂಪವಾಗಿದೆ.ಹೆಚ್ಚಾಗಿ ಮೀನಿನ ಬಗ್ಗೆ ಸ್ಥಳೀಯವಾಗಿ ಮಾಹಿತಿ ಇರುವ ಮಲ್ಪೆಯ ರೋಹಿತ್ ಮೆಂಡನ್ ಕೊಡವೂರು ಅವರು ಮಾಹಿತಿ ಹೇಳುವ ಪ್ರಕಾರ ಸುರತ್ಕಲ್ ಬಳಿ ಇದನ್ನು ತುಳುವಿನಲ್ಲಿ ಮರಂಚಾ ಮೀನು ಅನ್ನುತ್ತಾರೆ.. (ವಿಷದ ಮೀನು ಅನ್ನುತ್ತಾರೆ). ಮಲ್ಪೆ ಬಳಿ ಇದು ಗಾಳಕ್ಕೆ ಅಪರೂಪಕ್ಕೆಸಿಗುತ್ತದೆ. ಕಲ್ಲು ಇರುವ ಪ್ರದೇಶದಲ್ಲಿ ಮಾತ್ರ ಸಿಗುತ್ತದೆ. ಇದರ ಹಲ್ಲು ಹರಿತವಾಗಿರುತ್ತದೆ. ಮತ್ತು ಇದನ್ನು ಯಾರು ಸ್ಥಳೀಯರು ತಿನ್ನುವುದಿಲ್ಲ. ಚೈನಾದವರು ತಿನ್ನುತ್ತಾರೆ. ಎಂದಿದ್ದಾರೆ.ಇದು ಎಲ್ಲರನ್ನ ಆಕರ್ಷಣೆ ಮಾಡುವಂತಹ ಈ ತರಹ ಬಣ್ಣ ಹೊಂದಿದ್ದು ಬಲು ಅಪರೂಪ ಎಂದು ತಿಳಿಸಿದ್ದಾರೆ…